ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಭಾಗವಹಿಸಲು ಆನ್‌ಲೈನ್‌ ದಾಖಲಾತಿ ಸೌಲಭ್ಯ

Upayuktha
0



ಮಂಗಳೂರು: ಮಾರ್ಚ್‌ 15 ರಂದು ಬೆಳಗ್ಗೆ 11 ಗಂಟೆಗೆ ಮಂಗಳಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 41ನೇ ಘಟಿಕೋತ್ಸವದಲ್ಲಿ ಹಾಜರಿದ್ದು ಪದವಿ ಪಡೆದುಕೊಳ್ಳಲು ಇಚ್ಛಿಸುವ ಪಿ.ಎಚ್‌.ಡಿ ಪದವಿ ಪಡೆಯಲಿರುವ ಅಭ್ಯರ್ಥಿಗಳು, ಬಂಗಾರದ ಪದಕ ವಿಜೇತರು ಹಾಗೂ ನಗದು ಬಹುಮಾನ ವಿಜೇತರು ತಮ್ಮ ಹೆಸರು ಮತ್ತು ವಿವರಗಳನ್ನು http://results1.mangaloreuniversity.in/convocationreg/ (ಮಂಗಳೂರು ವಿವಿಯ ವೆಬ್‌ಸೈಟ್‌ನಲ್ಲಿ ಲಭ್ಯ) ನಲ್ಲಿ ದಾಖಲಿಸಬಹುದು.


ಯಾವುದೇ ಅಭ್ಯರ್ಥಿಗೆ ಹೆಸರು ದಾಖಲಿಸಲು ಸಮಸ್ಯೆಯಾದರೆ 9739867279 ಗೆ ವಾಟ್ಸಪ್‌ ಸಂದೇಶ ಕಳುಹಿಸಬಹುದು. ಘಟಿಕೋತ್ಸವದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಹಾಗೂ ಅವರ ಹೆತ್ತವರು ಪ್ರವೇಶ ಪತ್ರವನ್ನು ಸಾದರಪಡಿಸುವುದು ಕಡ್ಡಾಯವಾಗಿದೆ. ಈ ಮೇಲಿನ ಲಿಂಕ್‌ ಮಾರ್ಚ್‌ 9 (ಬೆಳಗ್ಗೆ 11 ಗಂಟೆ)ರಿಂದ ಮಾರ್ಚ್‌ 13 (ಮಧ್ಯಾಹ್ನ 3 ಗಂಟೆ)ರವರೆಗೆ ಚಾಲ್ತಿಯಲ್ಲಿರಲಿದೆ.


ಘಟಿಕೋತ್ಸವದಲ್ಲಿ ಹಾಜರಿದ್ದು ಪದವಿ ಪ್ರಮಾಣಪತ್ರ ಪಡೆಯಲು ಆನ್‌ಲೈನ್‌ ದಾಖಲಾತಿ ಕಡ್ಡಾಯವಾಗಿದೆ. ಇತರ ಎಲ್ಲಾ ಅರ್ಹ ವಿದ್ಯಾರ್ಥಿಗಳ ಪದವಿ ಪ್ರಮಾಣಪತ್ರವನ್ನು ಆಯಾ ಸ್ನಾತಕೋತ್ತರ ವಿಭಾಗಗಳಿಗೆ ಅಥವಾ ಕಾಲೇಜುಗಳಿಗೆ ಏಪ್ರಿಲ್‌ ಎರಡನೇ ವಾರದೊಳಗೆ ಕಳಿಸಿಕೊಡಲಾಗುವುದು, ಎಂದು ಪರೀಕ್ಷಾಂಗ ಕುಲಸಚಿವರ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top