ನಿಟ್ಟೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ಮಹಾವಿದ್ಯಾಲಯ ಹಾಗೂ ಸಿಂಗಾಪುರದ ಪ್ರತಿಷ್ಠಿತ ಜಿಯೋಸ್ಮಾರ್ಟ್ ಸಂಸ್ಥೆಯ ನಡುವಿನ ಶೈಕ್ಷಣಿಕ ಒಪ್ಪಂದಕ್ಕೆ ಸಹಿಹಾಕುವ ಕಾರ್ಯಕ್ರಮವು ಫೆ.27 ರಂದು ಆನ್ಲೈನ್ ಸಭೆಯ ಮೂಲಕ ನಡೆಯಿತು. ಒಪ್ಪಂದದ ಪ್ರಮಾಣಪತ್ರಕ್ಕೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವತಿಯಿಂದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಹಾಗೂ ಜಿಯೋಸ್ಮಾರ್ಟ್ ವತಿಯಿಂದ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಅವರು ಸಹಿಹಾಕಿದರು.
ಈ ಸಂದರ್ಭದಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ. ಎನ್ ವಿನಯ ಹೆಗ್ಡೆ, ಕುಲಪತಿ ಪ್ರೊ. ಡಾ.ಸತೀಶ್ ಕುಮಾರ್ ಭಂಡಾರಿ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ಐ ಆರ್ ಮಿತ್ತಂತಾಯ, ಐಐಸಿ ನಿರ್ದೇಶಕ ಡಾ. ಪರಮೇಶ್ವರನ್, ಅಡ್ವೈಸರ್ ಗೋಪಿನಾಥ್, ರೆಸಿಡೆಂಟ್ ಇಂಜಿನಿಯರ್ ಡಾ.ಶ್ರೀನಾಥ್ ಶೆಟ್ಟಿ, ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಭಟ್, ಸಹಾಯಕ ಪ್ರಾಧ್ಯಾಪಕ ಡಾ.ಶ್ರೀರಾಮ್ ಮರಾಠೆ, ಜನಕರಾಜ್, ಪಿ.ಆರ್.ಒ ಕೃಷ್ಣರಾಜ ಜೋಯಿಸ ಹಾಗೂ ಜಿಯೋಸ್ಮಾರ್ಟ್ ಸಂಸ್ಥೆಯ ನಿರ್ದೇಶಕ ಆಂಡ್ರೀವ್ಸ್, ಜನರಲ್ ಮ್ಯಾನೇಜರ್ ಭಾಸ್ಕರನ್, ಎಡ್ಮಿನ್ ಮ್ಯಾನೇಜರ್ ದೇವಸಹಾಯಂ ಸಿಂಥಿಯ, ನಿರ್ದೇಶಕ ವಿಲಿಯಂ, ಜಿ.ಎಂ ವೇಣು, ಮ್ಯಾನೇಜರ್ ಬಾಲಾಜಿ ಉಪಸ್ಥಿತರಿದ್ದರು.
ಈ ಒಪ್ಪಂದದ ಪ್ರಕಾರ ಜಿಯೋಸ್ಮಾರ್ಟ್ ಸಂಸ್ಥೆಯು ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ, ವಿಚಾರ ವಿನಿಮಯಗಳ ಮೂಲಕ ಸಹಕರಿಸಲಿದೆ. ಇದರೊಂದಿಗೆ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕರು ಜಿಯೋಸ್ಮಾರ್ಟ್ ಸಂಸ್ಥೆಯೊಂದಿಗೆ ವಿವಿಧ ಸಂಶೋಧನೆಗಳಲ್ಲಿ ಭಾಗಿಯಾಗಿ ವಿವಿಧ ಕನ್ಸಲ್ಟೆನ್ಸಿ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಲಿರುವರು. ಇದರೊಂದಿಗೆ ಜಿಯೋಸ್ಮಾರ್ಟ್ ಸಂಸ್ಥೆಯು ನಿಟ್ಟೆ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಹಾಗೂ ಉದ್ಯೋಗಾವಕಾಶಗಳನ್ನೂ ನೀಡಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ