ಅಲ್ಲೊಂದು ಚಿಗುರಲೆಕಾಯಿ ಅಂತಿತ್ತು 'ಭಾಗವಂತಿಕೆ'

Upayuktha
0

 

ಕ್ಷಗಾನ ಇದು ಕರಾವಳಿಯ ಗಂಡು ಕಲೆ ರಾತ್ರಿ ಕುಳಿತು ಮೂಡಣದಲ್ಲಿ ಸೂರ್ಯ ಹುಟ್ಟುವವರೆಗೂ ಕಲೆಗಳನ್ನು ಪ್ರದರ್ಶಿಸುವ ಕಲೆ ಇವಳೇನು ಯಕ್ಷಗಾನ ಅಂತಿದ್ದಾಳೆ ಯಕ್ಷಗಾನ ಅಂದ್ರೆ ನಮಗೆ ಗೊತ್ತಿಲ್ವಾ ಅಂತ ನೀವು ಮಾತಾಡ್ಕೊತ್ತಿರಬಹುದು ಆದರೆ ನಾನು ಇಲ್ಲಿ ಹೇಳೋಕೆ ಹೊರಟಿರೋದು ಯಕ್ಷಗಾನದ ಬಗ್ಗೆ ಅಲ್ಲ ಅದರ ಸೂತ್ರದಾರನಾಗಿರುವವನ ಬಗ್ಗೆ ಹೌದು ಅಲ್ಲೊಬ್ಬ ಭಾಗವತ ಉಡುಪಿ ಜಿಲ್ಲೆಯ ಕುಂದಾಪುರದವರು ಹೊಯ್ಕ್ ಬರ್ಕ್ ಅಂತ ಮಾತಾಡಿ ಸಂಜೆ 8 ಗಂಟೆ ಆಗೋಹಾಗಿಲ್ಲ ತೈತ... ತೈತ... ಅನ್ನಲಿಕ್ಕೆ ಶುರು ಮಾಡ್ತಾರೆ ಕಣ್ರೀ... ಅವರೇ ನಮ್ಮ ಸುಧಾಕರ್ ಕೊಠಾರಿ.


ಇವರು ನಾಗು ಕೊಠಾರಿ ಹಾಗೂ ಚಂದು ಕೊಠಾರ್ತಿಯರ ಮೂರನೇ ಮಗನಾಗಿ ಜನಿಸುತ್ತಾರೆ. ಚಿಕ್ಕಂದಿನಲ್ಲೇ ಯಕ್ಷಗಾನ ಅಂದ್ರೆ ಹುಚ್ಚು. ಅಲ್ಲಲ್ಲಿ ನಡೆಯುತ್ತಿದ್ದ ಬಯಲಾಟ ಕಂಡು ತಾನು ಯಕ್ಷಗಾನ ಭಾಗವಂತಿಕೆ ಮಾಡಬೇಕು ಎಂಬುವ ಕನಸು ಕಂಡಿದ್ದರು. ಆ ಕಾಲದಲ್ಲಿ ಏಳಜಿತ್ ನಲ್ಲಿ ಸಂಘದ ಯಕ್ಷಗಾನ ನಡೆಯುತ್ತಿತ್ತು. ಅಲ್ಲಿ ಇವರ ಭಾಗವಂತಿಕೆ ಚುರುಕುತನ ಕಂಡು ಮುಂಗೇಶ ಶಣೈಯವರು ಹುರಿದುಂಬಿಸಿದರು. ದಿವಂಗತ ಹಿರೇಂಜಾ, ವೆಂಕಟರಮಣ ಗಾಣಿಗ ಇವರ ಗುರುಗಳು. ಇವರ ಪ್ರೇರಣೆಯಿಂದ ಅಂದಿನ ಗಜ ಗಟ್ಟಿಮೇಳವಾದ ಮಾರಣಕಟ್ಟೆ ಮೇಳದಲ್ಲಿ ಸಂಗೀತಗಾರನಾಗಿ ಸೇರ್ಪಡೆಗೊಂಡರು. ಆಗಿನ ಸಂಚಾಲಕರಾದ ಶ್ರೀ ಎಂ ಎಂ ಹೆಗಡೆ ಹಾಗೂ ಧರ್ಮದರ್ಶಿಗಳಾದ ಚಿತ್ತೂರು ಮಂಜಯ್ಯ ಶೆಟ್ಟಿ ನಿರ್ದೇಶನ ಮತ್ತು ಪ್ರಧಾನ ಭಾಗವತರಾದ ಉಮೇಶ ಸುವರ್ಣರ ಮಾರ್ಗದರ್ಶನ ಸಿಕ್ಕಿತು. ಬಡಗುತಿಟ್ಟಿನಲ್ಲಿ ಪ್ರಸಿದ್ಧ ಶೈಲಿಯಾದ ಕುಂಜಾಲು ಶೈಲಿಯಲ್ಲಿ ಅತ್ಯುತ್ತಮವಾಗಿ ಏರು ಧ್ವನಿಯಲ್ಲಿ ಹಾಡಬಲ್ಲ ಭಾಗವತ ಇವರ ಈ ಕಲಾಸಾಧನೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರಿಗೆ ಉಪ್ಪುಂದದ ಶ್ರೀ ಆನೆ ಗಣಪತಿ ಯಕ್ಷಗಾನ ಕಲಾ ಮಂಡಳಿಯು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ಹಾಗೂ ಉಡುಪಿ ವೈಭವದ ರಾಜ್ಯಮಟ್ಟದ ಎರಡನೇ ಮಹಾ ಅಧಿವೇಶನದಲ್ಲಿ ಪ್ರಶಸ್ತಿ ಲಭಿಸಿದೆ. ಹಾಗೂ ಬಹಳಷ್ಟು ಕಡೆ ಸನ್ಮಾನಿತರಾಗಿದ್ದಾರೆ ಚಿಗುರೆಲೆಕಾಯಿಯಂತಿರುವ ಇವರನ್ನು ಗುರುತಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ.

                                         

-ನೇಹಾ. ಎನ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top