ಕಾಸರಗೋಡು: ಕುಂಬಳೆ ಸೀಮೆಯ ಪುರಾತನ ಸುಪ್ರಸಿದ್ಧ ನಾಲ್ಕು ದೇವಸ್ಥಾನಗಳಲ್ಲಿ ಒಂದಾಗಿರುವ ಮುಜಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.13ರ ಸೋಮವಾರದಿಂದ ಫೆ.19ರ ಭಾನುವಾರದ ವರೆಗೆ ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ.16ರ ಗುರುವಾರದಂದು ರಾತ್ರಿ 8.30 ರಿಂದ 11.30 ರ ತನಕ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸುಮಾರು 35ಕ್ಕೂ ಅಧಿಕ ಅಪ್ರತಿಮ ಕಲಾವಿದರಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು, ತನ್ವಿ ಶೆಟ್ಟಿ, ಪ್ರಥಮ್ಯ ನೆಲ್ಯಾಡಿ, ಅಕ್ಷರ ಎಂ ಬಲ್ಲಾಳ್, ದೀಕ್ಷಿತಾ ರೈ, ಪ್ರತೀಕ್ಷಾ ರೈ, ದೀಕ್ಷಾ ಎ ಕೆ, ವೈಷ್ಣವಿ ಎ, ಅಹನಾ ಎಸ್ ರಾವ್, ಭಾಸ್ಕರ್ ಅಡೂರ್, ಸನುಷ ಸುಧಾಕರನ್, ರಚಿತಾ ಕೆ ರಾವ್, ಶ್ರದ್ಧಾ ಎ ಎಸ್, ಮೇಧಾ ಎ ಎಸ್, ಭಾನ್ವಿ ಕುಲಾಲ್, ರಕ್ಷಿತಾ ಕೆ ರಾವ್, ಹರೀಶ್ ಪಂಜಿಕಲ್ಲು, ಧನ್ವಿ ಬಿ ಕೆ, ಕನಿಹ , ಲಿಶಿತ, ಪ್ರೇರಣಾ, ವೈಷ್ಣವಿ ಆರ್ ಎಸ್, ಚಿತ್ತಾರ, ವಿಷ್ಣು ಸುಧಾಕರನ್, ನವ್ಯಶ್ರೀ ಕುಲಾಲ್, ದೀಕ್ಷಾ ಸುಕೇಶ್ ಗಟ್ಟಿ, ಉಷಾ ಸುಧಾಕರನ್, ನಿರೀಕ್ಷಾ ಸಿ ಎಚ್, ಭಾಗ್ಯಲಕ್ಷ್ಮಿ, ಶರಣ್ಯ, ಅರ್ಚನಾ, ಶ್ವೇತಾ. ಕೆ, ವರ್ಷಾ ಬಿ, ಭಾಗವಹಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ಇವರು ಕ್ಷೇತ್ರ ಮಹಾತ್ಮೆಯ ಕುರಿತಾದ ಕವನ ಪ್ರಸ್ತುತಿ ಹಾಗೂ ಸಮಗ್ರ ನಿರೂಪಣೆಯನ್ನು ಮಾಡುವರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ