ಬೆಂಗಳೂರು : ‘ಬೊಂಬೆಹಬ್ಬ- ಬೊಂಬೆಯ ಭಾವಾಭಿವ್ಯಕ್ತಿಯಲ್ಲಿ ನವರಸಗಳು’ ಸಮಾರಂಭ

Upayuktha
0


ಬೆಂಗಳೂರು :
ಇನ್ಫೋಸಿಸ್‌ ಪ್ರತಿಷ್ಠಾನ ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ ಬೆಂಗಳೂರು ವತಿಯಿಂದ ‘ಬೊಂಬೆಹಬ್ಬ- ಬೊಂಬೆಯ ಭಾವಾಭಿವ್ಯಕ್ತಿಯಲ್ಲಿ ನವರಸಗಳು’ ಎಂಬ ಸಮಾರಂಭವು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು.


ಬೊಂಬೆ ಹಬ್ಬ ,ಬೊಂಬೆಯಾಟ ಎನ್ನುವುದು ಬಹಳ ಹಳೆಯ ಕಲೆ. ಭಾರತದಲ್ಲಿ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಚೋಳರು ಈ ಕಲೆಯನ್ನು ವಿದೇಶಗಳಿಗೆ ಪಸರಿಸಿದರು ಎಂಬ ಪ್ರತೀತಿ ಇದೆ. ಈ ಕಲೆಯು ಮಹಾಭಾರತ ಮತ್ತು ರಾಮಾಯಣ ಕಾಲಾದಿಂದಲೇ ಕಾಣಲು ಸಾಧ್ಯವಾಗಿದೆ.ಆನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕಲೆಯನ್ನು ಉಳಿಸುವ ಕಾರ್ಯವಾಗುತ್ತಿರುವುದು ಬಹಳ ಸಂತೋಷದ ಸಂಗತಿ ಎಂದು ಚಿರಂಜೀವಿ ಸಿಂಗ್‌ ತಿಳಿಸಿದರು.


ಸುಚಿತ್ರ ಸೊಸೈಟಿಯ ಅಧ್ಯಕ್ಷ ಹೆಚ್‌.ಎನ್‌ ನರಹರಿ ರಾವ್‌ ಅವರು ಮಾತಾನಾಡಿ ಬೊಂಬೆಗಳ ಮೇಲೆ ಅನೇಕ ಸಿನಿಮಾಗಳು ಬಂದಿವೆ. ಆದರೆ ಆ ಕಲೆಯನ್ನು ಉಳಿಸುವ ಕಡೆ ಈ ಎರಡು ಸಂಸ್ಥೆಗಳು ಗಮನಹರಿಸಿದ್ದು ಬಹಲ ವಿಶೇಷ.


ಎನ್‌ .ಶಶಿಧರ ಅವರು ಮಾತಾನಾಡಿ ವೈಜ್ಞಾನಿಕ ಲೋಕದಲ್ಲಿ ಬದುಕುವ ನಾವುಗಳು ಬೊಂಬೆಗಳ ಬಗ್ಗೆ ತಿಳಿದುಕೊಳ್ಳುವಂತದ್ದು ಏನಿದೆ ಎಂದು ಇಂದಿನ ಯುವ ಮನಸುಗಳು ಕೇಳುತ್ತವೆ. ಆದರೆ ಬೊಂಬೆಹಬ್ಬದ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟಿದೆ. ಅವುಗಳಿಗೆ ಉತ್ತಮ ವೇದಿಕೆ ಈ ಬೊಂಬೆ ಹಬ್ಬವಾಗಿದೆ ಎಂದರು.


ಭಾರತೀಯ ವಿದ್ಯಾಭವನದ ಅಧ್ಯಕ್ಷ ಪಿ ವೇಣುಗೋಪಾಲ್‌ ಸ್ವಾಗತಿಸಿ, ಹೆಚ್‌.ಎನ್‌ ಸುರೇಶ್‌ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top