ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಬಸವೇಶ್ವರನಗರದ ಶ್ರೀ ಮಾಧ್ವ ಸಂಘದಲ್ಲಿ ಏರ್ಪಡಿಸಿದ್ದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೊನೆಯ ದಿನವಾದ ಫೆ. 10ರಂದು ಹರಿನಾಮ ಸಂಕೀರ್ತನೆ ಕಾರ್ಯಕ್ರಮದಲ್ಲಿ ಗಾಯಕಿ ಶ್ರೀಮತಿ ಅನುಷಾ ಎಸ್. ರಾಘವೇಂದ್ರ ಅವರು ಪ್ರಸಿದ್ಧ ಹರಿದಾಸರ ಅಪರೂಪದ ಕೃತಿಗಳನ್ನು ಪ್ರಸ್ತುತ ಪಡಿಸಿದರು.
ಶ್ರೀ ಬಿ.ಆರ್. ಪ್ರಕಾಶ್ ಕೀ-ಬೋಡ್೯ ವಾದನದಲ್ಲಿ, ಶ್ರೀ ಶ್ರೀನಿವಾಸ ಕಾಖಂಡಕಿ ತಬಲಾ ವಾದನದಲ್ಲಿ ಸಾಥ್ ನೀಡಿದರು.
ಟಿ ಟಿ ಡಿ ಹೆಚ್ ಡಿ ಪಿ ಪಿ ಯ ಕಾರ್ಯಕ್ರಮಗಳ ನಿರ್ವಹಣಾಧಿಕಾರಿ ಡಾ. ಪಿ. ಭುಜಂಗ ರಾವ್ ಅವರು ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸಂಗೀತಾಭಿಮಾನಿಗಳು ಹಾಗೂ ಮಾಧ್ವ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಫೆಬ್ರವರಿ 7 ರಿಂದ 10 ರ ವರೆಗೆ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೊದಲ ಮೂರು ದಿನಗಳು ವಿವಿಧ ಭಜನಾ ಮಂಡಲಿಗಳಿಂದ ಭಜನೆ, ಪಂಡಿತರಿಂದ ಉಪನ್ಯಾಸ ಜರುಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ