ಪುತ್ತೂರು: ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ - ವಿಚಾರಗೋಷ್ಠಿ

Upayuktha
0

 


ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಭಿನ್ನವಾಗಿ ಆಲೋಚಿಸುವ ಶಕ್ತಿ ಇದೆ. ಈ ಚಿಂತನೆಗಳಿಗೆ ಮೂರ್ತ ರೂಪ ಕೊಡುವ ಮೂಲಕ ಅದನ್ನೊಂದು ವಿನ್ಯಾಸವನ್ನಾಗಿಸಿದರೆ ಹೊಸ ಹೊಸ ಉತ್ಪನ್ನಗಳು ಉದ್ಭವಿಸುವುದಕ್ಕೆ ಸಾಧ್ಯವಿದೆ ಎಂದು ಬೆಂಗಳೂರಿನ ವಿದ್ಯಾಕೋಶ ಫ್ರೈವೆಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಐಐಎಸ್ಸಿ ಬೆಂಗಳೂರಿನ ಪ್ರಾಜೆಕ್ಟ್ ನೆಟ್‍ವರ್ಕ್ ವಿಭಾಗದ ಪೂರ್ವ ಮುಖ್ಯಸ್ಥ ಡಾ.ಅಶೋಕ್ ರಾವ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ಚಿಂತನೆ ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ ಎನ್ನುವ ವಿಷಯದ ಬಗ್ಗೆ ನಡೆದ ವಿಚಾರಗೋಷ್ಟಿಯಲ್ಲಿ ಮಾತಾಡಿದರು. ವಿದ್ಯಾರ್ಥಿಯಾಗಿದ್ದಾಗಲೇ ತಮ್ಮ ಪಠ್ಯಕ್ರಮವನ್ನು ಅಭ್ಯಸಿಸುತ್ತಾ ಚಿಂತನೆಗಳನ್ನು ನಡೆಸಬಹುದು. ನಿಮ್ಮ ಕಲ್ಪನೆಗಳನ್ನು ಇತರೊಡನೆ ಹಂಚಿಕೊಳ್ಳುತ್ತಾ ಅದನ್ನೊಂದು ವಿನ್ಯಾಸವನ್ನಾಗಿಸಬೇಕು ಎಂದರು. ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸುವುದರ ಮೂಲಕ ಉದ್ಯಮಿಗಳಾಗುವತ್ತ ಗಮನಹರಿಸಬೇಕು. ಉದ್ಯೋಗವನ್ನು ಅರಸುವ ಬದಲು ಇತರರಿಗೆ ಉದ್ಯೋಗ ನೀಡುವ ಮೂಲಕ ಸಮಾಜದಲ್ಲಿ ಉನ್ನತಿಯನ್ನು ಸಾಧಿಸಬೇಕು ಎಂದರು. 


ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೋ.ರಮಾನಂದ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ವಿದ್ಯಾರ್ಥಿಗಳಾದ ಸುದೀಪ್ ಶಿವರಾವ್ ಸ್ವಾಗತಿಸಿ, ಅಶ್ವಿನಿ.ಕೆ ವಂದಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top