ಗೃಹಬಳಕೆಯ ಎಲ್ ಪಿಜಿ ದರದಲ್ಲಿ ಭಾರೀ ಏರಿಕೆ: ಇಂದಿನಿಂದಲೇ ಜಾರಿ

Upayuktha
0

ಹೊಸದಿಲ್ಲಿ: ಗೃಹ ಬಳಕೆಯ ಅಡುಗೆ ಅನಿಲ ಬೆಲೆ ಮತ್ತೆ ಹೆಚ್ಚಳವಾಗಿದೆ. ನೂತನ ದರ ಇಂದಿನಿಂದ ಜಾರಿಗೆ ಬರಲಿದೆ. ಪ್ರತಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳವಾಗಿದೆ. 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು, ನೂತನ ದರ ಇಂದಿನಿಂದ ಜಾರಿಗೆ ಬರಲಿದೆ.


ನಿನ್ನೆ ತಾನೇ ಗೃಹಬಳಕೆಯ ಹೊಸ ರಿಫಿಲ್ ಸಿಲಿಂಡರ್ ಬುಕ್‌ ಮಾಡುವಾಗ ಭಾರತ್ ಗ್ಯಾಸ್‌ ಮೊಬೈಲ್‌ ಆಪ್‌ನಲ್ಲಿ 1050 ರೂ ದರ ತೋರಿಸುತ್ತಿತ್ತು. ಇಂದು ಬೆಳಗ್ಗೆ ಕ್ಯಾಶ್ ಮೆಮೋ ಜನರೇಟೆಡ್ ಎಂದು ಮೆಸೇಜ್‌ ಬಂದಾಗ 1013.50 ರೂ ದರವನ್ನು ತೋರಿಸುತ್ತಿದೆ.


ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 1103 ರೂ. ಆಗಿದ್ದು, ಎಂಟು ತಿಂಗಳ ಬಳಿಕ ಗೃಹ ಬಳಕೆಯ ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿದೆ. ಜುಲೈ 6 2022ರಿಂದ ದೇಶೀಯ ಎಲ್​ಪಿಜಿ ಸಿಲಿಂಡರ್ ಬೆಲೆಗಳು ಸ್ಥಿರವಾಗಿವೆ. ವಾಣಿಜ್ಯ ಸಿಲಿಂಡರ್ ಬೆಲೆ 350 ರೂ. ಹೆಚ್ಚಾಗಿದೆ.


ಫೆಬ್ರವರಿ 28 ರಂದು ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ದಿಲ್ಲಿಯಲ್ಲಿ 1769 ರೂ. ಬದಲು 2119.5 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ 1870 ರೂ. ಇದ್ದು, ಇದೀಗ 2221.5 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 1917ರೂ.ಗೆ ಲಭ್ಯವಿದ್ದ ಸಿಲಿಂಡರ್ ಇದೀಗ 2268 ರೂ.ಗೆ ಲಭ್ಯವಾಗಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top