ತೆಂಕನಿಡಿಯೂರು ಕಾಲೇಜು: 9 ರ್‍ಯಾಂಕ್, 5 ಚಿನ್ನದ ಪದಕ, 9 ನಗದು ಬಹುಮಾನ

Upayuktha
0

ಉಡುಪಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021-22ನೇ ಸಾಲಿನ ಸ್ನಾತಕೋತ್ತರ ಪರೀಕ್ಷೆಗಳಲ್ಲಿ 8 ರ್‍ಯಾಂಕ್ ಹಾಗೂ ಪದವಿ ವಿಭಾಗದಲ್ಲಿ ಒಂದು ರ್‍ಯಾಂಕ್ ಗಳಿಸಿದೆ.


ಎಂ.ಎ. ಇತಿಹಾಸ ವಿಭಾಗದ ಪ್ರಕಾಶ ಪ್ರಥಮ ರ್‍ಯಾಂಕ್, ಎಂ.ಎ. ಸಮಾಜಶಾಸ್ತ್ರ ವಿಭಾಗದ ರಕ್ಷಿತಾ ಪ್ರಥಮ ರ್‍ಯಾಂಕ್, ಆಂಗ್ಲ ಭಾಷಾ ವಿಭಾಗದ ಕೋಲಿನ್ ಆಂಟೋನಿತಾ ಲೋಬೋ ಪ್ರಥಮ ರ್‍ಯಾಂಕ್ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ರೈನಾ ಡಿಸೋಜ ದ್ವಿತೀಯ ರ್‍ಯಾಂಕ್, ನವ್ಯ ಅಂಚನ್ ಆರನೇ ರ್‍ಯಾಂಕ್, ರೀಮಾ ಸೀಮಾ ಎಂಟನೇ ರ್‍ಯಾಂಕ್, ಅನುಷಾ ಶಂಕರ ನಾಯ್ಕ್ ಒಂಭತ್ತನೇ ರ್‍ಯಾಂಕ್ ಹಾಗೂ ಪ್ರಣೀತ ಹತ್ತನೇ ರ್‍ಯಾಂಕ್ ಗಳಿಸಿರುತ್ತಾರೆ.  ಪದವಿ ವಿಭಾಗ ಪರೀಕ್ಷೆಗಳಲ್ಲಿ ಸಮಾಜಕಾರ್ಯ ವಿಭಾಗದಲ್ಲಿ ದಿವ್ಯಾ ತೃತೀಯ ರ್‍ಯಾಂಕ್ ಪಡೆದಿರುತ್ತಾರೆ.


ಚಿನ್ನದ ಪದಕಗಳು


ಸಮಾಜಶಾಸ್ತ್ರ ವಿಭಾಗದ ರಕ್ಷಿತಾ ಇವರು ಜಯರಾಜ್ ಬಳ್ಳಾಲ್ ಮೆಮೋರಿಯಲ್ ಚಿನ್ನದ ಪದಕ, ಪ್ರೊ. ಜೋಗನ್ ಶಂಕರ್ ಚಿನ್ನದ ಪದಕ, ವಿಮೋಚನಾ ದೇವದಾಸಿ ಪುನರ್ವಸತಿ ಸಂಘ ಅಥಣಿ ಚಿನ್ನದ ಪದಕ ಸೇರಿದಂತೆ ಒಟ್ಟು 3 ಚಿನ್ನದ ಪದಕಗಳು.
ಇತಿಹಾಸ ವಿಭಾಗದ ಪ್ರಕಾಶ ಕೆ. ಇವರು ದಿ. ಡಾ. ಗುರುರಾಜ ಭಟ್ಟ ಚಿನ್ನದ ಪದಕ, ದಿ. ಡಾ. ಪಾದೂರು ಗುರುರಾಜ ಭಟ್ ಸ್ಮಾರಕ ಚಿನ್ನದ ಪದಕ ಒಟ್ಟು 2 ಚಿನ್ನದ ಪದಕಗಳು.


ನಗದು ಬಹುಮಾನ


ಕನ್ನಡ ವಿಭಾಗದ ಸ್ವರ್ಣ ಇವರು ಪೆರುವಾಯ ಸುಬ್ಬಯ್ಯ ಶೆಟ್ಟಿ ಮೆಮೋರಿಯಲ್ ನಗದು ಬಹುಮಾನ ಪಡೆದಿರುತ್ತಾರೆ.
ಆಂಗ್ಲ ಭಾಷಾ ವಿಭಾಗದ ಕೋಲಿನ್ ಆಂಟೋನಿತಾ ಲೋಬೋ ಅವರು ಪದ್ಮನಾಗಪ್ಪ ಶಾಸ್ತ್ರಿ ನಗದು ಬಹುಮಾನ, ಲವ್ಲಿಲಾ ಮತ್ತು ಜೆ.ಬಿ. ಲೋಬೋ ಪ್ರಭು ಸಾಹಿತ್ಯ ನಗದು ಬಹುಮಾನ, ಹಳೆ ವಿದ್ಯಾರ್ಥಿ ನಗದು ಬಹುಮಾನ ಪಡೆದಿರುತ್ತಾರೆ.
ಆಂಗ್ಲ ಭಾಷಾ ವಿಭಾಗದ ರವೀನಾ ಸಿ. ಪೂಜಾರಿ ಇವರು ಶ್ರೀಮತಿ ವಸಂತ ಎಸ್. ಅನಂತ ನಾರಾಯಣ ಮತ್ತು ಪ್ರೊ. ಎಸ್. ಅನಂತ ನಾರಾಯಣ ನಗದು ಬಹುಮಾನ ಪಡೆದಿರುತ್ತಾರೆ.
ಇತಿಹಾಸ ವಿಭಾಗದ ಪ್ರಕಾಶ್ ಕೆ. ಇವರು ಡಾ. ಪಿ. ಗುರುರಾಜ ಭಟ್ಟ ಮೆಮೋರಿಯಲ್ ನಗದು ಬಹುಮಾನ ಹಾಗೂ ಆಬ್ರೆ ಡಿಸೋಜಾ ಚಾರಿಟೇಬಲ್ ಪೌಂಡೇಶನ್ ನಗದು ಬಹುಮಾನ ಪಡೆದಿರುತ್ತಾರೆ.


ಸಾಧನೆಗೈದ ಈ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top