ಮಧುಮೇಹ ಪಾದಗಳಿಗೆ ಮತ್ತು ಕ್ರೀಡಾ ಗಾಯಗಳ ಚಿಕಿತ್ಸೆಗೆ ಪೊಡಿಯಾಟ್ರಿಕ್ಕೇ ಇಂದಿನ ಅಗತ್ಯ: ಡಾ.ಸಂಜಯ್ ಶರ್ಮಾ ಸಲಹೆ
ಬೆಂಗಳೂರು: ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯ ಕೇಂದ್ರವಾಗಿರುವ ಫುಟ್ ಸೆಕ್ಯೂರ್ ಬೆಂಗಳೂರಿನಲ್ಲಿ ಮತ್ತೊಂದು ವಿಶಿಷ್ಟ ಆರೋಗ್ಯ ಕೇಂದ್ರವನ್ನು ತನ್ನ ಜಾಲಕ್ಕೆ ಸೇರಿಸಿಕೊಳ್ಳುತ್ತಿದೆ. ಪಾದಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ದೀರ್ಘಕಾಲದ ಗಾಯಗಳಿಗೆ ಚಿಕಿತ್ಸೆ ನೀಡುವ ವಿಶೇಷವಾದ ಪೊಡಿಯಾಟ್ರಿ ಮತ್ತು ಗಾಯದ ಆರೈಕೆ ಕೇಂದ್ರವಾದ ಫುಟ್ ಸೆಕ್ಯೂರ್ ತನ್ನ ಐದನೇ ಕೇಂದ್ರವನ್ನು ಮಲ್ಲೇಶ್ವರಂನಲ್ಲಿ ಇದೇ ಮಾರ್ಚ್ 11ರಂದು ತೆರೆಯುತ್ತಿದೆ.
ಫುಟ್ ಸೆಕ್ಯೂರ್ (FootSecure) 2018ರಲ್ಲಿ ಪ್ರಾರಂಭವಾದ ಗಾಯದ ಚಿಕಿತ್ಸೆ ಕೇಂದ್ರವಾಗಿದ್ದು, ಸಧ್ಯಬೆಂಗಳೂರಿನಲ್ಲಿ ನಾಲ್ಕು ಕೇಂದ್ರಗಳನ್ನು ನಿರ್ವಹಿಸುತ್ತದೆ. ಈಗ ಆರಂಭಿಸಲಾಗುತ್ತಿರುವ ಹೊಸ ಕೇಂದ್ರದ ವೈಶಿಷ್ಟ್ಯಗಳನ್ನುಮಾಧ್ಯಮಗಳಿಗೆ ವಿವರಿಸಿದ ಫುಟ್‌ಸೆಕ್ಯೂರ್‌ನ ಸಂಸ್ಥಾಪಕ ಡಾ ಸಂಜಯ್ ಶರ್ಮಾ,ಈ ಕೇಂದ್ರವು ಪೊಡಿಯಾಟ್ರಿ ಮತ್ತು ಗಾಯದ ಆರೈಕೆಗಾಗಿ ಒಂದೇ ಸ್ಥಳದಲ್ಲಿ ಎಲ್ಲ ಚಿಕಿತ್ಸೆ ನೀಡುವ ಕೇಂದ್ರವಾಗಲಿದೆ ಎಂದು ಹೇಳಿದರು.
ಗಾಯವನ್ನು ಗುಣಪಡಿಸುವಲ್ಲಿ ವಿನೂತನ ರೀತಿಯ ತಂತ್ರಜ್ಞಾನವನ್ನು ಮೊದಲ ಬಾರಿಗೆ ನಾವು ಕರ್ನಾಟಕದಲ್ಲಿ (ಭಾರತದ 8 ಉತ್ಕೃಷ್ಟ ಕೇಂದ್ರಗಳಲ್ಲಿ ಒಂದು) ಪರಿಚಯಿಸಿದ್ದೇವೆ.- ಡೆರಿಮ್ (ಪುನರುತ್ಪಾದಕ ಔಷಧ)- ಈ ತಂತ್ರಜ್ಞಾನವು ಗಾಯವನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.
ಇದು ರೋಗ ಪತ್ತೆ, ಸಾಮಾನ್ಯ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದೆ; ಫುಟ್‌ಸೆಕ್ಯೂರ್ ಕ್ರೀಡಾಪಟುಗಳು ಮತ್ತು ಮಧುಮೇಹ ರೋಗಿಗಳಿಗೆ ಪಾದರಕ್ಷೆ/ಇನ್‌ಸೊಲ್‌ಗಳನ್ನು ಸಹ ಒದಗಿಸುತ್ತದೆ.
ದೇಶದಲ್ಲಿ ಹೆಚ್ಚುತ್ತಿರುವ ಕ್ರೀಡಾ ಚಟುವಟಿಕೆಗಳು ಮತ್ತು ಮಧುಮೇಹ ಪ್ರಮಾಣದ ಜೊತೆಗೆ, ಕಾಲು ಮತ್ತು ಪಾದದ ಕಾಯಿಲೆಗಳು ಸಹ ಹಲವಾರು ರೀತಿಯಲ್ಲಿ ಬೆಳೆಯುತ್ತಿವೆ ಎಂದು ಡಾ. ಶರ್ಮಾ ಹೇಳಿದರು.
ಸಂಧಿವಾತ, ಮಧುಮೇಹ, ಗರ್ಭಾವಸ್ಥೆ ಇತ್ಯಾದಿಗಳಿಂದಾಗಿ ಭಾರತದಲ್ಲಿ ಅಂದಾಜು 46 ಕೋಟಿ ಜನರು ವಿವಿಧ ಕಾಲು ಮತ್ತು ಪಾದದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಧುಮೇಹ ಪಾದವು ಇಂದು ಅತ್ಯಾಧುನಿಕಚಿಕಿತ್ಸಾ ಪದ್ಧತಿಯನ್ನು ಹೊಂದಿದೆ; ಪ್ರತಿ 20 ಸೆಕೆಂಡಿಗೆ ಜಗತ್ತಿನ ಯಾವುದಾದರೊಂದು ಕಡೆ ಮಧುಮೇಹದಿಂದ ಒಂದು ಅಂಗ ಛೇಧನವಾಗುತ್ತದೆ ಎಂದು ವರದಿಗಳು ಹೇಳುತ್ತವೆ. ಭಾರತವು ಮಧುಮೇಹದಿಂದ ವಾರ್ಷಿಕವಾಗಿ ಸರಾಸರಿ 14 ಲಕ್ಷ ಅಂಗಚ್ಛೇದನಗಳಿಗೆ ಸಾಕ್ಷಿಯಾಗುತ್ತಿದೆ, 5 ವರ್ಷಗಳ ಮರಣ ಪ್ರಮಾಣವು ಶೇ.70 ರಷ್ಟಿದೆ. ಇದು ಕ್ಯಾನ್ಸರ್ ಸಾವಿನ ಪ್ರಮಾಣಕ್ಕಿಂತ ಹೆಚ್ಚು ಎಂದು ಅವರು ವಿವರಿಸಿದರು.
FootSecure ಅನ್ನು ಸ್ಥಾಪಿಸಿದ ಸುಮಾರು ನಾಲ್ಕು ವರ್ಷಗಳಲ್ಲಿ, 10,000 ಕ್ಕಿಂತ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು ಸಕಾಲಿಕ ಆರೈಕೆಯನ್ನು ಒದಗಿಸಲಾಗಿದೆ, ಇದು 3,000 ಅಂಗವಿಕಲರ ಜೀವ ಉಳಿಸಿದೆ. FootSecure ಭಾರತದಲ್ಲಿ ಮಧುಮೇಹದಿಂದ ಅತಿ ಕಡಿಮೆ ಅಂಗಚ್ಛೇದನದ ಪ್ರಮಾಣವನ್ನು ಹೊಂದಿದೆ, ಅಂದರೆ ಶೇ.2ರಷ್ಟು ಮಾತ್ರ. ಆದರೆ ರಾಷ್ಟ್ರೀಯ ಸರಾಸರಿಯು ಸುಮಾರು ಶೇ.19 ಆಗಿದೆ. 2021 ರಲ್ಲಿ ಇಂಡಿಯಾ ಟುಡೆ ಗ್ರೂಪ್‌ನಿಂದ ಭಾರತದಲ್ಲಿನ ಅತ್ಯುತ್ತಮ ಪೊಡಿಯಾಟ್ರಿ ಕ್ಲಿನಿಕ್ ಪ್ರಶಸ್ತಿಯನ್ನು ಫೂಟ್‌ಸೆಕ್ಯೂರ್‌ಗೆ ನೀಡಲಾಯಿತು. ಡಾ ಸಂಜಯ್ ಶರ್ಮಾ ಅವರಿಗೆ 2020 ರಲ್ಲಿ ಕರ್ನಾಟಕ ಸರ್ಕಾರ ಮತ್ತು ಟೈಮ್ಸ್ ಆಫ್ ಇಂಡಿಯಾದಿಂದ ಹೆಲ್ತ್ ಕೇರ್ ಅಚೀವರ್ಸ್ ಪ್ರಶಸ್ತಿಯಲ್ಲಿ ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ನೀಡಲಾಗಿದೆ.
FootSecure ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡಲು ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಸುಮಾರು 1,500 ವೈದ್ಯರು ಮತ್ತು ಶಸ್ತ್ರಚಿಕಿತ್ಸಕರಿಗೆ ಮಧುಮೇಹ ಪಾದವನ್ನು ಗುರುತಿಸುವುದು ಮತ್ತು ನಿರ್ವಹಿಸುವುದು, ಪಾದದ ವಿವಿಧ ಸ್ಕ್ಯಾನ್‌ಗಳನ್ನು ವಿಶ್ಲೇಷಿಸುವುದು ಮತ್ತು ಸರಿಯಾದ ಪಾದರಕ್ಷೆ/ಪೆಡ್ ಆರ್ಥೋಸಿಸ್ ಅನ್ನು ಶಿಫಾರಸು ಮಾಡುವ ಬಗ್ಗೆ ತರಬೇತಿಯನ್ನು ಸಹ ನೀಡುತ್ತಿದೆ. ತಂತ್ರಜ್ಞಾನದಲ್ಲಿನ ಪ್ರಗತಿಗೆ ಅನುಗುಣವಾಗಿ FootSecure, ಡಿಜಿಟಲ್, ಕೃತಕ ಬುದ್ಧಿಮತ್ತೆ (AI)-ಶಕ್ತಗೊಂಡ ಗಾಯದ ಆರೈಕೆ ಅಪ್ಲಿಕೇಶನ್ - Wound360 ಅನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದ್ದಾರೆ. ಇದು ಜಗತ್ತಿನ ಎಲ್ಲೆಡೆ ಇರುವ ರೋಗಿಗಳಲ್ಲಿ ಆರಂಭಿಕ ಹಂತದಲ್ಲೇ ಹುಣ್ಣುಗಳನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಭಾರತದಾದ್ಯಂತ ತನ್ನ ಜಾಲವನ್ನು ವಿಸ್ತರಿಸುವುದು ಮತ್ತು ಭಾರತದಲ್ಲಿ ಪೊಡಿಯಾಟ್ರಿ ಮತ್ತು ಗಾಯದ ಆರೈಕೆಗಾಗಿ ಮೀಸಲಾದ ಆಸ್ಪತ್ರೆಯನ್ನು ಹೊಂದುವುದು ನಮ್ಮ ಯೋಜನೆಯಾಗಿದೆ ಎಂದು ಡಾ. ಶರ್ಮಾ ಹೇಳಿದರು. ಈ ವಿಸ್ತರಣಾ ಯೋಜನೆ ಮತ್ತು ಮೀಸಲಾದ ಆಸ್ಪತ್ರೆಯನ್ನು ಮಲ್ಟಿಪ್ಲೆಕ್ಸ್ ಗ್ರೂಪ್ ಆಫ್ ಕಂಪನೀಸ್‌ನ ಮಹೇಶ್ ಶೆಟ್ಟಿ ಅವರು ಸ್ಥಾಪಿಸಿದ ನಿಧಿಯಿಂದ ಚಿಕಿತ್ಸೆಯ ನೆರವು ನೀಲಾಗುತ್ತದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ:
ಡಾ ಸಂಜಯ್ ಶರ್ಮಾ
ಪೊಡಿಯಾಟ್ರಿಕ್ ಸರ್ಜನ್ ಮತ್ತು ಫೂಟ್ ಸೆಕ್ಯೂರ್ ಸಂಸ್ಥಾಪಕ
M: 8282829470 |ಇ ಮೇಲ್: sanjay@footsecure.com
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


