ಮಂಗಳೂರು: ಕವಿ ಸಂಘಟಕ ಕಾ.ವೀ. ಕೃಷ್ಣದಾಸ್ ಅವರ 5ನೇ ಕೃತಿ 'ದಿ ಡಿವೋಷನ್' ಇಂಗ್ಲಿಷ್ ಹಾಯ್ಕುಗಳ ಸಂಕಲನವು ಮಾರ್ಚ್ 26ರಂದು ಬೆಳಿಗ್ಗೆ 10 ಗಂಟೆಗೆ ಕೊಂಚಾಡಿಯ ಶಿವಪ್ರಸಾದ್ ಗೋಲ್ಡ್ ವಸತಿ ಸಮುಚ್ಚಯದ ಆವರಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕಾ.ವೀ. ಕೃಷ್ಣದಾಸ್ ಅವರ ಮಗಳು ಭಕ್ತಿ ಕೆ.ದಾಸ್ ತನ್ನ ಮೊದಲನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕವನ ಸಂಕಲನವನ್ನು ಬಿಡುಗಡೆಗೊಳಿಸುವರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಕವಿಗಳು ಮತ್ತು ಲೇಖಕರ ಕ್ಷೇಮಾಭಿವೃದ್ಧಿ ಒಕ್ಕೂಟದ (AIPAWWU) ಮೊದಲ ಕಾರ್ಯಕ್ರಮ ಸಾವಿರ ಕವಿಗಳನ್ನು ಸಂಪರ್ಕಿಸುವ 'ಸಹಸ್ರಬಾಹು' ಸರಣಿಯ ಮೊದಲ ಕಂತಿನ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜನಪ್ರಿಯ ಕವಿ, ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ವಹಿಸುವರು.
ಬಳಿಕ ಜೂನಿಯರ್ ಡಾ.ರಾಜ್ ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಅವರಿಂದ 'ಗಾನ ಮಂಜರಿ' ನಡೆಯಲಿದೆ. ವಿವಿಧ ನೃತ್ಯ ಕಾರ್ಯಕ್ರಮಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ