ಏನೆಂದು ಹೆಸರಿಡಲಿ... ಈ ಪ್ರೀತಿಗೆ...

Upayuktha
0

ಪ್ರೀತಿ, ಎರಡು ಅಕ್ಷರದ ಪದ. ಹಲವಾರು ಭಾವನೆ, ಆಲೋಚನೆಗಳ ಸಾಗರ. ಒಮ್ಮೆ ಆ ಸಾಗರದೊಳಗೆ ಹೋದರೆ ಹೊರಗಿನ ಜಗತ್ತಿಗೆ ಬರಲು ಮನಸ್ಸೇ ಒಪ್ಪದು.


ಆದರೆ, ನಿಜವಾಗಿಯೂ ಪ್ರೀತಿ ಎಂದರೇನು? ಕೇವಲ ಎರಡು ಮನುಷ್ಯರ ನಡುವಿನ ಭಾವನೆಯನ್ನೇ ಪ್ರೀತಿ ಎನ್ನಬಹುದೇ? ಹಾಗಾದರೆ ಸಮಾಜದಲ್ಲಿ ಕಂಡುಕೊಂಡಂತಹ ಹಲವಾರು ಮುಗ್ಧ ಭಾವನೆಗಳಿಗೆ ಏನೆಂದು ವಿವರಣೆ ನೀಡಲಿ? ಎಂದು ಮನಸ್ಸಿನಲ್ಲಿ ಮೂಡಿ ಬರುತ್ತಿದ್ದ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದ ನನಗೆ ಹಲವಾರು ಸನ್ನಿವೇಶಗಳು ನೆನಪಿಗೆ ಬಂದವು. ಆದರೆ ಕೇವಲ ಒಂದು ಘಟನೆ ಮಾತ್ರವೇ ಕಣ್ಣದುರಿಗೆಯೇ ಉಳಿದು ಹೋಯಿತು.


ಅವರು ಈಗತಾನೇ ಮದುವೆಯಾದ ಜೋಡಿಗಳು. ಪ್ರಾಣಿಗಳೆಂದರೆ ಪಂಚಪ್ರಾಣ. ಮನೆಯಲ್ಲಿ ಎಲ್ಲಿ ನೋಡಿದರೂ ನಾಯಿ, ಬೆಕ್ಕು ಕಾಣ ಸಿಗುತ್ತಿತ್ತು. ಅದೊಂದು ದಿನ ಮನೆಯಲ್ಲಿ ಮೋಡ ಕವಿದ ವಾತಾವರಣ. ಮನೆಯ ಅತೀ ಮುದ್ದಿನ ಸಾಕುನಾಯಿ ಸಿಗುತ್ತಿಲ್ಲ, ಕಾಣೆಯಾಗಿದೆ ಎಂದು ಮನೆ ಒಡತಿಯ ಗೋಳು. ಎಲ್ಲರಲ್ಲಿ ವಿಚಾರಿಸಿ ಕೊನೇಗೆ ಪತ್ರಿಕೆಯಲ್ಲಿ ನಾಯಿಯ ಭಾವಚಿತ್ರ ಹಾಗೂ ಮನೆಯ ವಿಳಾಸ ಪ್ರಕಟಿಸಲಾಯಿತು.


ಮಾರನೇ ದಿನ ದೂರವಾಣಿ ಕರೆ ಬಂತು. ಕರೆ ಸ್ವೀಕರಿಸಿದ ಮನೆ ಒಡತಿಯ ಕಣ್ಣಲ್ಲಿ ನೀರು ಉಕ್ಕಿ ಹರಿಯಿತು. ಯಾಕೆಂದರೆ ಅವರ ಪ್ರೀತಿಯ ನಾಯಿ ವೃದ್ಧಾಶ್ರಮದಲ್ಲಿರುವ ತಾಯಿ ಮಡಿಲಲ್ಲಿ ಮಲಗಿತ್ತು. ಪ್ರಾಣಿಗಳಿಗೆ ಪ್ರೀತಿ ತೋರಿಸುವ ಮನೆಯಲ್ಲಿ ಮಾನವನ ಭಾವನೆಗೆ ಬೆಲೆ ಇಲ್ಲದಂತಾಗಿತ್ತು.


ಹಾಗಾದರೆ ನಿಜವಾದ ಪ್ರೀತಿಯ ಅರ್ಥ ಏನು? ನಿಜವಾದ ಪ್ರೀತಿ ಯಾವುದು? ಈ ಮುಗ್ಧ ಜೀವಿಯ ಪ್ರೀತಿಗೆ ಏನೆಂದು ಹೆಸರಿಡಲಿ?...


-ಸ್ವೀಡಲ್‌ ಬಳಕುಂಜೆ

ಆಳ್ವಾಸ್‌ ಕಾಲೇಜ್‌ ಮೂಡುಬಿದಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top