ಉಡುಪಿ: ವಿದ್ಯಾರ್ಥಿಗಳ ಕುರಿತಾಗಿ ನಾವು ಬೆಳಸಿಕೊಂಡ ಸಾಮಾನ್ಯ ಅಭಿಪ್ರಾಯವೆಂದರೆ ಅವರ ಕಲಿಕೆ ಕೇವಲ ಅವರ ಶಿಕ್ಷಣ ಸಂಸ್ಥೆಗಳ ನಾಲ್ಕು ಗೇೂಡೆಗಳ ಒಳಗೆ ಸೀಮಿತ ಅವರ ಕಲಿಕೆ ಅಧ್ಯಯನವೆಂದರೆ ಕೇವಲ ಅಂಕ ಗಳಿಕೆಗೆ ಸೀಮಿತ ಅವರ ಬದುಕೆಂದರೆ ಕೇವಲ ಮನೆ ಶಾಲೆಗೆ ಸೀಮಿತ. ಆದರೆ ಈ ಎಲ್ಲದಕ್ಕೂ ಅಪವಾದವೆನ್ನುವಂತೆ ತಮ್ಮ ಪ್ರತಿದಿನದ ಅಮೂಲ್ಯವಾದ ಎರಡು ಗಂಟೆಗಳನ್ನು ಸುಮಾರು ಎರಡು ವರುಷಗಳ ಕಾಲ ವಲಸೆ ಕಾರ್ಮಿಕರ ಮಕ್ಕಳ ಇಂಗ್ಲಿಷ್ ಭಾಷಾ ಕೌಶಲ್ಯ ಹಾಗೂ ಸಂಹನ ಕಲೆ ಬೆಳೆಸುವುದಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಂಡ ಸಂತೃಪ್ತಿ ಮಣಿಪಾಲ್ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಹ್ಲಾದ ಮಧುಸೂದನ್, ಆರ್ಯಪ್ರಸಾದ, ನಿಧಿ ವರ್ಮ, ಮಾರುತಿ ಮಧು, ಮಹಮ್ಮದ್ ಹಸನ್ ದೀಪಿಕಾ ಶ್ರೀಜಿತ್ ತಂಡದ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ.
ಮಾಧವ ಕೃಪಾ ಶಾಲಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಪ್ರಹ್ಲಾದ್ ಮತ್ತು ಆಯ೯ಪ್ರಸಾದ್ ಇವರು ಸ್ವಯಂ ಪ್ರೇರಣೆಯಿಂದ ತಮ್ಮದೇ ಒಂದು ತಂಡವನ್ನು ರೂಪಿಸಿಕೊಂಡು ಪಡು ಆಲೆವೂರು ಪರಿಸರದಲ್ಲಿ ವಾಸವಾಗಿರುವ ವಲಸೆ ಕಾಮಿ೯ಕರ ಕನ್ನಡ ಮಾಧ್ಯಮದ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಚಿಕ್ಕ ಮಕ್ಕಳನ್ನೆ ಗುರಿಯಾಗಿಟ್ಟು ಕೊಂಡು ಆ ವಿದ್ಯಾರ್ಥಿಗಳಿಗೆ ಸ್ಪೇೂಕನ್ ಇಂಗ್ಲಿಷ್ ಕಲಿಸುವ ಪ್ರಯತ್ನದಲ್ಲಿ ಯಶಸ್ವಿ ಕಂಡಿರುವುದು ನಿಜಕ್ಕೂ ಈ ಪ್ರತಿಭಾವಂತ ವಿದ್ಯಾರ್ಥಿಗಳ ಸಮಾಜ ಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ.
ಈ ವಿದ್ಯಾರ್ಥಿಗಳೇ ಹೇಳುವಂತೆ ಬಡ ಕೂಲಿ ಕಾಮಿ೯ಕರ ಮಕ್ಕಳಿಗೆ ಈ ವಿಶೇಷ ತರಗತಿಗಳನ್ನು ಸಂಜೆಯ ಹೊತ್ತಿನಲ್ಲಿಯೇ ಆ ಚಿಕ್ಕ ವಿದ್ಯಾರ್ಥಿಗಳನ್ನು ಮನವಲಿಸಿ ಆಟದ ಜೊತೆಗೆ ಪಾಠ ನಲಿ ಕಲಿ ಅನ್ನುವ ತರದಲ್ಲಿಯೇ ಇಂಗ್ಲಿಷ್ ಸ್ಪೇೂಕನ್ ಕ್ಲಾಸ್‌ಗಳನ್ನು ಮಾಡ ಬೇಕು. ಇಡೀ ದಿನ ತರಗತಿಯಲ್ಲಿದ್ದ ಚಿಕ್ಕ ಮಕ್ಕಳನ್ನು ಸಂಜೆಯ ಈ ವಿಶೇಷ ತರಗತಿಗಳಿಗೆ ಬರುವಂತೆ ಮಾಡಲು ನಾವು ಆಡುವ ಆಟ ಮಾಡುವ ಪಾಠ ಅವರಿಗೆ ವಿಶೇಷ ಆಕಷ೯ಣೆಯ ತಾಣವಾಗಬೇಕು.
ಸುಮಾರು 50 ಮಂದಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ನಮ್ಮ ಜೊತೆ ಸೇರಿಕೊಂಡು ತಮ್ಮ ಇಂಗ್ಲಿಷ್ ಭಾಷಾ ಮಾತುಗಾರಿಕೆ ಓದುವ ಅಭ್ಯಾಸ ರೂಢಿಸಿಕೊಂಡು ತಮ್ಮ ಪ್ರತಿಭೆಯನ್ನು ಆಂಗ್ಲ ಭಾಷೆಯಲ್ಲಿಯೇ ನೀಡಲು ಇಂದು ಸಮರ್ಥರಾಗಿರುವುದು ನಿಜಕ್ಕೂ ಪ್ರಹ್ಲಾದ್ ಮತ್ತು ಆರ್ಯ ತಂಡದವರ ಪ್ರಯತ್ನಕ್ಕೆ ಸಂದ ಕೀರ್ತಿ ಎಂದೇ ಭಾವಿಸ ಬೇಕು.ಇವರೇ ಹೇಳುವಂತೆ ಈಗ ಇದು ಕೇವಲ ನಮ್ಮಂತಹ ಸಮಾನ ಮನಸ್ಕ ವಿದ್ಯಾರ್ಥಿಗಳ ಪ್ರಯತ್ನದ ಫಲ. ಇನ್ನು ಮುಂದೆ ಸರಕಾರೇತರ ಸಂಸ್ಥೆಯ ತರದಲ್ಲಿ ಬೆಳೆಸಿ ನಮ್ಮ ಕಾರ್ಯ ಕ್ಷೇತ್ರ ವಿಸ್ತರಣೆ ಮಾಡಬೇಕೆಂಬ ಹಂಬಲವೂ ಇದೆ.
ಈ ವಲಸೆ ಕಾರ್ಮಿಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿಯೇ ಹಮ್ಮಿಕೊಂಡ ಪ್ರತಿಭಾ ಸಂಜೆ ಕಾರ್ಯಕ್ರಮ ಮಣಿಪಾಲದಲ್ಲಿ ಇತ್ತೀಚೆಗೆ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ