ಶಕ್ತಿನಗರ- ದತ್ತನಗರ ಪಾರ್ಕ್‌: ಶಾಸಕ ಕಾಮತ್‌ ಉದ್ಘಾಟನೆ

Upayuktha
0

ಮಂಗಳೂರು: ಶಕ್ತಿನಗರದ ದತ್ತ ನಗರದಲ್ಲಿ ಹೊಸದಾಗಿ ನಿರ್ಮಿಸಿದ ಪಾರ್ಕ್ ಅನ್ನು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ನೆರವೇರಿಸಿದರು.


ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ದಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿ ಇದಾಗಿದ್ದು, ಒಟ್ಟಾರೆ 500 ಕೋಟಿ ರೂ ಕಾಮಗಾರಿಗಳು ನಗರದಲ್ಲಿ ನಡೆಯಲಿವೆ. ನಮ್ಮ ಯೋಜನೆಯಂತೆ ಈ ಹೊತ್ತಿಗಾಗಲೇ ಬಹುತೇಕ ಕಾಮಗಾರಿಗಳು ಮುಗಿದಿರಬೇಕಿತ್ತು. ಆದರೆ ಕರೋನಾ ಮಹಾಮಾರಿಯ ಕಾರಣದಿಂದ ಕಾರ್ಮಿಕರೆಲ್ಲ ಅವರ ಊರಿಗೆ ತೆರಳಿದ್ದರಿಂದ ಕಾಮಗಾರಿ ಕುಂಟುತ್ತ ಸಾಗಿತು ಎಂದು8 ಶಾಸಕ ಕಾಮತ್‌ ವಿವರಿಸಿದರು.


500 ಕೋಟಿ ಕಾಮಗಾರಿ ಮಂಗಳೂರು ನಗರದಲ್ಲಿ ನಡೆಯಲಿವೆ, ನಮ್ಮ ಸತತ ಪ್ರಯತ್ನದಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ಆ ತೃಪ್ತಿ ನಮಗಿದೆ. ನೇತ್ರಾವತಿ ನದಿಯ ಕಿನಾರೆಯಲ್ಲಿ ರಿವರ್ ಫ್ರಂಟ್ ಯೋಜನೆಯಡಿ  300 ಕೋಟಿ ರೂ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುವುದು . 114 ಕೋಟಿ ರೂ ನಲ್ಲಿ ಸೆಂಟ್ರಲ್ ಮಾರುಕಟ್ಟೆ ಕಟ್ಟಡ, 65 ಕೋಟಿ ವೆಚ್ಚದಲ್ಲಿ ಸುಲ್ತಾನ್ ಬತ್ತೇರಿ ವಿಶೇಷ ಸೇತುವೆ ನಿರ್ಮಾಣದ ಕಾಮಗಾರಿಗಳು ನಡೆಯಲಿವೆ.


2023 ಮಾರ್ಚ್ ಒಳಗೆ ಸರಿಸುಮಾರು 400 ಕೋಟಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಕಣ್ಣಿಗೆ ತೋರಿಸುವ ಇರಾದೆ ಇತ್ತು. ಮಂಗಳೂರಿನ ಕಾರ್ಮಿಕರು ರಸ್ತೆ ಕಾಮಗಾರಿಗೆ ಬರುವುದಿಲ್ಲ. ಬಿಜಾಪುರ, ಉತ್ತರ ಪ್ರದೇಶದಿಂದ ಬಂದ ಕಾರ್ಮಿಕರು ಕರೋನಾ ಕಾಲದಲ್ಲಿ ಊರಿಗೆ ಹೋದರು. ಮತ್ತೆ ಬರಲಿಲ್ಲ. ಹಾಗಾಗಿ ಅಭಿವೃದ್ಧಿ ಕಾರ್ಯ ನಿಧಾನಗತಿ ಆಯಿತು ಎಂದು ಶಾಸಕ ಕಾಮತ್ ವಿವರಿಸಿದರು. 


2025ರ ಒಳೆಗ ಮಂಗಳೂರಿನ ಚಿತ್ರಣವನ್ನೇ ಬದಲಿಸುವ ಭರವಸೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು.


ಹಿಂದಿನ ಶಾಸಕರ  5 ವರ್ಷ ಅವಧಿಯಲ್ಲಿ ಎಷ್ಟು ಕಾಮಗಾರಿ ಆಯಿತು. ನನ್ನ ಅವಧಿಯಲ್ಲಿ ಎಷ್ಟಾಯಿತು ಅಂತ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದು ತುಲನೆ ಮಾಡಿ ಎಂದು ಅವರು ಜನತೆಗೆ ಕರೆ ನೀಡಿದರು.


ನಗರದ ಅಭಿವೃದ್ಧಿ ಯೋಜನೆಗಳಿಂದ ನಗರಪಾಲಿಕೆಗೆ  ವರ್ಷಕ್ಕೆ 100 ಕೋಟಿಯಂತೆ 2 ವರ್ಷಕ್ಕೆ 200 ಕೋಟಿ ಆದಾಯ ಬರಬೇಕಿತ್ತು. ಆದರೆ 88 ಕೋಟಿ ಮಾತ್ರ ಬಂದಿದೆ.  ಜತೆಗೆ 385 ಕೋಟಿ ರೂ ಹಳೆಯ ಸಾಲವಿತ್ತು. ಇಂತಹ ಪರಿಸ್ಥಿತಿಯಲ್ಲಿ ಅನುದಾನವನ್ನು ಹೊಂದಿಸಿ ನಗರದ ಅಭಿವೃದ್ಧಿಗೆ ಬಹಳಷ್ಟು ಶ್ರಮ ವಹಿಸಲಾಗಿದೆ ಎಂದು ಅವರು ನಡಿದರು. 


ಕೆರೆ ಅಭಿವೃದ್ಧಿ ಹಣ, ಪಾರ್ಕ್‌ ಅಭಿವೃದ್ಧಿ ಹಣ, ತೆರಿಗೆ ಹಣ ಇವನ್ನೆಲ್ಲ ಹೊಂದಿಸಿಕೊಂಡು ಕಾಮಗಾರಿಗಳನ್ನು ನಡೆಸಲಾಗಿದೆ.


ಮೂಡಾ ಅಧ್ಯಕ್ಷ ರವಿ ಶಂಕರ ಮಿಜಾರು, ಮೂಡ ಆಯುಕ್ತ ಭಾಸ್ಜರ ಅವರು ಚಿಂತನೆ ಮಾಡಿ ಮೂಡಾದಲ್ಲಿರುವ ಹಣವನ್ನು ಅಭಿವೃದ್ಧಿಗೆ ಬಳಸಲು ಯೋಜನೆ ರೂಪಿಸಿದೆವು ಎಂದು ಕಾಮತ್‌ ಹೇಳಿದರು.


ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕೆರೆ ಅಭಿವೃದ್ಧಿ ಮತ್ತು ಪಾರ್ಕ್ ಗಳ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದು ಅವರು ನುಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top