ಮಾ.4: ಮೇಧಾವಿನಿ ವರಖೇಡಿ ನೃತ್ಯ ಪ್ರದರ್ಶನ ‘ಭಾರತ ನೃತ್ಯಂ’

Upayuktha
0

ಬೆಂಗಳೂರು: ಅಭಿನವ ಡ್ಯಾನ್ಸ್ ಕಂಪನಿಯ ಕಲಾತ್ಮಕ ನಿರ್ದೇಶಕ ದಂಪತಿಗಳು ಗುರು ಶ್ರೀಮತಿ ನಿರುಪಮ ರಾಜೇಂದ್ರ ಮತ್ತು ಟಿ.ಡಿ.ರಾಜೇಂದ್ರ ರವರ ಶಿಷ್ಯೆ ಕು.ಮೇಧಾವಿನಿ ವರಖೇಡಿರವರ ನೃತ್ಯ ಪ್ರದರ್ಶನ ‘ಭಾರತ ನೃತ್ಯಂ’ ದೈವಿಕ ನೃತ್ಯವನ್ನು ಇದೇ ಮಾರ್ಚ್ 4 ಶನಿವಾರ ಸಂಜೆ 6.00 ಗಂಟೆಗೆ ನಗರದ ಕನಕಪುರ ರಸ್ತೆಯ ಕೋಣನಕುಂಟೆಯ ಪ್ರೆಸ್ಟೀಜ್ ಶ್ರೀಹರಿ ಖೋಡೆ ಸೆಂಟರ್ ಫಾರ್ ಪರ್ಫರ್ಮಿಂಗ್ ಆರ್ಟ್ಸ್ ನಲ್ಲಿ ಆಯೋಜಿಸಲಾಗಿದೆ. 

ಖ್ಯಾತ ಸಂಸ್ಕೃತ ವಿದ್ವಾಂಸ ಶತಾವಧಾನಿ ಡಾ.ಆರ್.ಗಣೇಶ್ ಮತ್ತು ಸಂಗೀತ ಚೂಡಾಮಣಿ ಡಾ.ನಾಗವಲ್ಲಿ ನಾಗರಾಜ್ ಉಪಸ್ಥಿತಿಯಲ್ಲಿ ನವದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಡಾ.ಸಂಧ್ಯಾ ಪುರೇಚ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಸಮಾರಂಭದಲ್ಲಿ ಖ್ಯಾತ ನೃತ್ಯಗಾರ್ತಿ ಶ್ರೀಮತಿ ರಮಾ ಭಾರಧ್ವಾಜ್ , ಸಂವಿತ್ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ , ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್‍ನ ಗುರು ಶ್ರೀಮತಿ ಸುಮಾ ರಾಜೇಶ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. 

ನಟುವಾಂಗದಲ್ಲಿ ಗುರು ಶ್ರೀಮತಿ ನಿರುಪಮ ರಾಜೇಂದ್ರ, ಗಾಯನದಲ್ಲಿ ವಿ|| ರಘುರಾಮ ಆರ್, ವೇಣುವಾದನದಲ್ಲಿ ವಿ||ಜಯರಾಮ್ , ಮೃದಂಗಂನಲ್ಲಿ ವಿ|ದ್ವಾನ್‌ ಗುರುಮೂರ್ತಿ, ವೀಣೆ: ವಿದ್ವಾನ್‌ ಗೋಪಾಲ್, ಖಂಜಿರ, ವಿದ್ವಾನ್‌.ವಿ.ಪ್ರಸನ್ನ ಕುಮಾರ್ ಸಾಥ್ ನೀಡಲಿದ್ದಾರೆ.ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಭರವಸೆಯ ನೃತ್ಯಪಟು ಕು. ಮೇಧಾವಿನಿ ವರಖೇಡಿ

ಕು. ಮೇಧಾವಿನಿ ವರಖೇಡಿ ಓರ್ವ ಉತ್ತಮ ನೃತ್ಯಪಟು, ಸಂಸೃತ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರ ಕುಟುಂಬದಿಂದ ಬಂದವರು, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಶ್ರೀನಿವಾಸ ವರಖೇಡಿಯವರ ಪುತ್ರಿ. ಬೆಂಗಳೂರಿನ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಗುರುಗಳಾದ ಶ್ರೀಮತಿ ನಿರುಪಮಾ ಮತ್ತು ಶ್ರೀ ಟಿ.ಡಿ.ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಮತ್ತು ಕಥಕ್ ಕಲಿಯುತ್ತಿದ್ದಾರೆ. 

ಮೇಧಾವಿನಿ ತನ್ನ ಆರಂಭಿಕ ತರಬೇತಿಯನ್ನು ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್‍ನಲ್ಲಿ ಗುರು ಶ್ರೀಮತಿ ಸುಮಾ ರಾಜೇಶ್ ಅವರಲ್ಲಿ ಪಡೆದರು.  ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಗುರು ಶ್ರೀಮತಿ ನಿರುಪಮಾ ರಾಜೇಂದ್ರ ಅವರ ಸಮರ್ಥ ಮಾರ್ಗದರ್ಶನದಲ್ಲಿ ಮೇಧಾವಿನಿ ಅವರು ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ಪುನರುಜ್ಜೀವನಗೊಳಿಸಿದ ಮತ್ತು ಪುನರ್ನಿರ್ಮಿಸಿದ ನಾಟ್ಯಶಾಸ್ತ್ರದ ಕರಣಗಳ ಬಗ್ಗೆ ತರಬೇತಿಯನ್ನು ಪಡೆದಿದ್ದಾರೆ

ಗುರು ಶ್ರೀಮತಿ ನಿರುಪಮಾ ರಾಜೇಂದ್ರ ಅವರು ಸಂಶೋಧಿಸಿ ವಿನ್ಯಾಸಗೊಳಿಸಿದ ದೇಶಿ ಮಾರ್ಗ ಅಡವು, 108 ಸೂಕ್ಷ್ಮವಾಗಿ ರಚಿಸಲಾದ ಹೊಸ ಚಲನೆಯ ಶಬ್ದಕೋಶದಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಮೇಧಾವಿನಿ ಅವರು ಡ್ಯಾನ್ಸ್ ಕೊರಿಯೋಗ್ರಫಿ ಕೋರ್ಸ್ "ಎಮರ್ಜ್" ನಲ್ಲಿ ಭಾಗವಹಿಸಿ, ಇದು ಅವರ ಗುರುಗಳಿಂದ ಕ್ಯುರೇಟ್ ಮಾಡಲ್ಪಟ್ಟು ಅಲ್ಲಿ ಶ್ರೀಮತಿ ಕುಮುದಿನಿ ಲಖಿಯಾ ಮತ್ತು ನಹೀದ್ ಸಿದ್ದಿಕಿ ಅವರಂತಹ ಕಥಕ್ ಮಾಸ್ಟ್ರೋಗಳು ಸೇರಿದಂತೆ ಅನೇಕ ಕಲಾವಿದರೊಂದಿಗೆ ಸಂವಾದ ನಡೆಸಿದ್ದಾರೆ. ಅಭಿನವ ಡ್ಯಾನ್ಸ್ ಕಂಪನಿ ಆಯೋಜಿಸಿದ್ದ ಪಂಡಿತ್ ಬಿರ್ಜು ಮಹಾರಾಜ್, ಡಾ.ಪದ್ಮಾ ಸುಬ್ರಹ್ಮಣ್ಯಂ ಅವರಂತಹ ದಿಗ್ಗಜರ  ಕಾರ್ಯಾಗಾರಗಳಲ್ಲಿಯೂ ಅವರು ಭಾಗವಹಿಸಿದ್ದಾರೆ.

ಮೇಧಾವಿನಿ ಅಭಿನವ ಡ್ಯಾನ್ಸ್ ಕಂಪನಿಯೊಂದಿಗೆ ದೇಶಾದ್ಯಂತ ಹಲವಾರು ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.ಮೇಧಾವಿನಿ ಅವರು ನೃತ್ಯಕ್ಷೇತ್ರದಲ್ಲೇ ವೃತ್ತಿಪರವಾಗಿ ತೊಡಗಿಸಿಕೊಳ್ಳಲಿದ್ದಾರೆ. ಕ್ರೈಸ್ಟ್ ವಿಶ್ವವಿದ್ಯಾನಿಲಯದಿಂದ ಪ್ರದರ್ಶನ ಕಲೆಯಲ್ಲಿ ಸ್ನಾತಕ ಪದವಿಯನ್ನು ಪಡೆದು ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರುತ್ತಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top