ಉಜಿರೆ: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ

Upayuktha
0

ಉಜಿರೆ: 'ವಿಪತ್ತು’ ಎನ್ನುವುದು ಸಾರ್ವಜನಿಕ ಜೀವನಕ್ಕೆ ಅನಿರೀಕ್ಷಿತ ದುರಂತದ ಘೋಷಣೆಯಾಗಿರು ತ್ತದೆ. ಸನ್ನಿವೇಶದ ಪ್ರಮಾಣ, ಒಳಗೊಳ್ಳುವ ಬಲಿಪಶುಗಳ ಸಂಖ್ಯೆ, ಘಟನೆಯ ಸಮಯ, ಸ್ಥಳಾವಕಾಶದ ವಿಷಯದಲ್ಲಿ ವೈದ್ಯಕೀಯ ಆರೈಕೆಯ ಲಭ್ಯತೆ ಮತ್ತು ಆಹಾರದಂತಹ ಇತರ ಮೂಲಭೂತ ಮಾನವ ಅಗತ್ಯಗಳ ಮೇಲೆ ಅವಲಂಬಿತವಾಗಿದೆ ಎಂದು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ವೈ ಹರೀಶ್ ಅವರು ಹೇಳಿದರು.


ಆಶ್ರಯ ಮತ್ತು ಬಟ್ಟೆ, ಘಟನೆಯ ಸ್ಥಳದಲ್ಲಿ ವಾತಾವರಣದ ಸ್ಥಿತಿಗತಿಗಳು, ಹೀಗಾಗಿ ಮಾನವ ಸಂಕಷ್ಟಗಳನ್ನು ಹೆಚ್ಚಿಸುವುದು ಮತ್ತು ಮಾನವ ಅಗತ್ಯಗಳನ್ನು ಸೃಷ್ಟಿಸುವುದು. ಎಲ್ಲಾ ನೈಸರ್ಗಿಕ ವಿಕೋಪಗಳನ್ನು ತಡೆಗಟ್ಟುವಂತಿಲ್ಲವಾದರೂ, ಭವಿಷ್ಯದ ಸನ್ನದ್ಧತೆ ಮತ್ತು ನೈಸರ್ಗಿಕ ವಿಕೋಪಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವು ಜೀವನ ಮತ್ತು ಆಸ್ತಿ ಮತ್ತು ಮಾನವ ಸಂಕಷ್ಟದ ನಷ್ಟವನ್ನು ಕಡಿಮೆಗೊಳಿಸುತ್ತದೆ ಮತ್ತು ಮುಂಚಿನ ಸಾಮಾನ್ಯ ಸ್ಥಿತಿಯನ್ನು ಮರುಸ್ಥಾಪಿಸುತ್ತದೆ ಎಂದು ಅವರು ನುಡಿದರು.


ವಿಪತ್ತು ನಿರ್ವಹಣಾ ದಿನದ ಅಂಗವಾಗ ಫೆಬ್ರವರಿ 23ರಂದು ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಸ್ಟೇಟ್ ಮತ್ತು ಸಿಬಿಎಸ್‌ಸಿ ಹಾಗೂ ಐಟಿಐ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗಾಗಿ ಆಯೋಜಿಸಿರುವ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತಗಳ ತಡೆಗಟ್ಟುವಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಬೆಂಕಿ ನಮ್ಮ ಜೀವನದ ಅವಿಭಾಜ್ಯ ಅಂಗ. ಪ್ರತಿ ಹಂತದಲ್ಲೂ ಬೆಂಕಿಯ ಉಪಯೋಗ ನಮಗೆ ಇದೆ. ಆದರೆ ಅದೇ ಬೆಂಕಿಯಿಂದ ಆಗುವ ಅವಘಡಗಳ ಕುರಿತು ನಾವು ತಿಳಿದುಕೊಳ್ಳಬೇಕಾದ ಅವಶ್ಯಕತೆ ಅತೀ ಅಗತ್ಯ. ಆದುದರಿಂದ ಇಂದು ಬೆಳ್ತಂಗಡಿ ಅಗ್ನಿಶಾಮಕ ದಳದ ಅಧಿಕಾರಿಗಳು ನೀಡುತ್ತಿರುವ ಈ ಮಾಹಿತಿ ಕಾರ್ಯಕ್ರಮ ನಿಮಗೆ ಉಪಯೋಗವಾಗಲಿ ಮತ್ತು ಅದನ್ನು ಸರಿಯಾಗಿ ಪಾಲಿಸಿ ಎಂದು ಅವರು ನುಡಿದರು.


ವಿಪತ್ತು ನಿರ್ವಹಣೆಯ ಹಂತಗಳ ಮೇಲೆ ಕೇಂದ್ರೀಕರಿಸುವ ಒಂದು ಪೂರ್ವಭಾವಿ ವಿಧಾನವನ್ನು ಉತ್ತೇಜಿಸಲು ಸರ್ಕಾರವು ಈ ಕಾರ್ಯಕ್ರಮವನ್ನು ಆಯೋಜಿಸಲು ಪ್ರೋತ್ಸಾಹ ಹಾಗೂ ಸಹಕಾರ ನೀಡುತ್ತಾ ಬಂದಿದ್ದು ಸರ್ಕಾರದ ಆದೇಶದಂತೆ ಇಂದು ನಾವು ಈ ಕಾರ್ಯಕ್ರಮದ ಕುರಿತು ಮಾಹಿತಿಯನ್ನು ನೀಡುತ್ತೇವೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಪ್ರಭಾರ ಅಗ್ನಿ ಶಾಮಕ ಠಾಣಾಧಿಕಾರಿ ಕೆ. ನೀಲಯ್ಯ ಗೌಡ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನುಡಿದರು.


ಅಗ್ನಿ ಶಾಮಕ ದಳದ ಸಿಬ್ಬಂದಿ ಉಸ್ಮಾನ್ ಇವರು ವಿವಿಧ ರೀತಿಯ ಅಗ್ನಿ ಅವಘಡಗಳ ಕುರಿತು ಮಾಹಿತಿ ಮತ್ತು ವಿಮಾನದ ಕುರಿತು ಮಾಹಿತಿ ನೀಡಿದರು. ನಂತರ ಅಗ್ನಿ ಪ್ರಾತ್ಯಕ್ಷಿಕೆ ಮೂಲಕವೂ ಮಾಹಿತಿಯನ್ನು ಎಲ್ಲಾ ಸಿಬ್ಬಂದಿಗಳು ಸೇರಿ ನೀಡಿದರು. 

ಶ್ರೀಮತಿ ಸುಜನಾ ವಲ್ತಾಜೆ ಇವರು ಸ್ವಾಗತ, ನಿರೂಪಣೆ ಮತ್ತು ವಂದನಾರ್ಪಣೆ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top