ಬೆಂಗಳೂರು: ವಚನ ಸಾಹಿತ್ಯ ಎಂದೆಂದಿಗೂ ಸಾರ್ವಕಾಲಿಕ; ಸಾಮಾನ್ಯ ಜನರಿಗೆ ಮಾರ್ಗದರ್ಶಕ ಮತ್ತು ದಾರಿದೀಪ ಎಂದು ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಪ್ರಾಯಪಟ್ಟರು. ನಗರದ ಬಿ.ಎಂಶ್ರೀ.ಪ್ರತಿಷ್ಠಾನದಲ್ಲಿ ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾಸ್ , ಕನ್ನಡ ವಿಭಾಗ ಸಾಹಿತ್ಯ ಸಂಭ್ರಮದ ವತಿಯಿಂದ ಆಯೋಜಿಸಿದ್ದ ವಚನ ಸಂಭ್ರಮ ಮತ್ತು ವಚನ ಗೋಷ್ಟಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇದನ್ನು ಬರೆದವರು ಪಂಡಿತರಲ್ಲ ಸರಳ ನುಡಿ ರೂಪದಲ್ಲಿ ಬರೆದ ವಚನ ಸಮಾಜ ಒಳಿತು ಕೆಡುಕಗಳ ನೀತಿ ಪಾಠದಂತಿದೆ ಎಂದು ತಿಳಿಸಿದರು.
ಸಂಶೋಧಕ ಡಾ.ಎಂ.ಜಿ.ನಾಗರಾಜ್ ಉದ್ಘಾಟಿಸಿದರು. ಶ್ರೀ ಕೃಷ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ರುಕ್ಮಾಂಗದ ನಾಯ್ಡು ಮತ್ತು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ವಿವಿಯ ಉಪಕುಲಪತಿ ಡಾ.ಯೋಗಿ ದೇವರಾಜು ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ವಿಭಾಗದ ಡಾ.ರಾಜಶೇಖರ ರೆಡ್ಡಿ ವೇದಿಕೆಯಲ್ಲಿದ್ದರು, ಪ್ರಾಧ್ಯಾಪಕ ಡಾ.ಆರ್.ವಾದಿರಾಜು ಆಶಯ ನುಡಿಗಳನ್ನಾಡಿದರು. ಪ್ರಾಚೀನ ಮತ್ತು ಆಧುನಿಕ ವಚನ ಗೋಷ್ಠಿಯಲ್ಲಿ ಡಾ.ಹೆಚ್.ಎಸ್. ಭುವನೇಶ್ವರ್ ಅಧ್ಯಕ್ಷತೆಯಲ್ಲಿ ಪ್ರೊ. ಚಂದ್ರಿಕಾ ಪುರಾಣಿಕ ಮತ್ತು ಡಾ.ಲಕ್ಷ್ಮಿ.ಬಿ..ರಾವ್ ವಿಚಾರ ಮಂಡಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ