ಬೊಂಬೆಗಳ ಲೋಕಕ್ಕೆ ಬನ್ನಿ...
ಮಂಗಳೂರು: ಕರ್ನಾಟಕದ ಅಗ್ರಮಾನ್ಯ ಆಧುನಿಕ ಬೊಂಬೆಯಾಟಗಾರ ಶ್ರವಣ್ ಹೆಗ್ಗೋಡು ನಿರ್ದೇಶನದ ಬುನ್ರಾಕು ಗೊಂಬೆಯಾಟ ಪ್ರದರ್ಶನ 'ಪುರ್ಸನ ಪುಗ್ಗೆ' ನಗರದ ಕಲಾಭಿ ಥಿಯೇಟರ್ ನಲ್ಲಿ ಮಾರ್ಚ್ 28 ರಂದು ನಡೆಯಲಿದೆ.
ಶ್ರವಣ್ ಹೆಗ್ಗೋಡು ಮಾರ್ಗದರ್ಶನದಲ್ಲಿ ಮಾರ್ಚ್ 10 ರಿಂದ ಪ್ರಾರಂಭವಾಗಿರುವ 20 ದಿನಗಳ ಬುನ್ರಾಕು ಗೊಂಬೆಯಾಟ ಕಾರ್ಯಗಾರದಲ್ಲಿ ಅವಿನಾಶ್ ರೈ, ಚೇತನ್ ಕೊಪ್ಪ, ಅಕ್ಷತಾ ಕುಡ್ಲ, ಉಜ್ವಲ್ ಯು.ವಿ, ಭುವನ್ ಮಣಿಪಾಲ್, ಗಣೇಶ್ ಕೆ.ವಿ., ಕಾರ್ತಿಕ್ ಸನಿಲ್, ಉದಿತ್ ಯು.ವಿ., ಅಭಿಷೇಕ್ ಬಿ.ಎಚ್ ಭಾಗವಹಿಸಿದ್ದು, ಬನ್ರಾಕು ಗೊಂಬೆಯಾಟದ ಸಾಧ್ಯತೆಗಳನ್ನು ಅನ್ವೇಷಿಸುವ ಪ್ರಯತ್ನವೊಂದನ್ನು ನಡೆಸಲಾಗಿದೆ.
ರಕ್ತೇಶ್ವರಿ ದೇವಸ್ಥಾನ ಸಮೀಪದ ಕಲಾಭಿ ಥಿಯೇಟರ್ ನಲ್ಲಿ ಸಾರ್ವಜನಿಕರಿಗಾಗಿ ಮಾ. 28 ರಂದು ನಡೆಯಲಿರುವ ಡೆಮೊ ಪ್ರದರ್ಶನದೊಂದಿಗೆ ಕಾರ್ಯಾಗಾರ ಕೊನೆಗೊಳ್ಳಲಿದೆ. ಇದು 15 ನಿಮಿಷಗಳ ಪ್ರದರ್ಶನವಾಗಿದ್ದು ಅಲ್ಲಿ ಬೊಂಬೆಗಳು ನಿಷ್ಪಾಪ ವಾಸ್ತವಿಕ ರೀತಿಯಲ್ಲಿ ಕಥೆಯನ್ನು ಹೇಳಲಿವೆ ಎಂದು ಕಲಾಭಿಯ ಕಾರ್ಯದರ್ಶಿ ಉಜ್ವಲಿ ಯುವಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ