ಪುತ್ತೂರು: ಎಲ್ಲೆಲ್ಲೂ ಹಚ್ಚ- ಹಸಿರು ಮೈದುಂಬಿ ಕೊಂಡು ಹಬ್ಬಿರುವ ನಾಡು ನಮ್ಮದು.ಕಣ್ಣು ಹಾಯಿಸಿದಷ್ಟು ದೂರ ಹಸಿರೇ ಚಾಚಿಕೊಂಡು ನಿಂತಿದೆ. ಇತ್ತೀಚಿನ ದಿನಗಳಲ್ಲಿ ಮನೆಯ ಸುತ್ತಲಿನ ಅಂದ ಹೆಚ್ಚಿಸಲು ಹಾಗೂ ಅಗತ್ಯತೆ, ಉಪಯೋಗಗಳಿಗಾಗಿ ಔಷಧೀಯ ಸಸ್ಯಗಳು, ಗಿಡ-ಮೂಲಿಕೆಗಳು, ಹಣ್ಣು- ತರಕಾರಿಗಳ ಗಿಡಗಳನ್ನು .ವಿವಿಧ ಹೂವಿನ ಗಿಡಗಳನ್ನು ನರ್ಸರಿಗಳಿಂದ ಕೊಂಡುಕೊಳ್ಳುತ್ತೇವೆ. ನರ್ಸರಿ ಎಂದ ತಕ್ಷಣ ನಮಗೆ ವಿವಿಧ ಗಿಡಗಳನ್ನು ಸಂಗ್ರಹಿಸಿ ಗ್ರಾಹಕರಿಗೆ ಮಾರಾಟ ಮಾಡುವಂತಹ ದೃಶ್ಯವು ಕಣ್ಣ ಮುಂದೆ ಬರುತ್ತದೆ.
ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದಂತಹ ಬೃಹತ್ 5ನೇ ಕೃಷಿಯಂತ್ರ ಮೇಳ 2023 ಮತ್ತು ಕನಸಿನ ಮನೆ ಎಂಬಂತಹ ಕಾರ್ಯಕ್ರಮದಲ್ಲಿ ಹಲವಾರು ಕೃಷಿ ಯೋಗ್ಯ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಮನಸೆಳೆದಂತಹ ಒಂದು ಅಂಶ ಎಂದರೆ ಅದು ಕೃಷಿ ನರ್ಸರಿ ಗಿಡಗಳ ಪ್ರದರ್ಶನ ಹಾಗೂ ಮಾರಾಟ ಇಲ್ಲಿ ಹಲವಾರು ರೀತಿಯಾದಂತಹ ಅಂದರೆ ಕೃಷಿ ನರ್ಸರಿ ಗಿಡಗಳು, ಹೂವಿನ, ಹಣ್ಣಿನ, ಔಷಧಿಯ, ಅಲಂಕಾರಿಕ, ತರಕಾರಿ ಗಿಡಗಳು, ಹಣ್ಣಿನ ಹಾಗೂ ತರಕಾರಿಗಳ ಬೀಜಗಳನ್ನು ಮಾರಾಟ ಮಾಡುವುದಲ್ಲದೆ ಅವುಗಳನ್ನು ಕೊಂಡುಕೊಳ್ಳುವವರಿಗೆ ಅದರ ಬಗೆಗಿನ ಉಪಯುಕ್ತ ಮಾಹಿತಿಯನ್ನು ಕೂಡ ಒದಗಿಸುತ್ತಿದ್ದರು. ಅತಿ ಕಡಿಮೆ ಸಮಯದಲ್ಲಿ ಫಲ ಕೊಡುವಂತಹ ಹಲಸು, ಅಡಿಕೆ, ಪೇರಳೆ ಗಿಡಗಳನ್ನು ಮಾರಾಟಕ್ಕಾಗಿ ಇರಿಸಲಾಗಿತ್ತು . ಥೈಲ್ಯಾಂಡ್ ಕೆಂಪು ಡ್ರ್ಯಾಗೋನ್ ಹಣ್ಣು, ಚಂದ್ರ ಹಲಸು, ಸ್ಟ್ರಾಬೆರಿ ಹಣ್ಣು, ಕೆಂಪು ಚಕೋತ ,ಕಲಪಟ್ಟಿ ಸಪೋಟ, ಕ್ರಿಕೆಟ್ ಬಾತ್ ಸಪೋಟ ಮುಂತಾದ ಹಣ್ಣಿನ ಗಿಡಗಳು ವೈವಿಧ್ಯಮಯವಾದ ಅಲಂಕಾರಿತ ಗಿಡಗಳು, ಔಷಧೀಯ ಸಸ್ಯಗಳು, ಸೌಂದರ್ಯದಾಯಕ ಹೂವಿನ ಗಿಡಗಳನ್ನು ಜನರು ಬಹಳ ಕಾತರತೆಯಿಂದ ಮುಗಿಬಿದ್ದು ಖರೀದಿಸಿಕೊಳ್ಳುತ್ತಿದ್ದರು.
ಕೇವಲ ಗಿಡಗಳನ್ನು ಮಾತ್ರವಲ್ಲದೆ ಅವುಗಳನ್ನು ಬೆಳೆಸುವ ಸಲಕರಣೆಗಳು ಹಾಗೂ ಬೆಳೆಗಳನ್ನು ಕೀಟಗಳಿಂದ ರಕ್ಷಿಸಲು ಗಿಡಗಳಿಗೆ ಸಿಂಪಡಿಸುವ ಔಷಧಿಗಳು, ಕೀಟನಾಶಕಗಳು ಇತ್ಯಾದಿಗಳನ್ನು ಕೂಡ ಮಾರಾಟ ಮಾಡುತ್ತಿದ್ದರು.
ಒಟ್ಟಿನಲ್ಲಿ ಹೇಳುವುದಾದರೆ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಸಸ್ಯಪ್ರೇಮಿಗಳು ಬರಿಗೈನಲ್ಲಿ ತೆರಳುವಂತೆ ಇರದೆ ತಮ್ಮ ಆಸಕ್ತಿದಾಯಕ ವಾದಂತಹ ನರ್ಸರಿ ಸಸ್ಯಗಳನ್ನು ಖರೀದಿಸಿಕೊಂಡು ಹೋಗುವ ಹುಮ್ಮಸ್ಸಿನಲ್ಲಿ ಗಿಡಗಳನ್ನು ಖರೀದಿಸುತ್ತಿದ್ದರು
- ಪ್ರಸಾದಿನಿ. ಕೆ ತಿಂಗಳಾಡಿ
ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಮಹಾವಿದ್ಯಾಲಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ