58ನೇ ನಾದಜ್ಯೋತಿ ಸಂಗೀತ ಸಂಭ್ರಮ-2023

Upayuktha
0

ಬೆಂಗಳೂರು: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ (ರಿ.) ಸಂಸ್ಥೆಯ 58ನೇ ವಾರ್ಷಿಕೋತ್ಸವವನ್ನು ಫೆಬ್ರವರಿ 23 ರಿಂದ 27ರ ವರೆಗೆ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಹಮ್ಮಿಕೊಂಡಿದೆ.


ಫೆ.23 ರ ಸಂಜೆ 6-30ಕ್ಕೆ ಕಾರ್ಯಕ್ರಮದ ಉದ್ಘಾಟನೆ : ಶ್ರೀ ಆರ್. ಶ್ರೀನಿವಾಸ ಗೌಡ ಐಪಿಎಸ್ (ಡಿಸಿಪಿ, ಸೆಂಟ್ರಲ್, ಬೆಂಗಳೂರು) ಮುಖ್ಯ ಅತಿಥಿಗಳು : ಶ್ರೀ ಕೆ.ವಿ. ನರೇಂದ್ರ ಮತ್ತು ಶ್ರೀ ಎನ್. ದಕ್ಷಿಣಾಮೂರ್ತಿ (ದತ್ತು). ನಂತರ ಸಂಗೀತ ಕಾರ್ಯಕ್ರಮ : ವಿ|| ಗೀತಾ ರಮಾನಂದ್ ಮತ್ತು ಸಂಗಡಿಗರಿಂದ.

ಫೆ.24 ರ ಸಂಜೆ 6-00 ಗಂಟೆಗೆ : ಗಾಯನ- ವಿ|| ಆದಿತ್ಯ ಮಹಾದೇವನ್ (ಚೆನ್ನೈ) ಮತ್ತು ಸಂಗಡಿಗರಿಂದ.

ಫೆ.25 ರ ಸಂಜೆ 6-00 ಗಂಟೆಗೆ : ದ್ವಂದ್ವ ಗಾಯನ : ವಿ|| ಸಿಂಧು ಸುಚೇತನ್, ವಿ|| ಎಚ್.ಎಂ. ಸ್ಮಿತಾ ಮತ್ತು ಸಂಗಡಿಗರಿಂದ. 

ಫೆ. 26 ರ ಬೆಳಗ್ಗೆ 9-00 ಗಂಟೆಗೆ : ಊಂಜಾವೃತಿ, 11ಕ್ಕೆ ಅನೇಕ ಪ್ರಸಿದ್ಧ ಕಲಾವಿದರುಗಳಿಂದ ಪಂಚರತ್ನ ಕೀರ್ತನ ಗೋಷ್ಠಿ ಗಾಯನ, ಮಹಾಮಂಗಳಾರತಿ, ತೀರ್ಥಪ್ರಸಾದ. ಸಂಜೆ 4-15ಕ್ಕೆ ಗಾಯನ : ವೃಂದಾ ಆಚಾರ್ಯ ಮತ್ತು ಸಂಗಡಿಗರಿಂದ.

6-15ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ : ಮುಖ್ಯ ಅತಿಥಿಗಳು : ಡಾ. ಸಿ.ಎನ್. ಅಶ್ವಥ ನಾರಾಯಣ್ (ಉನ್ನತ ಶಿಕ್ಷಣ ಸಚಿವರು), ಡಾ. ವಿ. ರವೀಂದ್ರ (ಶ್ರೀರಾಮ ಸೇವಾ ಮಂಡಳಿ, ಚಾಮರಾಜಪೇಟೆ). ಪ್ರಶಸ್ತಿ ಪುರಸ್ಕೃತರು : ವಿ|| ಶಾಂತಾ ನರಸಿಂಹನ್ (ಗಾಯನ), ವಿ|| ಗೀತಾ ರಮಾನಂದ್ (ವೀಣಾ), ವಿ|| ಸಂಪಗೋಡು ವಿಘ್ನರಾಜ್ (ಗಾಯನ).

ಫೆ. 27 ರ ಸಂಜೆ 6-30ಕ್ಕೆ: ಸಂಗೀತ ಕಾರ್ಯಕ್ರಮ : ವಿ|| ಸಂಪಗೋಡು ವಿಘ್ನರಾಜ್ ಮತ್ತು ಸಂಗಡಿಗರಿಂದ. ನಂತರ ಸಮಾರೋಪ ಸಮಾರಂಭ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top