ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರ ರಕ್ಷಣಾ ಪಡೆ ಹಾಗೂ ಮಾಂಡೊವಿ ಮೋಟರ್ಸ್ ಹಂಪನಕಟ್ಟೆ ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮೂರು ಮಂದಿ ಮಹಿಳಾ ಗೃಹ ರಕ್ಷಕಿಯರಿಗೆ ಹಾಗೂ ಇಬ್ಬರು ಪೌರಕಾರ್ಮಿಕರಿಗೆ ಮಾಂಡೋವಿ ಮೋಟರ್ಸ್ ಹಂಪನಕಟ್ಟೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ದ.ಕಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಮಹಿಳೆಯು ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ತಂಗಿಯಾಗಿ, ಮಗಳಾಗಿ, ಸೊಸೆಯಾಗಿ ಪುರುಷರಜೀವನದಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಈ ಸಮಾಜದಲ್ಲಿ ಪುರುಷರು ಮಹಿಳೆಯರು ಸಮಾನರು. ಮಹಿಳೆಯರು ಮನೆಯಲ್ಲೂ ಕೆಲಸ ಮಾಡಿ ಹೊರಗಡೆಯೂ ಕೆಲಸಗಳನ್ನು ಮಾಡುತ್ತಾರೆ. ಮಾನಸಿಕವಾಗಿ ಮಹಿಳೆ ಪುರುಷರಿಗಿಂತಲೂ ಬಲಶಾಲಿ, ಒತ್ತಡದ ಸನ್ನಿವೇಶವನ್ನು ನಿಭಾಯಿಸುವಲ್ಲಿ ಮಹಿಳೆ ಹೆಚ್ಚು ಯಶಸ್ವಿಯಾಗುತ್ತಾಳೆ ಎಂದು ನುಡಿದರು.
ಮಂಗಳೂರು ನಗರದ ಚೀಫ್ ಟ್ರಾಫಿಕ್ ವಾರ್ಡನ್ ಸುರೇಶ್‍ನಾಥ್ ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರುಗೆ ಶುಭಾಶಯ ತಿಳಿಸಿದರು. ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ, ಸ್ವಾಸ್ಥ್ಯ, ಶಿಕ್ಷಣ, ಸ್ವಾವಲಂಬನೆ, ಸಮಾಜಿಕ ನ್ಯಾಯ, ಸಂವೇದನಾ ಶೀಲತೆ ಎಂಬ ಆರು ‘S’ ಸೂತ್ರಗಳ ಮಹತ್ವವನ್ನು ತಿಳಿಸಿ ಅದನ್ನು ಸಿಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಂಡೋವಿ ಮೋಟರ್ಸ್‍ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಶಶಿಧರ ಟಿ. ಕಾರಂತ ಅವರು ಮಹಿಳಾ ದಿನವನ್ನು ಯಾಕಾಗಿ ಆಚರಿಸುತ್ತಾರೆ ಹಾಗೂ ಆಚರಿಸುವ ಉದ್ದೇಶವನ್ನು ಎಲ್ಲಾ ಮಹಿಳೆಯರಿಗೂ ತಿಳಿಸಿದರು. ಇನ್ನೋರ್ವ ಅಧ್ಯಕ್ಷತೆಯನ್ನು ವಹಿಸಿದ ಮಾಂಡೊವಿ ಮೋಟರ್ಸ್‍ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಶ್ರೀ ನೆರೆಂಕಿ ಪಾರ್ಶ್ವನಾಥ್ ಅವರು ಮಹಿಳೆಯರಿಗೆ ಶುಭಾಶಯ ತಿಳಿಸಿ ಮಾತನಾಡಿ, ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಳೋ, ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ವಾಸಿಸುತ್ತಾರೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರೇ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದ ಗೃಹರಕ್ಷಕಿಯರಾದ ಶುಭ ಮೆ.ನಂ 86, ಜಯಲಕ್ಷ್ಮಿ ಮೆ.ನಂ 95, ನತಾಲಿಯ ಮೆ.ನಂ 170 ಹಾಗೂ ಪೌರಕಾರ್ಮಿಕರಾದ ಸುಮಾ, ರತ್ನಾ ಇವರುಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಮಾಂಡೊವಿ ಮೋಟರ್ಸ್‍ನ ಸೇಲ್ಸ್‍ಎಕ್ಸಿಕ್ಯೂಟಿವ್ ಮುರಳೀಧರ್ ಅವರು ನಿರ್ವಹಿಸಿದರು. ಮಾಧವ್ ಉಳ್ಳಾಲ್ ಮತ್ತು ಶ್ರೀಮತಿ ಅನುಪಮಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯ ಅಧೀಕ್ಷಕಿಯಾದ ಶ್ರೀಮತಿ ಕವಿತಾ ಕೆ.ಸಿ., ಪ್ರಥಮ ದರ್ಜೆ ಸಹಾಯಕಿಯಾದ ಶ್ರೀಮತಿ ಅನಿತಾ ಟಿ.ಎಸ್., ಗೃಹರಕ್ಷಕಿಯರಾದ ಮರಿಯಾ ಮೋಲಿ, ಚಂಪಾ, ಸೆಲೆಸ್ಟಿನ್ ಹಾಗೂ ಮಾಂಡೋವಿ ಮೋಟರ್ಸ್‍ನ ಸುಮಾರು 100 ಮಂದಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


