ಪಣಜಿಯಲ್ಲಿ 'ವಸಂತೋತ್ಸವ ಗೋವಾ' ಸಂಭ್ರಮ

Upayuktha
0

ಪಣಜಿ: ಸಂಪದ್ಭರಿತವಾದ ನಾಡು ನಮ್ಮ ಕರ್ನಾಟಕ, ಕರ್ನಾಟಕದಲ್ಲಿ ಎಲ್ಲ ಸಂಪನ್ಮೂಲಗಳೂ ಸಹಿತ ಸಿಗುತ್ತದೆ. ವಸಂತ ಕಾಲದಲ್ಲಿ ಮಲೆನಾಡು ಭಾಗಕ್ಕೆ ತೆರಳಿದರೆ ವಸಂತ ಋತುವಿನ ಅನುಭವವನ್ನು ನಾವು ಸವಿಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಚಿಕ್ಕಮಗಳೂರಿನಲ್ಲಿರುವ ಹಚ್ಚ ಹಸುರಿನ ಕಾಡು ನಮ್ಮನ್ನು ಹೊಸತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ವಸಂತ ಕಾಲದಲ್ಲಿ ಕುವೆಂಪು ರವರು ಹಲವಾರು ಕವನಗಳನ್ನು ರಚಿಸುವ ಮೂಲಕ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದವರು ಎಂದು ಸಾರ್ವಜನಿಕ ಗೃಂಥಾಲಯ ಇಲಾಖೆ ಬೆಂಗಳೂರು ನಿರ್ದೇಶಕ ಡಾ. ಸತೀಶಕುಮಾರ್ ಹೊಸ್ಮನಿ ಹೇಳಿದರು.


ಕನ್ನಡ ಸಂಘ ಜುವಾರಿನಗರ ಗೋವಾ ಮತ್ತು ಜನ್ಮಭೂಮಿ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗೋವಾ ವಾಸ್ಕೊ ರವೀಂದ್ರ ಭವನದಲ್ಲಿ ಆಯೋಜಿಸಿದ್ದ ವಸಂತೋತ್ಸವ ಗೋವಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.


ವೇದಿಕೆಯ ಮೇಲೆ ಉಪಸ್ಥಿತರಿದ್ದ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಮಾತನಾಡಿ, ನಾವು ಪರಿಸರ ರಕ್ಷಣೆ ಮಾಡಿದರೆ ಪರಿಸರನ್ನು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಾವು ಸಸಿಯನ್ನು ಮಕ್ಕಳಂತೆ ಬೆಳೆಸಬೇಕು, ಇದೇ ನಾವು ಪರಿಸರಕ್ಕೆ ಕೊಡುವ ದೊಡ್ಡ ಕೊಡುಗೆ. ನಾವು ನೆಟ್ಟು ಬೆಳೆಸಿದ ಲಕ್ಷಾಂತರ ಗಿಡಮರಗಳನ್ನು ನಾನು ನಿಮಗೆ ಒಪ್ಪಿಸುತ್ತಿದ್ದೇನೆ, ಈ ಗಿಡಮರಗಳನ್ನು ರಕ್ಷಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು ಎಂದರು.


ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ವಿಜಯಪುರ ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಮಾತನಾಡಿ, ಹೊರ ರಾಜ್ಯ ಗೋವಾದಲ್ಲಿ ಸಾಧಕರಿಗೆ ಇಂದು ಹಮ್ಮಿಕೊಂಡಿರುವ ಈ ವಸಂತೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿ ಸನ್ಮಾನ ಸ್ವೀಕರಿಸುತ್ತಿರುವ ಸಾಧಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಮೂಲಕ ಈ ಸಾಧಕರ ಜವಾಬ್ದಾರಿಯೂ ಇನ್ನೂ ಹೆಚ್ಚಿದಂತಾಗಿದೆ ಎಂದರು.


ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಜುವಾರಿ ನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಜುವಾರಿ ನಗರ ಕನ್ನಡ ಸಂಘದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಫರ್ತಾಬಾದ್, ಬೆಂಗಳೂರಿನ ಸಮಾಜ ಸೇವಕಿ ಡಾ. ವಸಂತ ಮುರಳಿ, ಸ್ಯಾಕ್ಸೊಫೋನ್ ವಾದಕಿ ಭಾರತಿ ಗೋಪಾಲ ಶಿವಪುರ, ಗೋವಾದ ಹೋಟೆಲ್ ಉದ್ಯಮಿ ನವೀನ್ ಶೆಟ್ಟಿ, ಹಿರೀಯ ಕನ್ನಡಿಗ ರುದ್ರಯ್ಯ ಹಿರೇಮಠ, ಗೋವಾ ರಾಜ್ಯ ಕಸಾಪ ಗೌ.ಕಾರ್ಯದರ್ಶಿ ನಾಗರಾಜ ಗೋಂದಕರ್ ಮತ್ತಿತರರು ಉಪಸ್ಥಿತರಿದ್ದರು.


ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಭಾರತ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಮಧುರ ಮಧುರವೀ ಮಂಜುಳಗಾನ ಗೋವಾ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಿತು. ಪಿ.ಎಂಡ್ ಪಿ ಡಾನ್ಸ್‌ ಅಕಾಡಮಿ ಮಡಗಾಂವ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಆಯೋಜಕ ಹಾಗೂ ಪತ್ರಕರ್ತ ಮಾರುತಿ ಬಡಿಗೇರ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top