ಮಾ.19: 'ಪೆರ್ಗದ ಸಿರಿ' ಕೃತಿ ಬಿಡುಗಡೆ, 'ತುಲುವೆರೆ ಕಲ' ಉದ್ಘಾಟನೆ

Upayuktha
0

ಮಂಗಳೂರು: ತುಳು ಲಿಪಿ ಶಿಕ್ಷಕಿ, ಲೇಖಕಿ, ಕವಯತ್ರಿ ಶ್ರೀಮತಿ ಗೀತಾ ಲಕ್ಷ್ಮೀಶ್ ಅವರ ಚೊಚ್ಚಲ ತುಳು ಕವನ ಸಂಕಲನ 'ಪೆರ್ಗದ ಸಿರಿ' ಮಾರ್ಚ್ 19ಕ್ಕೆ ಲೋಕಾರ್ಪಣೆ ಹಾಗೂ ಅವರ ಮುಂದಾಳತ್ವದ ಸಂಸ್ಥೆ 'ತುಲುವೆರೆ ಕಲ' ಉದ್ಘಾಟನಾ ಕಾರ್ಯಕ್ರಮವು ಭಾನುವಾರ ಮಂಗಳೂರಿನ ಕೆನರಾ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ.


ಸಮಾರಂಭದ ಅಧ್ಯಕ್ಷತೆಯನ್ನು ಹೆಸರಾಂತ ಹಿರಿಯ ಸಾಹಿತಿಗಳಾದ ಡಾ ವಸಂತ್ ಕುಮಾರ್ ಪೆರ್ಲ ವಹಿಸುವರು. ಎಂಆರ್ ಪಿಎಲ್‌ನ ಪ್ರಶಿಕ್ಷಣ ವಿಭಾಗದ ಮಹಾ ಪ್ರಬಂಧಕಿ ವೀಣಾ ಟಿ. ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸುವರು.


ಖ್ಯಾತ ಜನಪದ ವಿದ್ವಾಂಸರಾದ ಡಾ ಗಣೇಶ್ ಅಮೀನ್ ಸಂಕಮಾರ್ 'ಪೆರ್ಗದ ಸಿರಿ' ತುಳು ಕವನ ಸಂಕಲನವನ್ನು ಲೋಕಾರ್ಪಣೆ ಮಾಡುವರು. ಜನಪ್ರಿಯ ಕವಿ, ಉಪನ್ಯಾಸಕ ರಘು ಇಡ್ಕಿದು ಅವರು 'ತುಲುವೆರೆ ಕಲ' ಸಂಘಟನೆಯನ್ನು ಲಾಂಛನ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸುವರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.


ಇದೇ ವೇಳೆ, ತುಳು ಸಾಹಿತ್ಯ ಸೇವೆಗಾಗಿ ಚೇತನ್ ವರ್ಕಾಡಿ, ಉಮೇಶ್ ಶಿರಿಯಾ, ತುಳು ಆಲ್ಬಮ್ ಕ್ಷೇತ್ರದ ಸಾಧನೆಗಾಗಿ ಲತೀಶ್ ಮಿಜಾರ್, ಅಮರ್‌ನಾಥ್ ಪೂಪಾಡಿಕಲ್ಲು, ಸಮಾಜ ಸೇವೆಗಾಗಿ ಕೆ ಆನಂದ ಶೆಟ್ಟಿ ಮತ್ತು ಅಕ್ಷಿತ್ ಶೆಟ್ಟಿ ಕೆಂಜಾರ್, ತುಳು ಲಿಪಿ ಪ್ರಚಾರಕ್ಕಾಗಿ ವಿನಯ್ ರೈ ಮತ್ತು ಜಗದೀಶ್ ಕಲ್ಕಳ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ತುಳು ಭಾಷಾ ಕವಿಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಜನಪ್ರಿಯ ಸಾಹಿತಿ ವಿಜಯಲಕ್ಷ್ಮೀ ಕಟೀಲು ವಹಿಸುವರು.


ಪ್ರಿಯಾ ಸುಳ್ಯ, ಶ್ವೇತಾ ಕಜೆ, ಚಂದ್ರಹಾಸ ಕುಂಬಾರ, ನಳಿನಿ ಭಾಸ್ಕರ ರೈ, ಶಶಿಕಲಾ  ಬಾಕ್ರಬೈಲ್, ರಕ್ಷಿತ್ ಬಿ. ಕರ್ಕೇರ, ಅಶ್ವಿನಿ ಟಿ. ಕುರ್ನಾಡು, ಸತೀಶ್ ಸಾಲಿಯಾನ್ ನೆಲ್ಲಿಕುಂಜೆ, ಸೂರಿ ಪಳ್ಳಿ, ಅಶೋಕ ಕಡೆಶಿವಾಲಯ, ತೃಪ್ತಿ ಸುರೇಶ್ ಪಳ್ಳಿ, ಕಾ.ವೀ.ಕೃಷ್ಣದಾಸ್, ಆರ್. ಕೆ. ನಿರಂಜನ್, ಡಾ. ಆಶಾಲತಾ ಚೇವಾರ್, ಪದ್ಮನಾಭ ಮಿಜಾರ್, ಭಾಸ್ಕರ್ ವರ್ಕಾಡಿ, ಸೌಮ್ಯ ಆರ್ ಶೆಟ್ಟಿ, ರಂಜಿತ್ ಸಸಿಹಿತ್ಲು, ಉಮೇಶ್ ಶಿರಿಯ, ವಿಶ್ವನಾಥ್ ಕುಲಾಲ್ ಮಿತ್ತೂರು, ಅನುರಾಧ ರಾಜೀವ್, ಚೇತನ್ ವರ್ಕಾಡಿ, ಸುರೇಶ್ ನೆಗಳಗುಳಿ, ಶ್ಯಾಮ್‌ಪ್ರಸಾದ್ ಭಟ್, ಪೂರ್ಣಿಮಾ ಬಂಟ್ವಾಳ, ಚೈತ್ರ ಜೋಗಿ ಕೂಟತ್ತಜೆ, ನವೀನ್ ಚಿಪ್ಪಾರು, ಮಹೇಶ್ ಕಲ್ಲಾಪು, ಬದ್ರುದ್ದೀನ್ ಕೂಳೂರು, ಸುಮಂಗಲಾ ದಿನೇಶ್, ರೂಪ ವಿನಯ್, ಪರಿಮಳ ಮಹೇಶ್ ರಾವ್, ಸಂಧ್ಯಾ ಆಳ್ವ, ದೀಪಾ ಸದಾನಂದ, ಅಮರ್‌ನಾಥ್ ಪೂಪಾಡಿಕಲ್ಲ್ ಮೊದಲಾದವರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top