ನಾಳೆ ಬಿದರೆ ಗ್ರಾಮದಲ್ಲಿ ರತ್ನ ಮಾಂಗಲ್ಯ ಸಾಮಾಜಿಕ ನಾಟಕ ಪ್ರದರ್ಶನ

Upayuktha
0



ಹಾಸನ : ಹಾಸನ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿ ವತಿಯಿಂದ ಚನ್ನರಾಯ ಪಟ್ಟಣ ತಾ. ಬಿದರೆಗ್ರಾಮದಲ್ಲಿ ಸೋಮುವಾರ ತಾ. 20ಕ್ಕೆ ಸಂಜೆ ಗಂಟೆಗೆ ರತ್ನ ಮಾಂಗಲ್ಯ ಸಾಮಾಜಿ ನಾಟಕ ಪ್ರದರ್ಶನಏರ್ಪಡಿಸಲಾಗಿದೆ. ಕ್ಷೇತ್ರದ ಶಾಸಕರು ಶ್ರೀ ಸಿ.ಎನ್.ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಬಿದರೆ ಪ್ರಥಮ ದರ್ಜೆ ಗುತ್ತಿಗೆದಾರರು ಬಿ.ಕೆ.ನಾಗರಾಜ್‍ ಕಾರ್ಯಕ್ರಮ ಉದ್ಘಾಟಿಸುವರು. 


ಇದೇ ವೇದಿಕೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಬಾ.ಮಾ.ಹರೀಶ್‍ ಅವರನ್ನು ಸನ್ಮಾನಿಸಲಾಗುವುದು. ವಿಶೇಷ ಆಹ್ವಾನಿತರಾಗಿ ಮಾಜಿ ವಿಧಾನ ಪರಿಷತ್ ಸದಸ್ಯರು ಶ್ರೀ ಗೋಪಾಲಸ್ವಾಮಿ, ಮಾಜಿ ಶಾಸಕರು ಶ್ರೀ ಪುಟ್ಟೇಗೌಡರು, ನಗರಾಭಿವೃದ್ಧಿ ಪ್ರಾಧಿಕಾರ ಆದ್ಯಕ್ಷರು ಎ.ಪಿ.ಆನಂದಕುಮಾಅರ್, ಕಾಂಗ್ರೇಸ್ ಮುಖಂಡರು ಜತ್ತೇನಹಳ್ಳಿ ರಾಮಚಂದ್ರು, ಲಲಿತಾರಾಘವ್, ಸಮಾಜ ಸೇವಕರು ಜೆ.ಓ.ಮಹಾಂತಪ್ಪ, ಹಿರಿಸಾವೆಜೆಡಿಎಸ್ ಮುಖಂಡರು ಮಹೇಶ್, ಕಾಂಗ್ರೇಸ್ ಮುಖಂಡರು ಶ್ರೀಧರ್ ಮತ್ತು ರಾಮಚಂದ್ರಣ್ಣ ಪ್ರ.ದ.ಗುತ್ತಿಗೆದಾರರು ಬೀಚಗೊಂಡನಹಳ್ಳಿ ವಿಶೇಷ ಆಹ್ವಾನಿತರು. 


ಚಿಕ್ಕರಸನಹಳ್ಳಿ ಪ್ರೊ.ಪುರುಷೋತ್ತಮರವರ ಶ್ರೀ ಮಂಜುನಾಥ ಡ್ರಾಮಾ ಸೀನ್ಸ್ ಶಿವಪ್ರಕಾಶ್ ಮಂಡ್ಯ ಇವರ ನಿರ್ದೇಶನದಲ್ಲಿ ಪ್ರದರ್ಶಿತವಾಗುತ್ತಯಿರುವ ರತ್ನಮಾಂಗಲ್ಯದ ಕಥಾ ನಾಯಕ ದಿಲೀಪನ ಪಾತ್ರ ನಿರ್ವಹಿಸುತ್ತಿರುವ ಜಿಲ್ಲಾಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷರು ರವಿಕುಮಾರ್ ಬಿದರೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾಮಾಜಿಕ ನಾಟಕ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಕೋರಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top