"ಬಹುಮುಖ ಪ್ರತಿಭೆ ಪಂಚಮಿ ವೈದ್ಯ ತೆಕ್ಕಟ್ಟೆ"

Upayuktha
0

ತ್ಯುತ್ತಮ ಹವ್ಯಾಸಿ ಯಕ್ಷಗಾನ ಕಲಾವಿದ, ಸಂಘಟಕ, ಯಕ್ಷಗಾನ ಸ್ಮರಣಿಕೆಗಳ ತಯಾರಕ ಶ್ರೀ ವೆಂಕಟೇಶ ವೈದ್ಯ ಕಲಾಸಾಧಕ, ಪರೋಪಕಾರಿ ಪ್ರವೃತಿಯ ಕಲಾಪೋಷಕ. ಕುಂದಾಪುರ ತಾಲೂಕು ತೆಕ್ಕಟ್ಟೆ ಕೊಮೆಯಲ್ಲಿ ಸಮಾನ ಮನಸ್ಕ ಸ್ನೇಹಿತರೊಂದಿಗೆ ಯಶಸ್ವಿ ಕಲಾವೃಂದ ಸ್ಥಾಪಿಸಿ ನಿರಂತರ ಕಲಾಚಟುವಟಿಕೆ ನಡೆಸುತ್ತಿರುವ ಕಲಾಸೇವಕ. ಇವರ ಮಗಳೇ ಪಂಚಮಿ ವೈದ್ಯ ತೆಕ್ಕಟ್ಟೆ.


ಯಕ್ಷಗಾನ, ನೃತ್ಯ, ಸಂಗೀತ, ಭರತನಾಟ್ಯ, ಚಿತ್ರಕಲೆ ಈ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಪ್ರತಿಭೆ ಪಂಚಮಿ. ೧೬.೧೦.೨೦೦೭ ರಂದು ವೆಂಕಟೇಶ ವೈದ್ಯ ಹಾಗೂ ಭಾಗ್ಯಲಕ್ಷ್ಮಿ ದಂಪತಿಗಳ ಮಗಳಾಗಿ ಜನನ. ಸರ್ಕಾರಿ ಪ್ರೌಢ ಶಾಲೆ ತೆಕ್ಕಟ್ಟೆಯಲ್ಲಿ ೧೦ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ಹಾಗೂ ತಾಯಿ ಇಬ್ಬರೂ ಕಲಾಪ್ರೇಮಿಗಳು, ಇಬ್ಬರೂ ಯಕ್ಷಗಾನ ಕಲಾವಿದರು. ಮನೆಯಲ್ಲಿದ್ದ ಈ ವಾತಾವರಣವು ಪಂಚಮಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.


ಯಕ್ಷ ಗುರು ಸೀತಾರಾಮ ಶೆಟ್ಟಿ ಕೊಯಿಕೂರು, ದೇವದಾಸ್ ರಾವ್ ಕೂಡ್ಲಿ ಬಳಿ ಯಕ್ಷಗಾನ ಕುಣಿತ ಹಾಗೂ ಪ್ರಾಚಾರ್ಯ ಕೆ.ಪಿ.ಹೆಗಡೆ, ಲಂಬೋದರ ಹೆಗಡೆ ನಿಟ್ಟೂರು ಬಳಿ ಭಾಗವತಿಕೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು ೧೩ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.


ಸುಧನ್ವಾರ್ಜುನ, ದ್ರೌಪದಿ ಪ್ರತಾಪ, ಮೀನಾಕ್ಷಿ ಕಲ್ಯಾಣ, ಕೃಷ್ಣಾರ್ಜುನರ ಕಾಳಗ, ಸಮಗ್ರ ಕಂಸ, ಭೀಷ್ಮ ವಿಜಯ, ಇನ್ನೂ ಹಲವು ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.

ಹಿಂದೋಳ, ಕಾನಡ, ಶಿವರಂಜನಿ, ಪೂರ್ವಿ, ಮಧ್ಯಮಾವತಿ, ವಾಸಂತಿ, ಬಹುದಾರಿ ಇನ್ನಿತರ ನೆಚ್ಚಿನ ರಾಗಗಳು.

ಸುಧನ್ವ, ದ್ರೌಪದಿ, ಕೃಷ್ಣ, ಅಭಿಮನ್ಯು, ಅರ್ಜುನ, ಮುಂತಾದವು ನೆಚ್ಚಿನ ವೇಷಗಳು. ದೇವದಾಸ್ ರಾವ್ ಕೂಡ್ಲಿ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.


ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಸ್ವಲ್ಪ ಕಡಿಮೆ. ಭಾಗವತಿಕೆ ಮಾಡಲು ತುಂಬಾ ಆಸಕ್ತಿ ಇದೆ ಹಾಗೂ ಅದರ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದೇನೆ ಎಂದು ಪಂಚಮಿ ಹೇಳುತ್ತಾರೆ.


ವೀಣಾ ನಾಯಕ್ ಕೋಟ ಇವರಿಂದ ಹಿಂದೂಸ್ತಾನಿ ಸಂಗೀತ ಅಭ್ಯಾಸ ಪ್ರಾರಂಭಿಸಿ ಈಗ ಪ್ರತಿಮಾ ಭಟ್ಟರ ಬಳಿ ಅಭ್ಯಾಸ ಮುಂದುವರೆಸಿದ್ದಾರೆ. ಜೂನಿಯರ್ ಗ್ರೇಡ್ ಪಾಸ್ ಮಾಡಿದ್ದಾರೆ. ಚಿತ್ರಕಲೆಗೆ ಗಿರೀಶ್ ವಕ್ವಾಡಿ ಅವರಿಂದ ಮಾರ್ಗದರ್ಶನ  ಪಡೆಯುತ್ತಿದ್ದಾರೆ. ವಿದ್ಯಾ ಸಂದೇಶ್ ಅವರ ಬಳಿ ಭರತನಾಟ್ಯ ಕಲಿಯುತ್ತಿದ್ದಾರೆ. ಹೀಗಾಗಿ ಪಂಚಮಿ ಭರತನಾಟ್ಯ ಹಾಗೂ ಚಿತ್ರಕಲೆಯಲ್ಲಿ ಸಾಕಷ್ಟು ಸಾಧನೆ ಮಾಡಲು ಸಾಧ್ಯವಾಯಿತು.

ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನೂ ಗಳಿಸಿರುತ್ತಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಅದರ ಬಗ್ಗೆ ವಿಮರ್ಶೆ ಮಾಡಲು ನಾನು ಚಿಕ್ಕವಳು ಹಾಗೂ ಇವತ್ತಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಲಕ್ಷಿಸಿಲ್ಲ ಎಂದು ಪಂಚಮಿ ಹೇಳುತ್ತಾರೆ.


ಸದ್ಯ ಅಭ್ಯಾಸದ ಜೊತೆಗೆ ಓದು, ಕಲಿಯಬೇಕಷ್ಟೆ. ಐ.ಏ.ಎಸ್, ಐ.ಪಿ.ಎಸ್ ಪದವಿ ಬಗ್ಗೆ ಲಕ್ಷ್ಯ ಹರಿಸಿರುವ ಇವಳಿಗೆ ಓದುವ ಕಾಳಜಿ ಇರಿಸಿದ್ದಾಳೆ ಇದುವೇ ಮುಂದಿನ ಯೋಜನೆ.


ಬಹಳ ಹಿಂದೆ ಭಾಗವತಿಕೆ ಮಾಡಿದಾಗ ಬಗ್ವಾಡಿಯಲ್ಲಿ ಸಮ್ಮಾನ. ಹಿಂದೂಸ್ತಾನಿ ಸಂಗೀತ, ಚಿತ್ರಕಲೆ, ಯಕ್ಷಗಾನ, ಭರತನಾಟ್ಯ ಇವರ ಹವ್ಯಾಸಗಳು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


ಶ್ರವಣ್ ಕಾರಂತ್ ಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top