ವಿದ್ಯಾದಾನಿ ನೇತ್ರದಾನಿ ಹೈಕಾಡಿಮನೆ ಸಂಜೀವ ಶೆಟ್ಟಿ ಅವರಿಗೆ ನುಡಿನಮನ

Upayuktha
0

ಕುಂದಾಪುರ: ಇತ್ತೀಚೆಗೆ ನಿಧನರಾದ ಶಿರೂರು ಹೈಕಾಡಿಮನೆ ದಿ.ಸಂಜೀವ ಶೆಟ್ಟಿ ಅವರಿಗೆ ನುಡಿ ನಮನ ಸಲ್ಲಿಸುವ ಶ್ರದ್ಧಾಂಜಲಿ ಕಾರ್ಯಕ್ರಮ ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಜರುಗಿತು.


ಕೊಕ್ಕರ್ಣೆ, ಸಿದ್ದಾಪುರ, ಹೊಸ ಅಂಗಡಿ ಸರಕಾರಿ ಪ್ರೌಢಶಾಲೆಗಳಲ್ಲಿ ಮೂರುವರೆ ದಶಕಗಳ ಕಾಲ ಹಿರಿಯ ಶಿಕ್ಷಕರಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿ ಜನ ಮನ್ನಣೆಗೆ ಪಾತ್ರರಾದ ಆದರ್ಶ ಶಿಕ್ಷಕರಾಗಿದ್ದವರು ದಿ. ಸಂಜೀವ ಶೆಟ್ಟಿ ಅವರು. ತಮ್ಮ ಮರಣ ಕಾಲದಲ್ಲಿ ಮಣಿಪಾಲ್ ಕೆಎಂಸಿಗೆ ನೇತ್ರದಾನ ಮಾಡುವುದರ ಮೂಲಕ ಸಮಾಜಕ್ಕೆ ತಮ್ಮ ಆದರ್ಶ ತೇೂರಿದ ವಿದ್ಯಾ ದಾನಿ ನೇತ್ರದಾನಿ ಅನ್ನುವ ಕೀರ್ತಿಗೂ ಭಾಜನರಾಗಿದ್ದಾರೆ ಎಂದು ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ನುಡಿ ನಮನ ಸಲ್ಲಿಸಿ ಮಾತನಾಡಿದರು.


ರಘರಾಮ ಶೆಟ್ಟಿ ಕೆಂಜೂರು ಹಳೆ ವಿದ್ಯಾರ್ಥಿಗಳ ಪರವಾಗಿ ನುಡಿ ನಮನ ಸಲ್ಲಿಸಿ ಮಾತನಾಡಿದರು. ಮೃತರ ಪುತ್ರ ರಂಜಿತ್ ಶೆಟ್ಟಿ ಅಳಿಯ ಸಂದೇಶ ಮಗಳು ರಕ್ಷಾ ಶೆಟ್ಟಿ  ಸೊಸೆ ಪವಿತ್ರ ಶೆಟ್ಟಿ ಅಳಿಯ ವಸಂತ ಶೆಟ್ಟಿ ನಿವೃತ್ತ ಬ್ಯಾಂಕ್ ಅಧಿಕಾರಿ ನುಡಿ ನಮನ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top