ಬೇಸಿಗೆ ಕಾಲದ ಬಿಸಿಲ ನರ್ತನ

Upayuktha
0


ಕಡುಬಿಸುಲು ಸುಡುಬಿಸುಲು

ಉರಿ ಉರಿಯುವ ಬಿಸಿಲು

ಸುಡುವ ನೆಲ ಸುಡುವ ಗಾಳಿ

ಸುಡುತಿಹವು ಮಡಿಕೆಯ ನೀರು


ಮುಂಜಾನೆ ಮಂಜು ಕವಿದ ವಾತಾವರಣ, ಮಧ್ಯಾಹ್ನ ಹೊತ್ತಿಗೆ ಸುಡು ಬಿಸಿಲು, ಇದು ಇತ್ತೀಚಿನ ದಿನಗಳಲ್ಲಿ ಕಂಡು ಬರುವ ವಾತಾವರಣ ಬದಲಾವಣೆಯ ದೃಶ್ಯ.


ಇದಕ್ಕೆ ಕಾರಣವೇನು ಹೊಸತಲ್ಲ, ನಾವೇ ಸ್ವತಃ ಹೀಗೆ ಮಾಡಿಕೊಂಡಿದ್ದೇವೆ.


ಒಂದು ಕಾಲವಿತ್ತು, ವಿಶಾಲವಾದ ಮರದಡಿ ಕುಳಿತುಕೊಂಡು, ಮಾತುಕತೆ ನಡೆಸುತ್ತಿದ್ದೆವು, ಆಟವಾಡುತ್ತ ಇದ್ದೆವು. ಆದರೆ ಈಗ ಆ ಕಾಲವೂ ಇಲ್ಲ, ಅಂತಹ ವಿಶಾಲವಾದ ಮರವೂ ಕಾಣಸಿಗುತ್ತಿಲ್ಲ.


 

ಎಲ್ಲೆಂದರಲ್ಲಿ ಬರಡು ಭೂಮಿ, ಬತ್ತಿ ಹೋದ ನದಿ-ಕೆರೆಗಳು, ಇವೇ ಕಣ್ಣಿಗೆ ಕಾಣಿಸುತ್ತವೆ. ಆಧುನಿಕ ಯುಗಕ್ಕೆ ಹೊಂದಿಕೊಳ್ಳುತ್ತಾ ಹೋದ ಮಾನವ, ಮರ-ಗಿಡಗಳನ್ನು ಕಡಿದು ಕಟ್ಟಡವನ್ನು ಬೆಳೆಸುತ್ತಿದ್ದಾನೆ. ತನಗೆ ತಾನೇ ಸಂಕಷ್ಟವನ್ನು ತಂದೊಡ್ಡುತ್ತಿದ್ದಾನೆ. ಅದರೊಂದಿಗೆ ಸಸ್ಯ ಹಾಗೂ ಪ್ರಾಣಿ ಸಂಕುಲಕ್ಕೂ ಕಷ್ಟವನ್ನು ತಂದೊಡ್ಡಿದ್ದಾನೆ. ವಾಸಿಸಲು ಸರಿಯಾದ ನೆಲೆ ಇಲ್ಲದೆ, ಕುಡಿಯಲು ನೀರಿಲ್ಲದೆ ಬದುಕುತ್ತಿರುವ, ಪ್ರಾಣಿ-ಪಕ್ಷಿಗಳ ನಡುವೆ, ಎಲ್ಲವೂ ಇದ್ದು, ಬಿಸಿಲಿನ ಶಾಖ ತಡೆಯಲಾಗದೆ, ಮಾನವನು ಒದ್ದಾಡುತ್ತಿದ್ದಾನೆ. ಮಾಡಬಾರದಂತಹ ತಪ್ಪು ಕೆಲಸಗಳನ್ನು ಮಾಡಿ ಈಗ ಸೂರ್ಯದೇವನಿಗೆ ಯಾಕೆ ಈ ರೀತಿಯ ಕೋಪ?  ಯಾಕೆ ತಾಪಮಾನವನ್ನು ಹೆಚ್ಚಿಸುತ್ತಿದ್ದಾನೆ? ಎಂದು ಕೇಳಿದರೆ ಅದು ಎಷ್ಟಕ್ಕೆ ಸರಿ?


ನಾವು ತಪ್ಪು ಮಾಡಿದ್ದೇವೆ ನಿಜ, ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ, ಆದರೆ ಇವತ್ತಿಗೂ ಆ ತಪ್ಪನ್ನು ಸರಿ ಮಾಡುವ ಶಕ್ತಿ ನಮ್ಮಲ್ಲಿದೆ, ಖಂಡಿತವಾಗಿಯೂ ಮನಸ್ಸಿದ್ದರೆ ಮಾರ್ಗವಿದೆ. ಅದಕ್ಕಾಗಿ ಬಿಸಿಲಿನಿಂದಾಗುತ್ತಿರುವಂತಹ ರೋಗಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸೋಣ, ಕೇವಲ ನಾವು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳ ಬಗ್ಗೆಯೂ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳೋಣ. ಸಾಧ್ಯವಾದಷ್ಟು ಗಿಡಮರಗಳನ್ನು ಪೋಷಿಸೋಣ. ಇದ್ದ ನೀರನ್ನು ಮಿತವಾಗಿ ಬಳಸಿ, ಅದರ ಮರುಬಳಕೆಯನ್ನು ಕಲಿತುಕೊಳ್ಳೋಣ. ಸಾಧ್ಯವಾದಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆಯನ್ನು ಮಾಡೋಣ. ನಾವು ಮನಸ್ಸು ಮಾಡಿದಲ್ಲಿ ತಾಪಮಾನವನ್ನು ಸ್ವಲ್ಪವಾದರೂ ಕಡಿಮೆ ಮಾಡುವ ಪ್ರಯತ್ನವನ್ನು ಮಾಡಬಹುದು. ಅದಕ್ಕಾಗಿ ಇಂದಿನಿಂದಲೇ ಪರಿಸರ ಸ್ನೇಹಿ ಕೆಲಸವನ್ನು ಮಾಡುವ ಪಣತೊಡೋಣ.

 ಸ್ವೀಡಲ್ ಬಳಕುಂಜೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top