ಜೀವನದಲ್ಲಿ ನಿಮಗೆ ನೀವೇ ಶಾಶ್ವತ, ಉಳಿದವೆಲ್ಲವೂ ಆ ಕ್ಷಣಕ್ಕೆ ಸೀಮಿತ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಏನಿದು ಮೇಲಿರುವ ಶೀರ್ಷಿಕೆಗೆ ಇದಕ್ಕೂ ಸಂಬಂಧವೇ ಇಲ್ಲಅನ್ನಿಸಬಹುದು.
ಬದಲಾಗುತ್ತಿರುವ ಈ ಜನರ ನಡುವೆ ನಮ್ಮವರು ಯಾರು ಅಂತ ಹುಡುಕುವುದೇ ಕಷ್ಟ. ಅದರಲ್ಲಿ ಶಾಶ್ವತ ಅನ್ನುವ ಪದ ಅದು ಯಾರಿಗೂ ಸಲ್ಲುವುದೇ ಇಲ್ಲ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳುವ ಹಾಗೆ "ಪ್ರಪಂಚದಲ್ಲಿ ಯಾವ ವಸ್ತುವೂ, ಯಾವ ವ್ಯಕ್ತಿಯೂ ಯಾರಿಗೂ, ಯಾರೊಂದಿಗೆಯೂ ಶಾಶ್ವತವಲ್ಲ.
ಕತ್ತಲಲ್ಲಿ ಜೊತೆಯಿರದ ನೆರಳು ಕೂಡ ಅಷ್ಟೇ ಬರಿ ಬೆಳಕಲ್ಲಿ ಮಾತ್ರ ನಮ್ಮ ಜೊತೆಗಿರುತ್ತೆ. ದುಃಖವೆನ್ನುವುದು ಎಲ್ಲರಲ್ಲಿರುವ ಒಂದು ಪರಮ ಸತ್ಯ. ಯಾರೂ ದುಃಖವಿಲ್ಲದೆ ಈ ಜಗತ್ತಿನಲ್ಲಿ ಇಲ್ಲ ಮತ್ತು ದುಃಖವಿಲ್ಲದೆ ಬದುಕುವುದಕ್ಕೂ ಆಗುವುದಿಲ್ಲ. ಹಾಗೆ ಜೀವನದಲ್ಲಿ ಬರುವ ಪ್ರತಿಯೊಂದು ಸುಖ, ದುಃಖ, ನೋವು, ನಲಿವು, ಎಲ್ಲವೂ ಹಾಗೆ ಆ ಕ್ಷಣಕ್ಕೆ ಮಾತ್ರ. ಸಿದ್ದೇಶ್ವರ ಶ್ರೀಗಳು ಹೇಳುವ ಇನ್ನೊಂದು ಮಾತಿನಂತೆ ಪ್ರತಿಯೊಬ್ಬರ ಜೀವನದಲ್ಲಿ ಒಂದೊಂದು ತರಹದ ಕುರ್ಚಿ ಇರುತ್ತದೆ. ಬಹುಶಃ ಪ್ರತಿಯೊಬ್ಬರೂ ಕುಳಿತುಕೊಳ್ಳುವ ಕುರ್ಚಿ ಬೇರೆ ಬೇರೆ ತರಹದಾಗಿರುತ್ತದೆ. ಆದರೆ ಯಾವ ಕುರ್ಚಿಯ ಮೇಲೂ ಯಾರೂ ಶಾಶ್ವತರಲ್ಲ. ಒಂದು ಗಮನದಲ್ಲಿರಬೇಕಾದ ಅಂಶವೆಂದರೆ ಯಾವುದೇ ಪರಿಸ್ಥಿತಿಯಲ್ಲಿಯೂ ನಡೆಯುವ ಘಟನೆಗಳನ್ನು ಸಮನಾಗಿ ಸ್ವೀಕರಿಸಬೇಕು. ಆಗ ಮಾತ್ರ ಜೀವನದಲ್ಲಿರುವ ಪ್ರತಿಯೊಂದು ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಬಯಸಿರುವುದನ್ನು, ಪಡೆದಿರುವುದನ್ನು ಒಂದು ಕ್ಷಣ ಕಾಲ ಹೆಚ್ಚಿಗೆ ನಿಮ್ಮ ಹತ್ತಿರವೇ ಇರಲಿ ಎಂಬ ಆಸೆಯಿದ್ದರೆ ಅದು ನಿಯಂತ್ರಣದಲ್ಲಿರಲಿ. ಕ್ಷಣದ ಸುಖಕ್ಕಾಗಿ ಜೀವನ ಪರ್ಯಂತ ದುಃಖ ಅನುಭವಿಸುವುದೂ ಬೇಡ, ಹಾಗೆ ಕ್ಷಣದ ದುಃಖಕ್ಕಾಗಿ ಜೀವನ ಪರ್ಯಂತದ ಖುಷಿಯನ್ನು ಕಳೆದುಕೊಳ್ಳುವುದೂ ಬೇಡ. ಎಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸುತ್ತದೆ. ಹಾಗೆ ಎಲ್ಲದರ ಅಂತ್ಯಕ್ಕೂ ಕ್ಷಣಮಾತ್ರ.
-ಪ್ರಿಯದರ್ಶಿನಿ. ಆರ್. ಮುಜಗೊಂಡ
ಆಳ್ವಾಸ್ ಕಾಲೇಜು, ಮೂಡುಬಿದರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ