ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಮಲ್ಲೇಶ್ವರಂ, ಬೆಂಗಳೂರು ಇವರು ನಡೆಸಿರುವ 2022ನೇ ಸಾಲಿನ "ಭರತನಾಟ್ಯಮ್ ಜೂನಿಯರ್ ಗ್ರೇಡ್" ಪರೀಕ್ಷೆಯಲ್ಲಿ ಬೆಂಗಳೂರಿನ ಅದಿತಿ ಆರ್. ದೇಶಪಾಂಡೆ 98.75% (395/400) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣಳಾಗಿದ್ದಾಳೆ.
ಇವಳು ಬೆಂಗಳೂರಿನ ಶರ್ಮಾಸ್ ಮಾಧುರಿ ನೃತ್ಯ ಕಲಾಮಂದಿರ ಸಂಸ್ಥೆಯ ಗುರುಗಳಾದ ಶ್ರೀಯುತ ಪಂಡಿತ್ ಗಜೇಂದ್ರ ಶರ್ಮಾ ಅವರ ಬಳಿ ಭರತನಾಟ್ಯವನ್ನು ಕಲಿಯುತ್ತಾ ಇದ್ದಾಳೆ.
ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಇವಳು, ಹಲವಾರು ಸಂಘ ಸಂಸ್ಥೆಗಳ, ಶಾಲೆಯವರು ಕೊಡಮಾಡುವ ಪ್ರಶಸ್ತಿಗಳು ಸೇರಿದಂತೆ ಕರ್ನಾಟಕ ಸರ್ಕಾರದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ರ ಸಾಲಿನ "ರಾಜ್ಯಮಟ್ಟದ ಬಾಲಪ್ರತಿಭೆ" ಪ್ರಶಸ್ತಿ ಪುರಸ್ಕೃತೆ. ಬೆಂಗಳೂರಿನ ಶ್ರೀಯುತ ರಾಘವೇಂದ್ರ ದೇಶಪಾಂಡೆ ಮತ್ತು ಶ್ರೀಮತಿ ಗೀತಾ ರಾಘವೇಂದ್ರ ದಂಪತಿಗಳ ಏಕೈಕ ಸುಪುತ್ರಿ. ಪ್ರಸ್ತುತ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬನಶಂಕರಿ ಇಲ್ಲಿ ಒಂಬತ್ತನೆ ತರಗತಿ ಮುಗಿಸಿ ಹತ್ತನೇ ತರಗತಿಗೆ ತೇರ್ಗಡೆಯಾಗಿದ್ದಾಳೆ.
ಇವಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಕ್ಕಿ ಭವಿಷ್ಯ ಉಜ್ವಲವಾಗಲಿ ಎಂಬ ಶುಭ ಹಾರೈಕೆ ನಮ್ಮದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ