ರಾಷ್ಟ್ರ ಸೇವೆ ನಮ್ಮದಾಗಲಿ: ಬೊಕ್ಕಪಟ್ನ ದಿನೇಶ್ ಕುಲಾಲ್
ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್ ಕೋಡಿಕಲ್ ಇದರ 35ನೇ ವಾರ್ಷಿಕೋತ್ಸವದ ಪ್ರಯುಕ್ತ ಕೋಡಿಕಲ್‌ನ ಅಲಗುಡ್ಡೆ ಎ.ಜೆ ಮೈದಾನದಲ್ಲಿ ಸಾಧಕರಿಗೆ ಸನ್ಮಾನ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತುಳು ನಾಟಕ 'ಕಲ್ಜಿಗದ ಕಾಲಿ ಮಂತ್ರ ದೇವತೆ' ಪ್ರದರ್ಶನ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಕುಲಾಲ ಪ್ರತಿಷ್ಠಾನ ಮಂಗಳೂರಿನ ಟ್ರಸ್ಟಿ ಪತ್ರಕರ್ತ ದಿನೇಶ್ ಕುಲಾಲ್ ಮುಂಬೈ ಯವರು ಮಾತನಾಡಿ ರಾಜ್ಯ ಸರಕಾರ ಗುರುತಿಸುವಂತಹ ಸೇವಾ ಕಾರ್ಯಗಳನ್ನು ವಿಶ್ವಭಾರತಿ ಸಂಸ್ಥೆ ಮಾಡಿದೆ, ಮುಂದಿನ ದಿನಗಳಲ್ಲಿ ರಾಷ್ಟ್ರ ಸೇವೆಯನ್ನು ಮಾಡುವಂಥ ಆಗಬೇಕು. ಸಂಘ ಸಂಸ್ಥೆಗಳು ಸಮಾಜದ, ಗ್ರಾಮದ ಅಭಿವೃದ್ಧಿಗೆ ಪೂರಕವಾಗುವ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಡಾ. ವೈ ಭರತ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಅಲೋಶಿಯಸ್ ಕಾಲೇಜು ಆಸಿಸ್ಟೆಂಟ್ ಪ್ರೊಫೆಸರ್ ಪೋಸ್ಟ್ ಗ್ರಾಚ್ಯುವೆಟ್ ಡಾ| ಜ್ಯೋತಿ ಎನ್. ರಾವ್, ಕಲಾಸಂಗಮ ಮಂಗಳೂರಿನ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಕೊಡಿಯಾಲ್ ಬೈಲ್, ವಿಶ್ವ ಭಾರತೀಯ ಅಧ್ಯಕ್ಷ ಸಂತೋಷ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವಿ ಪ್ರಸಾದ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಜಿ ವೀರ ಯೋಧರಾದ ಸುಬೇದಾರ್ ಉದಯ್ ಶೆಟ್ಟಿ, ಕಿಶೋರ್ ಕುಮಾರ್, ಮತ್ತು ಬೊಕ್ಕಪಟ್ನ ಬೋಳೂರಿನ ಶ್ರೀ ರಾಮಾಂಜನೇಯ ತಾಲೀಮು ಮತ್ತು ವ್ಯಾಯಾಮ ಶಾಲೆಯ ಸಂಸ್ಥಾಪಕ, ಶಿಕ್ಷಕ ಮಾಸ್ಟರ್ ಬಿ ಸೀತಾರಾಮ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಸ್ಥಳಿಯ ಕ್ರೀಡಾಪಟು ಗ್ರೀಷ್ಮಾ ಎನ್. ಶೆಟ್ಟಿ ಗೌರವಿಸಲಾಯಿತು.
ಮಾಜಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ರಾಕೇಶ್ ಶೆಟ್ಟಿ ನಿರೂಪಿಸಿದರು. ಶಿವಪ್ರಸಾದ್ ಶೆಟ್ಟಿ ವಂದಿಸಿದರು.
ಅತಿಥಿ ಗಣ್ಯರಿಗೆ ಮಾಜಿ ಅಧ್ಯಕ್ಷ ರಾಜೇಶ್ ಸಾಲಿಯಾನ್, ಹರೀಶ್ ಕೆ, ದಿನೇಶ್ ಕೋಡಿಕಲ್, ಶೀನ ನಾಯ್ಕ್, ರಾಮಕೃಷ್ಣ, ರಾಜೇಶ್ ಶೆಟ್ಟಿ, ರಾಜೇಶ್ ಕುಡ್ಲ ಗೌರವಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ