ಬೆಂಗಳೂರು/ಉಡುಪಿ: ಲಿಕುಚಕುಲತಿಲಕರಾದ ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಆರಾಧನಾ ಪ್ರಯುಕ್ತವಾಗಿ ಲಿಕುಚಕುಲ (ಪೆಜತ್ತಾಯ ಮನೆತನ) ದವರಿಂದ ಉಡುಪಿಯಲ್ಲಿ ಆಯೋಜಿಸಲಾಗಿದ್ದ ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಮತ್ತು ಶ್ರೀನಾರಾಯಣಪಂಡಿತಾಚಾರ್ಯರ ಕೃತಿಗಳ ಪರೀಕ್ಷೆಗಳಲ್ಲಿ ನಾಡಿನ ಅನೇಕ ಗುರುಕುಲದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾವಿಸಮೀರಗುರುಕುಲದ ವಿದ್ಯಾರ್ಥಿಗಳೂ ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದ್ದದಾಗಿಸಿಕೊಂಡಿದ್ದಾರೆ.
ಸಂಪೂರ್ಣ ಸುಮಧ್ವವಿಜಯ ಪರೀಕ್ಷೆಯಲ್ಲಿ ಪ್ರಭಂಜನ ಗಣಾಚಾರಿ ಪ್ರಥಮ ಸ್ಥಾನವನ್ನು ಮತ್ತು ನವನೀತ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವಿಷ್ಣುಸ್ತುತಿ, ಶಿವಸ್ತುತಿ( ವ್ಯಾಖ್ಯಾನ ಸಹಿತ ) ಪರೀಕ್ಷೆಯಲ್ಲಿ ರೋಹಿತ್ ದ್ವಿತೀಯ ಸ್ಥಾನವನ್ನು ಹಾಗೂ ವಾಯುಸ್ತುತಿ
(ತಾತ್ಪರ್ಯ ಸಹಿತ) ಪರೀಕ್ಷೆಯಲ್ಲಿ ಭೂಷಣ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಮಣಿಮಂಜರೀ ಪರೀಕ್ಷೆಯಲ್ಲಿ ವಾದಿರಾಜ ದ್ವಿತೀಯ ಸ್ಥಾನವನ್ನು ಮತ್ತು ಶ್ರೀಹರಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಸ್ತೋತ್ರಗಳ ಪರೀಕ್ಷೆಯಲ್ಲಿ ಸಾತ್ವಿಕ ದ್ವಿತೀಯ ಸ್ಥಾನವನ್ನು, ವಿಭುಧೇಂದ್ರ ತೃತೀಯ ಸ್ಥಾನವನ್ನು ಪಡೆದಿದ್ದಾರೆ .
ಈ ಎಲ್ಲಾ ವಿದ್ಯಾರ್ಥಿಗಳನ್ನು ಶ್ರೀವಿಶ್ವವಲ್ಲಭತೀರ್ಥಶ್ರೀಪಾದರು ತುಂಬುಹೃದಯದಿಂದ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


