“ನನ್ನ ಕೇಸು ಇಂದು ನ್ಯಾಯಾಲಯದ ಮುಂದೆ ತೀರ್ಪಿಗಿದೆ. ಬೇಗ ಹೋಗಬೇಕು, ಇಲ್ಲದಿದ್ದರೆ ವಾರೆಂಟ್ ಆದರೆ ಕಷ್ಟ" ಎಂದು ಹೇಳುತ್ತ ಕುಮಾರ ಶರವೇಗದಲ್ಲಿ ನಡೆಯುತ್ತಿದ್ದನು. ಅಷ್ಟರಲ್ಲಿ ಕೋರ್ಟಿನ ಆವಾರ ಬಂತು, ಬರಬರುತ್ತಲೇ ಕುಮಾರನ ಕೇಸನ್ನು ಕರೆದುಬಿಟ್ಟರು. ಅವನು ಒಳಗೆ ಹೋಗುವುದರೊ ಳಗೆ ಅವನಿಗೆ ವಾರೆಂಟ್ ಆಗಿ ಹೋಯಿತು. ಯಾಕೆಂದರೆ ಕ್ರಿಮಿನಲ್ ಕೇಸುಗಳೇ ಹಾಗೆ, ಏನು ಮಾಡುವುದು ಕ್ಷಣಾರ್ಧದಲ್ಲಿ ಎಲ್ಲ ನಡೆದು ಹೋಯಿತು.
ಅಂತೆಯೇ, ಗಿರಿ ಸಿವಿಲ್ ಕೇಸಿನಲ್ಲಿ ಸಾಕ್ಷಿಯನ್ನು ನೀಡಲು ಬಂದಿದ್ದನು. ಆದರೆ ಏನು ಮಾಡುವುದು, ಸಾಕ್ಷಿಗಾಗಿ ವಕೀಲರು ಗಿರಿಗೆ ಹೇಗೆ ಹೇಳಬೇಕೆಂಬುದರ ಕುರಿತು ಮಾಹಿತಿಯನ್ನು ನೀಡಿದ್ದರು. ಆದರೆ ಅಂದು ನ್ಯಾಯಾಲಯಕ್ಕೆ ಬರುವ ವೇಳೆಗೆ ನ್ಯಾಯಾಧೀಶರು ರಜೆಯೆಂದರು.
ಹೀಗೆ ವಿವಿಧ ಸಮಸ್ಯೆಗಳ ಕುರಿತು ನಾವು ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗುತ್ತದೆ. ಆದರೆ ಇಲ್ಲಿ ನಾವು ನೇರವಾಗಿ ನ್ಯಾಯಾಲಯಕ್ಕೆ ಹೋಗುವುದಿಲ್ಲ ನಮ್ಮನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ವಕೀಲರಿಗೆ ಅಧಿಕಾರವನ್ನು ನೀಡುತ್ತೇವೆ. ವಕೀಲರು ಮತ್ತು ಕಕ್ಷಿದಾರರ ನಡುವೆ ಯಾವ ರೀತಿಯ ಸಂಬಂಧವಿರುತ್ತದೆ ಎಂಬುದರ ಕುರಿತು ಅರಿಯೋಣ.
ನ್ಯಾಯಲಯದಲ್ಲಿ ತಮ್ಮ ಕೇಸನ್ನು ಗೆದ್ದುಕೊಟ್ಟರೆ ಕಕ್ಷಿದಾರರು ಅಂದು ತಮ್ಮ ವಕೀಲರನ್ನು ಹೊಗಳುತ್ತ ಮನೆಗೆ ಹೋಗುತ್ತಾರೆ. ಆದರೆ ಕೇಸಿನಲ್ಲಿ ಸೋತಿದ್ದರೆ ತೆಗಳುತ್ತಾ ಸಾಗುತ್ತಾರೆ. ಇದು ಮನುಜ ಸಹಜವಾದ ಗುಣವಾಗಿದೆ. ಕಾರಣವೆಂದರೆ-
Client; A lawyers profession is contingent upon his getting clients, his success is contingent upon the degree of weakness of his opponents case. His fame is contingent upon his getting more and more cases, which is contingent upon his success in the cases and that is contingent upon many circumstances. First thing for a lawyer is to get a client. Suppose a client comes to an advocate, how he/she should be treated by the advocate. Here are some clues to the beginners as well as to those who think they know every thing of the profession but the “work shop” conducted by the Bar Council of Karnataka where in the author had an opportunity of submitting the papers for discussion.
ಕಕ್ಷಿದಾರರು ಮತ್ತು ವಕೀಲರು - ಇಂಗ್ಲೀಶ್ ನ client ಎಂಬುವುದು ವ್ಯಾಪಾರಿ, ವ್ಯವಹಾರಿ, ಗ್ರಾಹಕ, ಖರೀದಿಗಾರ ಹೀಗೆ ನಾನಾರ್ಥಗಳನ್ನು ಕೊಡುತ್ತದೆ. ಇಲ್ಲಿ ವಕೀಲರ ಕುರಿತು ಕ್ಲೈಂಟ್ ಎಂದರೆ ನಾವು “ಗ್ರಾಹಕನು ತನ್ನ ಕಾನೂನು ರಿತ್ಯ ತಕರಾರುಗಳನ್ನು ನ್ಯಾಯಾಲಯದಲ್ಲಿ ವ್ಯಾಪಾರಿ ನಾಥೆಯಿಂದ ಬಗೆಹರಿಸಿಕೊಳ್ಳಲು ತನ್ನ ಪರವಾಗಿ ನೇಮಿಸಿಕೊಂಡ ವ್ಯಕ್ತಿಯಾಗಿರುತ್ತಾನೆಂದು ನಾವು ಒಂದು ಪೀಠಿಕೆಯನ್ನು ಕಾಣಬಹುದು. ಆದರೆ ವಕೀಲ ವೃತ್ತಿಯು ವ್ಯಾಪಾರವಲ್ಲ. ಕಾರಣ ವ್ಯವಹಾರವು ಒಂದು ವಸ್ತುವಿಗೆ ಇಂತಿಷ್ಟೇ ಮೌಲ್ಯವೆಂದು ಗುರುತಿಸಲ್ಪಡುತ್ತದೆ. ಆದರೆ ವಕೀಲ ವೃತ್ತಿಯು ಹಾಗಲ್ಲ. ನಮ್ಮ ಕಕ್ಷಿದಾರರು ತಮ್ಮ ತಂಟೆ- ತಕರಾರುಗಳಿಗೆ ಸಂಬಂಧಿಸಿದ ಅನೇಕ ರೀತಿಯ ಗುಟ್ಟುಗಳನ್ನು ತಮ್ಮ ವಕೀಲರಲ್ಲಿ ಅತ್ಯಂತ ವಿಶ್ವಾಸವಿಟ್ಟು ಹೇಳುತ್ತಾರೆ. ಆದರೆ ವಕೀಲರು ಕೂಡ ಅದೇ ವೇಗದಲ್ಲಿ ಕಕ್ಷಿದಾರರ ಭಾವನೆಗಳಿಗೆ ಸ್ಪಂದಿಸಬೇಕು. ಅಂದಾಗ ಮಾತ್ರ ಅಲ್ಲಿ ವೃತ್ತಿಯ ಪ್ರಶ್ನೆ ಉದ್ಭವವಾಗುತ್ತದೆ. ಇಲ್ಲದಿದ್ದರೆ ಕೇವಲ ಸಂಬಂಧವಾಗುತ್ತದೆ. ಕಕ್ಷಿದಾರರು ಯಾರ ಪರವಾಗಿ ವ್ಯವಹರಣೆ ಮಾಡುವರೋ ಅವರು ನಮ್ಮ ಕಕ್ಷಿದಾರರ ವಾದಿಗಳೆಂದೂ ಮತ್ತು ಯಾರ ವಿರುದ್ಧವಾಗಿ ವ್ಯವಹರಣೆಯನ್ನು ದಾಖಲಿಸುವರೋ ಅವರನ್ನು ಪ್ರತಿಸ್ಪರ್ಧಿ ಅಥವಾ ಪ್ರತಿವಾದಿಗಳೆಂದೂ ಕರೆಯುವರು. ಅವರಿಬ್ಬರು ಯುದ್ಧಭೂಮಿಯಲ್ಲಿ ನಿಂತ ಉಭಯ ಪ್ರತಿಸ್ಪರ್ಧಿಗಳಂತಿರುತ್ತಾರೆ. ಆದರೆ ಇಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳಲ್ಲ, ವಿರೋಧಿಗಳಲ್ಲ ಮತ್ತು ಸ್ನೇಹಿತರು ಆಗಿರುವುದಿಲ್ಲ. ಕೇವಲ ಕಾನೂನೆಂಬ ಯುದ್ಧ ಭೂಮಿಯಲ್ಲಿ ಸತತ ಯುದ್ಧವನ್ನು ಹುಡುಕುವ ಪ್ರತಿಸ್ಫರ್ಧಿಗಳಾಗಿರುತ್ತಾರೆ ಮತ್ತು ತಮ್ಮ ನಿಲುವಿಗೆ ಬೇಕಾಗಿರುವ ಪರಿಕರಗಳನ್ನು ವಕೀಲರಿಗೆ ಪೂರೈಸುವ ವ್ಯಕ್ತಿಗಳಾಗಿರುತ್ತಾರೆ. ಇಲ್ಲಿ ವಕೀಲರು ಮತ್ತು ಕಕ್ಷಿದಾರರ ಸಂಬಂಧವನ್ನು ಕೇವಲ ಅಕ್ಷರಗಳಲ್ಲಿ ವರ್ಣಿಸುವುದು ಅಷ್ಟು ಸುಲಭವಾಗಿಲ್ಲ. ಅದನ್ನು ಅನುಭವಿಸಬೇಕು ಆಗ ಮಾತ್ರ ಅದರ ಶ್ರೇಷ್ಠತೆಯ ಅರಿವು ಉಂಟಾಗುತ್ತದೆ.
ಪ್ರಾಥಮಿಕವಾಗಿ ಕಕ್ಷಿದಾರರು ವಕೀಲರ ಕಛೇರಿಗೆ ಭೇಟಿ ನೀಡಿದಾಗ ವಕೀಲರು ಯಾವ ರೀತಿಯಲ್ಲಿ ಅವರನ್ನು ನಡೆಸಿಕೊಳ್ಳುತ್ತಾರೆ ಎನ್ನುವುದು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಕಕ್ಷಿದಾರರು ಕಾನೂನು ತೊಡಕಿನಿಂದ ವಕೀಲರ ಕಛೇರಿಯ ಕದವನ್ನು ತಟ್ಟುತ್ತಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ಮೊದಲು ಬೇಕಾಗಿರುವುದು ಧೈರ್ಯ. ಅಂತಹ ಧೈರ್ಯವನ್ನು ವಕೀಲರು ತಮ್ಮ ಪಕ್ಷಗಾರರಲ್ಲಿ ಮೊದಲು ತುಂಬಬೇಕು. ಕಕ್ಷಿದಾರರ ವಿರುದ್ಧ ಪಕ್ಷಗಾರರ ವ್ಯವಹರಣೆಯಲ್ಲಿರುವ ಲೋಪ-ದೋಷಗಳನ್ನು ಪಕ್ಷಗಾರರಿಗೆ ಹೇಳುವುದರಿಂದ ಮತ್ತು ಆ ಮೂಲಕ ಪಕ್ಷಗಾರರ ಸಮಸ್ಯೆಗಳಿಗೆ ಸ್ಪಂದಿಸುವುದರಿಂದ ಕಕ್ಷಿದಾರರಿಗೆ ತುಂಬ ಧೈರ್ಯವುಂಟಾಗುತ್ತದೆ. ಇಲ್ಲದಿದ್ದರೆ ಅವರಿಗೆ ವಕೀಲರ ಮೇಲೆ ವಿಶ್ವಾಸವನ್ನು ಯಾವ ರೀತಿಯಲ್ಲಿಡಬೇಕು ಎನ್ನುವುದರ ಕುರಿತು ಗೊಂದಲವೇರ್ಪಡುತ್ತದೆ. ವಕೀಲರು ಮತ್ತು ಕಕ್ಷಿದಾರರ ಕಾರ್ಯಾಚರಣೆಯ ಕುರಿತು ಯಾವ ರೀತಿಯಲ್ಲಿರಬೇಕು? ಎನ್ನುವುದರ ಕುರಿತು ಅನೇಕ ಕಾರ್ಯಾಗಾರಗಳು ನಡೆಯುತ್ತವೆ. ಇವುಗಳಿಂದ ನಾವು ನಮ್ಮ ನಡಾವಳಿಗಳನ್ನು ಹೇಗೆ ಬೆಳೆಸಿಕೊಳ್ಳಬೇಕು? ಎಂದು ಕೆಲವು ಸೂಚನೆಗಳನ್ನು ಮತ್ತು ಸಲಹೆಗಳನ್ನು ನೀಡುತ್ತೇವೆ. ಇದರಿಂದ ನಾವು ಕೆಲವು ಉಪಯೋಗಗಳನ್ನು ಪಡೆಯುತ್ತೇವೆ.
- ಸರಸ್ವತಿ ಹೆಗಡೆ
ವಕೀಲರು, ಶಿರಸಿ
ಮೊಬೈಲ್: 9480420950
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ