ಧಾರವಾಡ: ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು ನೀಡುವ 2022 ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯು ಪ್ರಕಟಗೊಂಡಿದ್ದು, ಮಹಾಂತೇಶ ನವಲಕಲ್ ಅವರ 'ಬುದ್ಧಗಂಟೆಯ ಸದ್ದು ಮತ್ತು ಇತರೆ ಕತೆಗಳು' ಹಾಗೂ ಶ್ರೀಲೋಲ ಸೋಮಯಾಜಿ ಅವರ 'ನ ಪ್ರಮದಿತವ್ಯಂ' ಎಂಬ ಕಥಾಸಂಕಲನಗಳು ಆಯ್ಕೆಯಾಗಿವೆ.
ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಟಿ. ಪಿ. ಅಶೋಕ ಮತ್ತು ಖ್ಯಾತ ಕಥೆಗಾರ ಡಾ. ಕೆ. ಸತ್ಯನಾರಾಯಣ ಅವರು ತೀರ್ಪುಗಾರರಾಗಿದ್ದರು. ಈ ಪ್ರಶಸ್ತಿ 20 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ.
ಎಪ್ರಿಲ್ 16 ರಂದು ಧಾರವಾಡದ ರಂಗಾಯಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಖ್ಯಾತ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸಂಚಾಲಕ ವಿಕಾಸ ಹೊಸಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ