ಓಲ್ಡ್ ವೈನ್ ಇನ್ ನ್ಯೂ ಬಾಟಲ್; ನಮ್ಮ ಬಾಲ್ಯದಲ್ಲಿ ಮೇಷ್ಟ್ರು ರಸ್ತೆಯಲ್ಲಿಯೇ ಅಪ್ಪನ ಮುಂದೆ ಜಾತಕ ಬಿಚ್ಚಿಡುತ್ತಿದ್ದರು, ಅಪ್ಪ ಅದನ್ನು ಮನೆಗೆ ತಂದು ಎಲ್ಲರ ಮುಂದೆ ಬಿಚ್ಚಿಡುತ್ತಿದ್ದರು.
ಈಗಿನ ಹೈ ಫೈ ಇಂಗ್ಲಿಷ್ ಮೀಡಿಯಂ ಸ್ಕೂಲ್‌ಗಳಲ್ಲಿ ತಿಂಗಳಿಗೆುಾಮ್ಮೆ ಪೇರೆಂಟುಗಳನ್ನು ಸ್ಕೂಲ್‌ಗೆ ಕಡ್ಡಾಯವಾಗಿ ಕರೆಸಿ ಸ್ಟೂಡೆಂಟ್ಸ್ ಪೇರೆಂಟು ಟೀಚರ್ಸ್ ಒಟ್ಟಿಗೆ ಕೂತು ವಿದ್ಯಾರ್ಥಿಗಳ ಪ್ರೊಗ್ರೆಸ್ ಕುರಿತಾಗಿ ಮಾತು ಕತೆ ಮಾಡುವುದು. ಇದನ್ನೇ ಈಗಿನ ಇಂಗ್ಲಿಷ್ ಪರಿ ಭಾಷೆಯಲ್ಲಿ ಕರೆಯುವುದು "ಓಪನ್ ಹೌಸ್" ಮೀಟಿಂಗ್.
ಹಾಗಾದರೆ ನಾವು ನೀವು ಬಹು ಹಿಂದೆ ಶಾಲೆಯಲ್ಲಿ ಕಲಿಯುವಾಗ ಈ "ಓಪನ್ ಹೌಸ್" ಪದ್ಧತಿ ಇರಲಿಲ್ಲವಾ? ಇತ್ತು. ಆದರೆ ನಮ್ಮ ಓಪನ್ ಹೌಸ್ ನಡೆಯುವ ಸ್ಥಳ ಮಾತ್ರ ಬೇರೆ ಆಗಿತ್ತು.
ವಾರಕ್ಕೊಮ್ಮೆ ನಮ್ಮ ನಿಮ್ಮ ಅಪ್ಪಯ್ಯ ಪೇಟೆಗೆ ಹೇೂಗುತ್ತಿದ್ರು. ಅಲ್ಲಿ ಮಾರ್ಗ ಮಧ್ಯದಲ್ಲಿಯೇ ನಮ್ಮ ಮೇಷ್ಟ್ರು ಸಿಗುತ್ತಿದ್ದರು; ಮೇಷ್ಟ್ರು ಇದೇ ಸರಿಯಾದ ಸಂದರ್ಭ ಅಂದುಕೊಂಡು ನಮ್ಮ ಜಾತಕವನ್ನು ಬಿಡಿಸಿ ಹೇಳುತ್ತಿದ್ದರು. ಅಂದು ಅಪ್ಪಯ್ಯ ಮನೆಗೆ ಬಂದವರೇ ತಡ ಮಾಡದೆ ಮನೆ ಮಂದಿಯನ್ನೆಲ್ಲ ಕೂರಿಸಿ ಕೊಂಡು ಎಲ್ಲರಿಗೂ ಕೇಳುವ ಹಾಗೆ ನಮ್ಮ ಜಾತಕವನ್ನು ಬಿಡಿಸಿ ಬಿಡಿಸಿ "ಓಪನ್ ಹೌಸ್" ಮಾಡುತ್ತಿದ್ದರು.
ಇದು ನಿಜವಾದ ನಮ್ಮೆಲ್ಲರ ಶೈಕ್ಷಣಿಕ ಬದುಕಿನ "ಓಪನ್ ಹೌಸ್" ರಸಾನುಭವ ನೇೂಡಿ. ಹಾಗಾಗಿ ಇದನ್ನೇ ಕರೆಯುವುದು "ಓಲ್ಡ್ ವೈನ್ ಇನ್ ನ್ಯೂ ಬಾಟಲ್" ಹೊಸ ಶಿಕ್ಷಣ ಪಧ್ಧತಿ ಎಂದು ಕರೆಯುವುದು.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ