ಕುಕ್ಕೆ ಸುಬ್ರಹ್ಮಣ್ಯ: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪತ್ನಿ ಅನಿತಾ ಗೆಹ್ಲೋಟ್ ಹಾಗೂ ಮೊಮ್ಮಕ್ಕಳಾದ ರಂಜನಿ, ಧೀರಜ್, ನವೀನ್ ಅವರೊಂದಿಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ನಿಂಗಯ್ಯ, ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಸದಸ್ಯರುಗಳಾಗ ಶ್ರೀವತ್ಸ, ಲೋಕೇಶ್, ಟ್ರಸ್ಟಿಗಳಾದ ವನಜ ಭಟ್, ಶೋಭಾ ಗಿರಿಜಾ ಅವರು ರಾಜ್ಯಪಾಲರಿಗೆ ಸ್ವಾಗತಕೋರಿದರು.
ನಂತರ ರಾಜ್ಯಪಾಲರು ಪತ್ನಿ ಅನಿತಾ ಗೆಹ್ಲೋಟ್ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭಧಲ್ಲಿ ಜಿಲ್ಲಾಧಿಕಾರಿ ರವಿಕುಮಾರ್, ಎಸ್ ಪಿ ವಿಕ್ರಮ್ ಅಮಾಟೆ ಮುಂತಾದವರು ಉಪಸ್ಥಿತರಿದ್ದರು.
ಧರ್ಮಸ್ಥಳಕ್ಕೆ ತೆರಳಿದ ರಾಜ್ಯಪಾಲರು
ಬಳಿಕ ಧರ್ಮಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಧರ್ಮಾಧಿಕಾರಿಗಳಾದ ಸನ್ಮಾನ್ಯ ವಿರೇಂದ್ರ ಹೆಗಡೆ ಅವರು ಭೇಟಿ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ