ಪರರ ಹಿತಕ್ಕಾಗಿ ಶ್ರಮಿಸುವುದರಲ್ಲಿ ಜನ್ಮ ಸಾರ್ಥಕ್ಯ- ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

Upayuktha
0

 ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 60 ನೇ ಜನ್ಮವರ್ಧಂತಿ

ಸುವರ್ಣಾಭಿಷೇಕ ಸಹಿತ ಗುರುವಂದನೆ, ನೂರಾರು ಭಕ್ತರು ಭಾಗಿ 



ಉಡುಪಿ: ಹರಿಯುವ ನೀರಿನ ಮೇಲೆ ಒಣ ಎಲೆಯೂ ತೇಲಿ ಬರುತ್ತದೆ. ದೋಣಿಯೂ ತೇಲಿ ಸಾಗುತ್ತದೆ. ಆದರೆ ತರಗೆಲೆಯ ಮೇಲೆ ಹಕ್ಕಿ ಕುಳಿತರೂ ಮುಳುಗಿ ಹೋಗುತ್ತದೆ. ಆದರೆ ದೋಣಿ ತನ್ನ ಮೇಲೆ ಹತ್ತಾರು ಜನರನ್ನು ಹೊತ್ತು ದಡ ಸೇರಿಸುತ್ತದೆ. ಹೀಗೆ ತನ್ನ ಅಸ್ತಿತ್ವಕ್ಕೆ ಸಾರ್ಥಕ್ಯ ತರುತ್ತದೆ. ನಮ್ಮೆಲ್ಲರ ಜೀವನವೂ ದೋಣಿಯಂತಾದಾಗ ಜನ್ಮಕ್ಕೊಂದು ಸಾರ್ಥಕ್ಯ ಬರುತ್ತದೆ. ಅಂಥಹ ದೊಡ್ಡ ಮಾನವ ಜನ್ಮ ದೊಡ್ಡ ಒಳಿತಿಗೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು. ಸೂರ್ಯಾಸ್ತ ನೋಡಿ ಸಂಭ್ರಮಿಸುತ್ತೇವೆ. ಆದರೆ ಅದೇ ಸೂರ್ಯಾಸ್ತ ನಮ್ಮ ಜೀವನದ ಒಂದು ದಿನ ಕಳೆದು ಹೋಯಿತು. ಮಾಡಬೇಕಾದ  ಕರ್ತವ್ಯ ಬೇಕಾದಷ್ಟಿದೆ ಎಂದು ಎಚ್ಚರಿಸುವುದನ್ನು ಮರೆಯಬಾರದು ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂದೇಶ ನೀಡಿದರು.


ತಮ್ಮ 60 ನೇ ಜನ್ಮವರ್ಧಂತಿಯ ಪ್ರಯುಕ್ತ ಭಕ್ತಾಭಿಮಾನಿಗಳು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಸುವರ್ಣಾಭಿಷೇಕ ಪುಷ್ಪಾಭಿಷೇಕ ಸಹಿತ ಅಭಿವಂದನೆಯನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು.


ಉಡುಪಿ ಸಮೀಪ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಕಾರ್ಯಕ್ರಮ‌ ನೆರವೇರಿತು. ವೇದಮೂರ್ತಿ ರಾಮಕೃಷ್ಣ ತಂತ್ರಿ ಮತ್ತು ವಿದ್ವಾನ್ ಲಕ್ಷ್ಮೀನಾರಾಯಣ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರಿಂದ ಶ್ರೀಗಳಿಗೆ ಶ್ರೇಯಸ್ಸನ್ನು ಪ್ರಾರ್ಥಿಸಿ ಧನ್ವಂತರಿ ಯಾಗ ವಿರಜಾ ಹೋಮಗಳು, ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಭಿಷೇಕ ಪೂಜೆ  ನಡೆದವು. ಶ್ರೀಗಳು ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಬಳಿಕ ಪಟ್ಟದ ದೇವರಾದ ಶ್ರೀ ರಾಮವಿಠಲ ದೇವರ ಪೂಜೆ ನಡೆಸಿ ಭಿಕ್ಷೆ ಸ್ವೀಕರಿಸಿದರು.


ನಂತರ ನಡೆದ ಗುರುವಂದನಾ ಸಭಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ವಿದ್ವಾನ್ ರಘೂತ್ತಮಾಚಾರ್ಯ ನಾಗಸಂಪಿಗೆ, ವಿದ್ವಾನ್ ವೇಂಕಟೇಶಾಚಾರ್ಯ ಕುಲಕರ್ಣಿ ಅಭಿನಂದನಾ ಮಾತುಗಳನ್ನಾಡಿದರು. ವಿದ್ವಾನ್ ಷಣ್ಮುಖ ಹೆಬ್ಬಾರ್ ಸ್ವಾಗತಿಸಿದರು. ಮುಚ್ಲುಕೋಡು ಸೀಮೆಯ ವಿಪ್ರಬಂಧುಗಳು ಶ್ರೀಗಳಿಗೆ ಸುವರ್ಣಾಭಿಷೇಕ ಪುಷ್ಪಾಭಿಷೇಕ, ಫಲ ಕಾಣಿಕೆ ಮಂಗಳಾರತಿ ಅರ್ಪಿಸಿದರು. ಅನೇಕ‌ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶ್ರೀಗಳಿಗೆ ಫಲಪುಷ್ಪ ಸಹಿತ ಅಭಿವಂದನೆ ಸಲ್ಲಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆ ಧನ್ಯವಾದ ಸಹಿತ ಕಾರ್ಯಕ್ರಮ‌ ನಿರೂಪಿಸಿದರು. ದೇವಳದ ಅರ್ಚಕ ವೃಂದ, ವ್ಯವಸ್ಥಾಪಕ ರಾಜಶೇಖರ್, ಪೇಜಾವರ ಮಠದ ಸಿ‌ಇ‌ಒ ಸುಬ್ರಹ್ಮಣ್ಯ ಭಟ್, ಇಂದು ಶೇಖರ ಹೆಗಡೆ, ಶ್ರೀಗಳ ಆಪ್ತರಾದ ವಿಷ್ಣು‌ಮೂರ್ತಿ ಆಚಾರ್ಯ, ಕೃಷ್ಣ ಭಟ್, ಸುಬ್ರಹ್ಮಣ್ಯ ಆಚಾರ್ಯ ಮೊದಲಾದವರು ಸಹಕರಿಸಿದರು. ಶಾಸಕ  ಕೆ ರಘುಪತಿ ಭಟ್, ಡಾ.ವ್ಯಾಸರಾಜ ತಂತ್ರಿ, ಡಾ. ಚಂದ್ರಶೇಖರ್, ಯಶ್ಪಾಲ್ ಸುವರ್ಣ, ಭುವನೇಂದ್ರ ಕಿದಿಯೂರು, ಮುರಳಿ ಕಡೆಕಾರ್, ಪ್ರದೀಪ್ ಕಲ್ಕೂರ, ಪ್ರೊ. ಎಂ ಬಿ ಪುರಾಣಿಕ್, ಉಮೇಶ ಶೆಟ್ಟಿ, ಜಗದೀಶ್ ಪೈ, ಹರಿದಾಸ ಭಟ್ ಮುಂಬಯಿ, ನಾಗರಾಜ ಪುರಾಣಿಕ್, ಶಾಮಲಾ ಕುಂದರ್, ಶ್ರೀಶ ನಾಯಕ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು. ಚಿತ್ರನಟಿ ಬಿಜೆಪಿ ನಾಯಕಿ ಮಾಳವಿಕಾ ಆಗಮಿಸಿ ಶ್ರೀಗಳಿಗೆ ಗೌರವ ಸಲ್ಲಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top