ಮುದ್ದಿಸಲು ಹೊರಡುವಾಗ ಬೆಕ್ಕು ಅಡ್ಡ ಬಂದಂತೆ ಆಯ್ತು
ಮನಸಿರದ ಗಾಳಿಗೆ ಕಾರ್ಮೋಡವೂ ತಗ್ಗಿ ನಿಂದಂತೆ ಆಯ್ತು
ಮುನಿಸಿನಲ್ಲಿ ನಾಚಿಕೆ ಮುಳ್ಳಿನ ಎಲೆಯಾಗಿ ಹೋದೆಯೇನು
ಸಾಕ್ಷಿ ಇಲ್ಲದ ವಾದದಲ್ಲೆಂತು ತೀರ್ಮಾನ ಎಂಬಂತೆ ಆಯ್ತು
ಸಡಗರದ ಕೋಲ್ಮಿಂಚು ಇರುವುದಾದರೂ ಎಷ್ಟು ಕಾಲ
ಹೊಳೆ ಹೊಳೆವ ಮುಖ ಚಂದ್ರ ಕುಂದಿ ಹೋದಂತೆ ಆಯ್ತು
ಮಿನುಗುವ ತಾರೆಗಳಿಗೂ ಅವಸಾನ ಕಾಲ ಇಲ್ಲವೇನು
ನಂಬಿ ಕೆಟ್ಟ ಉಲ್ಕೆಯ ದರ್ಶನ ಭ್ರಮೆ ತಂದಂತೆ ಆಯ್ತು
ಮುಗಿಯುವುದುಂಟೇ ಸಾಗರದ ಉದ್ದಗಲಗಳು ಸುರೇಶ
ಅನಂತ ಆಕಾಂಕ್ಷೆಗಳಿಗೆ ಇನ್ನೂ ಅವಕಾಶ ಕಂಡಂತೆ ಆಯ್ತು
-ಡಾ ಸುರೇಶ ನೆಗಳಗುಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ