ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾನಿಲಯ, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಟೂರಿಸಂ, ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ಮತ್ತು ಇಂಟೀರಿಯರ್ ಡಿಸೈನ್ ವಿಭಾಗ, ಪಾಂಡೇಶ್ವರ, ಮಂಗಳೂರು ಜಂಟಿಯಾಗಿ "RANG - 2K23" (ಹೋಳಿ ಹಬ್ಬ) ಅನ್ನು ಮಾರ್ಚ್ 7, 2023 ರಂದು ಆಚರಿಸಲಾಯಿತು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ. ಸಿಎ ಎ. ರಾಘವೇಂದ್ರ ರಾವ್ ಅವರ ಮಾರ್ಗದರ್ಶನದೊಂದಿಗೆ ಮತ್ತು ಆಡಳಿತ ಮಂಡಳಿಯ ಟ್ರಸ್ಟಿ-ಸದಸ್ಯರಾದ ಶ್ರೀಮತಿ. ಎ.ವಿಜಯಲಕ್ಷ್ಮಿ ಆರ್.ರಾವ್, ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿವಿ ಪ್ರೊ ಚಾನ್ಸಲರ್ ಡಾ. ಎ .ಶ್ರೀನಿವಾಸ್ ರಾವ್ ಅವರು ವಿದ್ಯಾರ್ಥಿಗಳಿಗೆ ಬಣ್ಣಗಳನ್ನು ವಿತರಿಸುವ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆಡಳಿತ ಮಂಡಳಿಯ ಟ್ರಸ್ಟಿ-ಸದಸ್ಯೆ ಪ್ರೊ. ಇಆರ್. ಎ. ಮಿತ್ರ ಎಸ್. ರಾವ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.
ಶ್ರೀನಿವಾಸ್ ವಿವಿ ಉಪಕುಲಪತಿ ಡಾ.ಪಿ.ಎಸ್.ಐತಾಳ್ ಮತ್ತು ರಿಜಿಸ್ಟ್ರಾರ್ (ಅಭಿವೃದ್ಧಿ) ಡಾ.ಅಜಯ್ ಕುಮಾರ್ ಗೌರವ ಅತಿಥಿಗಳಾಗಿದ್ದರು.
ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ & ಟೂರಿಸಂ ಡೀನ್ ಪ್ರೊ. ಸ್ವಾಮಿನಾಥನ್ ಎಸ್, ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ನ ಡೀನ್ ಡಾ. ಪವಿತ್ರಾ ಕುಮಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ

