ಶ್ರವಣಬೆಳಗೊಳದ ನೂತನ ಸ್ವಾಮೀಜಿ ರಚಿಸಿದ ಹೆಗ್ಗಡೆಯವರ ಕಲಾಕೃತಿ

Upayuktha
0


ಉಜಿರೆ: ಶ್ರವಣಬೆಳಗೊಳದ ಜೈನಮಠದ ನೂತನ ಭಟ್ಟಾರಕರಾಗಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಎಂಬ ನಾಮಕರಣದೊಂದಿಗೆ ಮಾ. 27 ರ ಸೋಮವಾರ ಪಟ್ಟಾಭಿಷಿಕ್ತರಾದ ಸ್ವಾಮೀಜಿ ತಮ್ಮ ಪೂರ್ವಾಶ್ರಮದಲ್ಲಿ ಅಪೂರ್ವ ಚಿತ್ರಕಲಾವಿದರೂ ಆಗಿದ್ದರು.


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಕಲಾಕೃತಿಯನ್ನು ರಚಿಸಿದ ಅವರು ಎರಡು ವರ್ಷಗಳ ಹಿಂದೆ ಹೆಗ್ಗಡೆಯವರಿಗೆ ಸಮರ್ಪಿಸಿದ್ದರು. ಅವರ ಕಲಾಕೌಶಲವನ್ನು ಶ್ಲಾಘಿಸಿ ಹೆಗ್ಗಡೆಯವರು ಅವರನ್ನು ಅಭಿನಂದಿಸಿದ್ದರು. ಈ ಕಲಾಕೃತಿಯನ್ನು ಧರ್ಮಸ್ಥಳದಲ್ಲಿ ಗ್ರಂಥಾಲಯದಲ್ಲಿ ಸಂರಕ್ಷಿಸಿ ಪ್ರದರ್ಶನಕ್ಕೆ ಇಡಲಾಗಿದೆ.


ಪೂರ್ವಾಶ್ರಮದಲ್ಲಿ ಆಗಮ ಇಂದ್ರ ಎಂಬ ಹೆಸರನ್ನು ಹೊಂದಿದ್ದ ಅವರು ಪದವಿಪೂರ್ವ ಶಿಕ್ಷಣ (ಪಿ.ಯು.ಸಿ.)ವನ್ನು ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪೂರೈಸಿದ್ದರು. ಆಗ ಸಿದ್ದವನ ಗುರುಕುಲದಲ್ಲಿ ವಾಸ್ತವ್ಯ ಇದ್ದರು. ಅವರ ತಾಯಿ ಮೂಲತಃ ಉಜಿರೆ ನಿವಾಸಿಯಾಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top