ಯುವಜನತೆಯಲ್ಲಿನ ವರ್ತನೆಯ ಬದಲಾವಣೆ ಕುರಿತ ಅರಿವು ಕಾರ್ಯಕ್ರಮ

Upayuktha
0

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸಮಾಜಶಾಸ್ತ್ರ ವಿಭಾಗ ಮತ್ತು ಮಹಿಳಾ ಕೋಶದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ "ಯುವಜನತೆಯಲ್ಲಿನ ವರ್ತನೆಯ ಬದಲಾವಣೆಯ" ಕುರಿತು ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಎನ್. ನರಸಿಂಹ ಭಟ್ ಇವರು ವಹಿಸಿದ್ದರು ಹಾಗೂ ಮುಖ್ಯ ಅತಿಥಿಯಾಗಿ ಅನಿಲಾ ದೀಪಕ್ ಶೆಟ್ಟಿಯವರು ಉಪಸ್ಥಿತರಿದ್ದರು. ಹಾಗೂ ಗೌರವಾನ್ವಿತರಾಗಿ ರಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅನಿತಾ ಕಾಮತ್ ಮತ್ತು ಸಮಾಜಶಾಸ್ತ್ರದ ಮುಖ್ಯಸ್ಥರಾದ ವಿದ್ಯಾ ಎಸ್ ಇವರು ಉಪಸ್ಥಿತರಿದ್ದರು.


ಈ ಕಾರ್ಯಕ್ರಮದಲ್ಲಿ ಗೌರವಾನ್ವಿತರಾದ ವಿದ್ಯಾ ಎಸ್ ಇವರು ಯಾವ ರೀತಿಯಾಗಿ ಮಹಿಳೆಯರು ಸಮಾಜದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಯುವ ಜನತೆಯಲ್ಲಿ ಉಂಟಾಗುವ ಬದಲಾವಣೆ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಹಾಗೂ ಇದನ್ನು ಯಾವ ರೀತಿಯಾಗಿ ಧನಾತ್ಮಕವಾಗಿ ಪರಿವರ್ತಿಸಬೇಕು ಎಂಬುದರ ಬಗ್ಗೆ ತಿಳಿಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಂತಹ ಅನಿಲಾ ದೀಪಕ್ ಶೆಟ್ಟಿ ಇವರು ವಿಶ್ವಮಟ್ಟದಲ್ಲಿ ಮಹಿಳಾ ದಿನಾಚರಣೆಗೆ ಸ್ಥಾನಮಾನ ಕೊಟ್ಟವರನ್ನು ಸ್ಮರಿಸುತ್ತ ಹಾಗೂ ಹಿಂದಿನ ಜನಾಂಗ ಮತ್ತು ಈಗಿನ ಜನಾಂಗಕ್ಕೆ ಇರುವಂತಹ  ವ್ಯತ್ಯಾಸಗಳನ್ನು ತಿಳಿಸಿದ ಇವರು ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯ ವಾಕ್ಯವಾದಂತಹ ತಾಂತ್ರಿಕತೆ ಮತ್ತು ನೈಪುಣ್ಯತೆಯಿಂದ ಯಾವ ರೀತಿಯಾಗಿ ಲಿಂಗ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಮತ್ತು ವಿದ್ಯಾರ್ಥಿಗಳೊಂದಿಗೆ ಬೆರೆತು ಯುವ ಜನತೆಯಲ್ಲಿ ಉಂಟಾಗುವ ಏರುಪೇರಿನ ಬಗೆಗೆ ಮತ್ತು ಅತಿ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ಆಗುವ ಪರಿಣಾಮಗಳ ಕುರಿತು ಅರಿವನ್ನು ಮೂಡಿಸಿದರು.


- ಯಶಸ್ವಿನಿ ಅಜಿರ

ಸಮಾಜಶಾಸ್ತ್ರ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು ಪುತ್ತೂರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top