ವಿಶೇಷವೆಂದರೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿಯ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಪುತ್ತಿಲ ಅವರ ಸಹಾಯದಿಂದ ನೈಸರ್ಗಿಕವಾಗಿ ಭವ್ಯವಾದ ವೇದಿಕೆ ತಯಾರುಗೊಂಡಿತು. ಸ್ವಯಂಸೇವಕರ ವತಿಯಿಂದ ಶಾಲೆಯ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.ಇನ್ನು ಈ ಶಿಬಿರದಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಸ್ವಯಂಸೇವಕರ ಆರೋಗ್ಯದ ಹಿತ ದೃಷ್ಟಿಯಿಂದ ಗಂಟೆಗೆ ಒಮ್ಮೆ ನೀರು ಕುಡಿಯುವ ವ್ಯವಸ್ಥೆ ಮಾಡಲಾಗಿದ್ದು, ಈ ವ್ಯವಸ್ಥೆಯು ಸತತವಾಗಿ ಒಂದು ವಾರಗಳ ಕಾಲ ಮುಂದುವರಿಯಲಿದೆ.
ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ತಮ್ಮಯ್ಯ ಬಿ. ಮತ್ತು ಶ್ರೀಮತಿ ಶಾಂತಿ ಡಿಸೋಜ ಹಾಗೂ ಇತರ ಶಿಕ್ಷಕರ ಸಹಕಾರದಿಂದ ಶಿಬಿರದ ಪೂರ್ವಭಾವಿ ಸಿದ್ಧತೆಗಳು ಕ್ರಮಬದ್ಧವಾಗಿ ನೆರವೇರಿದವು. ಎನ್ಎಸ್ಎಸ್ ನ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ.ಎಸ್ ಮತ್ತು ಶ್ರೀಮತಿ ದೀಪಾ ಆರ್. ಪಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ