ಅಡಿಕೆಗೆ ಎಲೆಚುಕ್ಕೆ ರೋಗ: ಪರ್ಯಾಯ ಮಾರ್ಗದ ಕುರಿತು ಶಿರಸಿಯಲ್ಲಿ ಕಾರ್ಯಾಗಾರ- ಮಾ.18ಕ್ಕೆ

Upayuktha
0

ಶಿರಸಿ: ಅಡಿಕೆ ಬೆಳೆಯನ್ನು ಕಾಡುತ್ತಿರುವ ಎಲೆಚುಕ್ಕೆ ರೋಗಕ್ಕೆ ಸಂಬಂಧಿಸಿದಂತೆ ಚಿಂತನಾ ಕಾರ್ಯಾಗಾರವನ್ನು ಮಾರ್ಚ್ 18ರಂದು ಶಿರಸಿಯ ಟಿ.ಆರ್‍‌.ಸಿ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ದ ತೋಟಗಾರ್ಸ್ ಕೋ-ಆಪರೇಟಿವ್ ಸೊಸೈಟಿ (ಟಿಎಸ್‌ಎಸ್‌), ಟಿಎಂಎಸ್‌ ಹಾಗೂ ಫಾರ್ಮ್ ಟಿವಿ ಸಂಯುಕ್ತವಾಗಿ ಈ ಕಾರ್ಯಾಗಾರವನ್ನು ಆಯೋಜಿಸಿವೆ.


ಬೆಳಗ್ಗೆ 10ರಿಂದ ಸಂಜೆ 4:30ರ ವರೆಗೆ ಕಾರ್ಯಾಗಾರ ನಡೆಯಲಿದೆ. ಶಿರಸಿ, ಸಿದ್ಧಾಪುರ, ಯಲ್ಲಾಪುರ, ಸಾಗರ, ಕರಾವಳಿ, ಮುಂಡಗೋಡ, ಹಾವೇರಿ ವರೆಗಿನ ಹಾಗೂ ರಾಜ್ಯದ ಯಾವುದೇ ಭಾಗದ ಅಡಿಕೆ ಬೆಳೆಯನ್ನೇ ನಂಬಿ ಬದುಕುತ್ತಿರುವ ರೈತರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದಾಗಿದೆ.


ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿಎಸ್‌ಎಸ್‌ ಹಾಗೂ ಟಿಆರ್‍‌ಸಿಯ ಕಾರ್ಯಾಧ್ಯಕ್ಷರಾದ ರಾಮಕೃಷ್ಣ ಹೆಗಡೆ, ಟಿಎಂಎಸ್‌ ಶಿರಸಿಯ ಅಧ್ಯಕ್ಷರಾದ ಜಿ.ಎಂ ಹೆಗಡೆ, ಶಿರಸಿಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಪಿ. ಸತೀಶ ಅವರು ಉಪಸ್ಥಿತರಿರುತ್ತಾರೆ.


ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಸ್ಯರೋಗ ವಿಜ್ಞಾನಿ ಡಾ. ಎಂ.ಎನ್‌ ವೇಣುಗೋಪಾಲ, ಸಿಪಿಸಿಆರ್‍‌ಐ ಸಸ್ಯರೋಗ ವಿಭಾಗ ಮುಖ್ಯಸ್ಥ ಡಾ. ವಿನಾಯಕ ಹೆಗಡೆ, ಸಿಪಿಸಿಆರ್‍‌ಐ ತೋಟಗಾರಿಕೆ ವಿಭಾಗ ಮುಖ್ಯಸ್ಥ ಡಾ. ರವಿ ಭಟ್ಟ, ಸಸ್ಯರೋಗ ವಿಜ್ಞಾನಿ ಮತ್ತು ಸಲಹೆಗಾರರಾದ ಡಾ. ವಿಜಯೇಂದ್ರ ಹೆಗಡೆ, ಟಿಎಸ್‌ಎಸ್‌ ಶಿರಸಿಯ ಕೃಷಿ ಸಲಹೆಗಾರ ಶ್ರೀಕಾಂತ್‌ ಭಟ್ಟ, ಟಿಎಂಎಸ್‌ ಶಿರಸಿಯ ಕೃಷಿ ಸಲಹೆಗಾರ ಕಿಶೋರ ಹೆಗಡೆ ಹಾಗೂ ಫಾರ್ಮ್‌ ಟಿವಿ ಪ್ರಧಾನ ಸಂಪಾದಕ ಡಾ. ವೆಂಕಟ್ರಮಣ ಹೆಗಡೆ ಅವರು ಪಾಲ್ಗೊಳ್ಳಲಿದ್ದಾರೆ.


ಉದ್ಘಾಟನೆ, ವಿಷಯ ಮಂಡನೆ, ಪ್ರಶ್ನೋತ್ತರದ ಬಳಿಕ ಅಪರಾಹ್ನ 2 ರಿಂದ 4:30ರ ವರೆಗೆ ಅಡಿಕೆಗೆ ಪರ್ಯಾಯ ಏನು ಎಂಬ ವಿಷಯದ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ.


ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಉಚಿತ ನೋಂದಣಿಗಾಗಿ ಫಾರ್ಮ್ ಟಿವಿ- 9980534320, 8073652196; ಟಿಎಸ್‌ಎಸ್‌- 8762100250, 894026621; ಟಿಎಂಎಸ್‌- 9482844422 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top