ಉಡುಪಿ: ಭಾರತೀಯ ಜನತಾ ಪಾರ್ಟಿ,ದ.ಕ.ಜಿಲ್ಲೆ ಆಯೋಜಿಸಿದ ಪ್ರಣಾಳಿಕೆ ಸಲಹಾ ಸಮಿತಿ ಸಭೆ ನಗರದ ಖಾಸಗಿ ಹೋಟೆಲ್ ನಲ್ಲಿ ಆದಿತ್ಯವಾರ ನಡೆಯಿತು.
ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮತ್ತು ಬಂದರು, ಹಡಗು ಮತ್ತು ಜಲ ಮಾರ್ಗಗಳ ರಾಜ್ಯ ಖಾತೆ ಸಚಿವರು, ಶಾಸಕ ವೇದವ್ಯಾಸ ಕಾಮತ್, ಸಿ.ಎ. ಶಾಂತಾರಾಮ ಶೆಟ್ಟಿ, ಬಾಲಕೃಷ್ಣ ಕೊಟ್ಟಾರಿ, ಪ್ರಶಾಂತ್ ಸನಿಲ್, ಉದ್ಯಮಿ ನಿಧಿ ಬಿಲ್ಡರ್, ರವೀಂದ್ರ ಪೈ, ಸಂಜಯ್ ಪ್ರಭು,ಉಪಸ್ಥಿತರಿದ್ದರು.
ಪ್ರಣಾಳಿಕೆ ಸಲಹಾ ಸಭೆಯಲ್ಲಿ ಲೆಕ್ಕ ಪರಿಶೋಧಕ ಎಸ್.ಎಸ್.ನಾಯಕ್ ಮಾತನಾಡಿ, ಮಂಗಳೂರಿನಿಂದ ಗೋವಾಕ್ಕೇ ಕೊಂಕಣ ರೈಲ್ವೆಯ ದ್ವಿಪಥ ಮಾರ್ಗ ನಿರ್ಮಾಣ ಮಾಡಬೇಕು ತುರ್ತಾಗಿ ನಂತೂರು ನಲ್ಲಿ ಫ್ಲೈ ಓವರ್ ನಿರ್ಮಾಣ. ಕೆಐಡಿಬಿ ವ್ಯಾಪ್ತಿಯಲ್ಲಿರುವ ಜೆಸ್ಕೋ ಜಮೀನ ನಲ್ಲಿರುವ ಸಮಸ್ಯೆ ಬಗೆಹರಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿ ಪಚ್ಚನಾಡಿ ಕಸದ ಸಮಸ್ಯೆಯನ್ನು ವೈಜ್ಞಾನಿಕ ರೀತಿಯಲ್ಲಿ ಬಗೆಹರಿಸಲು ವಿನಂತಿದರು.
ವಾಮನ ನಾಯಕ್ ಮಾತನಾಡಿ, ಮಂಗಳೂರು ಬಂದರನ್ನು ಜನೋಪಯೋಗಿ ರೀತಿಯಲ್ಲಿ ಅಭಿವೃದ್ದಿ ಪಡಿಸುವ ಬಗ್ಗೆ ಮಾಹಿತಿ ನೀಡಿದರು.
ದುರ್ಗಾ ರಾಮದಾಸ್ ಕಟೀಲ್ ಮಾತನಾಡಿ, ಹೆದ್ದಾರಿ ರಸ್ತೆಗಳ ಅಭಿವೃದ್ಧಿಗೆ ಮನವಿ ಮಾಡಿ ನಗರದಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸುವಂತೆ, ಜೊತೆಗೆ ಜಿಲ್ಲೆಯಲ್ಲಿ ಟೂರಿಸಂ ಅನ್ನು ಅಭಿವೃದ್ದಿ ಪಡಿಸಬೇಕೆಂದು ಸಹ ಕೇಳಿಕೊಂಡರು.
ಸಭೆಯಲ್ಲಿ ಮಾತನಾಡಿದ ಹಲವು ಮಂದಿ ನಗರದ ರಸ್ತೆಗಳ ಬಗ್ಗೆ, ಬೆಂಗಳೂರು ಮಂಗಳೂರು ರಸ್ತೆಯ ಶಿರಾಡಿಯಲ್ಲಿ ಸುರಂಗ ನಿರ್ಮಾಣ, ನಿರುದ್ಯೋಗ ನಿವಾರಣೆಗೆ ಒತ್ತು ಕೊಡಬೇಕು, ಮೇರೈನ್ ಕಾಲೇಜ್ ತೆರೆಯಲು ಅನುಮತಿ ನೀಡಬೇಕು ಎಂದೆಲ್ಲ ಸಲಹೆ ಸೂಚನೆಗಳನ್ನು ನೀಡಿದರು.ಬೆಂಗಳೂರು ನಗರ ಪ್ರದೇಶ ದಲ್ಲಿರುವಂತೆ ಖಾಸಗಿ ಭಾಗಿತ್ವ ದಲ್ಲಿ ನಗರದ ಹೊರ ಭಾಗದಲ್ಲಿ ರಿಂಗ್ ರೋಡ್, ಫ್ಲೈ ಓವರ್ ನಿರ್ಮಾಣ ಮಾಡಿದರೆ ಘನ ವಾಹನಗಳು ನಗರದ ಒಳಗೆ ಬರದೆ ಹೊರ ಭಾಗದಲ್ಲಿ ಚಲಿಸಿದರೆ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದರು. ಮಂಗಳೂರು ನಲ್ಲಿ ಹಲವು ಕಾಲೇಜ್ ಗಳು ಇದ್ದರೂ ಕಲಿತು ಹೊರ ಬಂದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಯಾವುದೇ ಯೋಜನೆಗಳು ನಿರ್ಮಾಣ ವಾಗಿಲ್ಲ ಎಂದು ಮಾಹಿತಿ ನೀಡಿದರು.
ಬಾಲಕೃಷ್ಣ ಕೊಟ್ಟಾರಿಯವರು ಮಾತನಾಡಿ, ಹುಬ್ಬಳಿಯಿಂದ ಮಂಗಳೂರಿಗೆ ರೈಲ್ವೇ ಮಾರ್ಗ ನಿರ್ಮಾಣದ ಯೋಜನೆ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದು,ಇದರಿಂದ ಉತ್ತರಕರ್ನಾಟಕದ ಭಾಗದ ಕಾರ್ಖಾನೆಗಳ ಸರಕುಗಳು ಕಾರವಾರ ಬಂದರಿಗೆ ಹೋಗಿ ಮಂಗಳೂರು ಬಂದರಿಗೆ ಬರುವ ಪರಿಸ್ಥಿತಿ ನಿರ್ಮಾಣ ವಾಗಿದೆ, ಹಾಗಾಗಿ ತಕ್ಷಣ ಮಂಗಳೂರು ಹುಬ್ಬಳ್ಳಿಯ ರೈಲ್ವೇ ಮಾರ್ಗ ನಿರ್ಮಾಣ ಮಾಡಲು ಮನವಿ ಮಾಡಿದ್ದಾರೆ.
ಉದ್ಯಮಿ ಪ್ರಶಾಂತ್ ಸನಿಲ್ ಮಾತನಾಡುತ್ತಾ, ನಗರ ಬೆಳೆಯಲು ಮಂಗಳೂರು ಬೆಂಗಳೂರು ರಸ್ತೆ ಅಭಿವೃದ್ಧಿ ಕೂಡ ಒಂದು ಸಮಸ್ಯೆ ಆಗಿದೆ.ಹಾಗೆಯೇ ಸರ್ಕಾರ ಮಂಗಳೂರು ಅಂಕೋಲ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು, ಹಾಗೆಯೇ ಸರ್ಕಾರ ದ.ಕ ಜಿಲ್ಲೆಯಲ್ಲಿ ಐಟಿ ಬಿಟಿ ಅಭಿವೃದ್ಧಿಗೆ ಒತ್ತು ನೀಡಬೇಕು.ನಗರದ ಯುವ ಸಮೂಹ ಉದ್ಯೋಗಕ್ಕಾಗಿ ಬೆಂಗಳೂರನ್ನು ಅವಲಂಬಿಸಿದ್ದಾರೆ. ಅದಕ್ಕಾದರೂ ಮಂಗಳೂರು ನಗರದಲ್ಲೂ ಐಟಿ ಬಿಟಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಆಗ್ರಹಿಸಿದರು.
ವಿನ್ಯಾಸ ಅವರು ಮಾತನಾಡುತ್ತಾ, ನಗರದಲ್ಲಿ ಉದ್ಯಮಗಳು ರಾತ್ರಿ 10 ಗಂಟೆ ಬಂದ್ ಆಗುತ್ತಿದ್ದು, ಈ ಬಗ್ಗೆ ಸರಕಾರ ಗಮನಿಸುವಂತೆ ಮನವಿ ಮಾಡಿದ್ದಾರೆ.ಅಂತೆಯೇ ಜಿಲ್ಲೆಯ ದೇವಸ್ಥಾನಗಳು ಗೋಶಾಲೆಯನ್ನು, ಹಿಂದೂ ಭವನಗಳನ್ನು ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.
ಸಂಜಯ ಪ್ರಭು ಮಾತನಾಡಿ, ಸರಕಾರ ನೀಡಿರುವ ಆಯುಷ್ಮಾನ್ ಕಾರ್ಡ್ ಕಡ್ಡಾಯವಾಗಿ ಎಲ್ಲ ಬಗೆಯ ರೋಗಗಳಿಗೆ ಹಾಗೂ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಉಪಯೋಗವಾಗುವಂತೆ ಸರಕಾರ ಆದೇಶ ನೀಡಬೇಕೆಂದು ಮನವಿ ಮಾಡಿದರು.
ಸಾರ್ವಜನಿಕರ ಮಾಹಿತಿಗೆ ಸ್ಪಂದಿಸಿದ ಸಚಿವ ಶ್ರೀಪಾದ ನಾಯಕ್ ರವರು ಮಾತನಾಡಿ, ಕರ್ನಾಟಕದಲ್ಲಿ ನಮ್ಮ ಡಬಲ್ ಇಂಜಿನ್ ಸರ್ಕಾರ ಒಳ್ಳೆ ಕೆಲಸ ಮಾಡಿದೆ. ಜೊತೆಗೆ ಸರ್ಕಾರ ಅನೇಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದನ್ನು ಗಮನಿಸಬಹುದಾಗಿದೆ. ಹಾಗೆ ಕೇಂದ್ರದಲ್ಲಿ ಮೋದಿ ಸಹ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದು 2024ರಲ್ಲಿ ಕೂಡ ಮೋದಿ ಅವರನ್ನು ಜನ ಬಯಸುತ್ತಾರೆ ಎಂದರು. ಸಭೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರದ ಗಮನಕ್ಕೆ ತಂದು ಅವುಗಳನ್ನು ಶೀಘ್ರದಲ್ಲೇ ಬಗೆಹರಿಸುವಲ್ಲಿ ಶ್ರಮ ವಹಿಸುವುದಾಗಿ ಭರವಸೆ ನೀಡಿದರು. ವಿನ್ಯಾಸರವರು ಕಾರ್ಯಕ್ರಮ ನಿರೂಪಿಸಿದರು. ಸಂಜಯ ಪ್ರಭು ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ