ನಿಟ್ಟೆ ಹಾಗೂ ಜಪಾನ್ ನ ಬೆಲ್ಕ್, ವೆಬಲ್ನ್ ಸಂಸ್ಥೆಯ ಆಡಳಿತ ಅಧಿಕಾರಿಗಳ ಸಂವಾದ ಸಭೆ

Upayuktha
0

 

ನಿಟ್ಟೆ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಜಪಾನ್ ನ ಝೆನ್ಕೆನ್ ಸಂಸ್ಥೆಯ ನಡುವಿನ ಶೈಕ್ಷಣಿಕ ಒಪ್ಪಂದದ ಅನುಸಾರ ಜಪಾನ್ ನ ಬೆಲ್ಕ್ ಸಂಸ್ಥೆ ಹಾಗೂ ವೆಬಲ್ನ್ ಸಂಸ್ಥೆಯ ಮುಖ್ಯಸ್ಥರು ಹಾಗೂ ವಿವಿಧ ಅಧಿಕಾರಿಗಳು ನಿಟ್ಟೆ ವಿದ್ಯಾಸಂಸ್ಥೆಯ ಮಂಗಳೂರಿನ ಕಛೇರಿಯಾದ ರಾಮ್ ಭವನ್ ಸಂಕೀರ್ಣಕ್ಕೆ ಫೆ.೧೪ ರಂದು ಭೇಟಿನೀಡಿ ನಿಟ್ಟೆ ತಾಂತ್ರಿಕ ಕಾಲೇಜಿನ ಆಡಳಿತ ವರ್ಗದವರೊಂದಿಗೆ ಸಂವಾದ ನಡೆಸಿದರು.


ಶೈಕ್ಷಣಿಕ ಒಪ್ಪಂದಕ್ಕೆ ಪೂರಕವಾಗುವ ಹಲವಾರು ವಿಚಾರಗಳ ಬಗೆಗೆ ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಬೆಲ್ಕ್ ಸಂಸ್ಥೆಯ ಸಿ.ಇ.ಒ ಹರಶಿಮ ಇಸೈ, ಡಿಜಿಟಲ್ ಪ್ರಮೋಶನ್ ವಿಭಾಗದ ಮುಖ್ಯಸ್ಥ ತಕಹಶಿ ನೊಬುಹರು, ಡಿಜಿಟಲ್ ಪ್ರಮೋಶನ್  ವಿಭಾಗದ ನಕದ ಯೊಶಿಯಕಿ, ಹೊಶಿದ ಅಕಿರ, ಮೈಕಿ ಪ್ರೌಢಶಾಲೆಯ ಪ್ರಾಂಶುಪಾಲ ಮಿಯಾಜಕಿ ಜುನ್, ವೆಬಲ್ನ್ ಸಂಸ್ಥೆಯ ವತಿಯಿಂದ ಸಿ.ಇ.ಒ ಶಾಹ್ ಭವಿಕ್ ಕುಮಾರ್ ರಜ್ನಿಕಾಂತ್, ಸಿ.ಎಂ.ಒ ಕವಾಸಕಿ ಜುಂಪೈ ಹಾಗೂ ನಿಟ್ಟೆ ತಾಂತ್ರಿಕ ಕಾಲೇಜಿನ ವತಿಯಿಂದ ಪ್ರಾಂಶುಪಾಲ ಡಾ| ನಿರಂಜನ್ ಎನ್.ಚಿಪ್ಳೂಣ್ಕರ್, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್, ನಿಟ್ಟೆ ತಾಂತ್ರಿಕ ಕಾಲೇಜಿನ ಕೌನ್ಸೆಲಿಂಗ್, ಸ್ಟೂಡೆಂಟ್ ವೆಲ್ಫೇರ್, ಟ್ರೈನಂಗ್ & ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್, ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಯಸುಕೊ ಸತೊ, ಬೆಲ್ಕ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಆಯ್ಕೆಯಾದ ಶಮಂತ್ ಸತೀಶ್ ನಾಯಕ್ ಹಾಗೂ ಪ್ರಯಾಗ್ ಶರ್ಮಾ ಮೊಕಿರಾಲ ಉಪಸ್ಥಿತರಿದ್ದರು. ಝೆನ್ಕೆನ್ ಸಂಸ್ಥೆಯ ವತಿಯಿಂದ ಪ್ಲೇಸ್ಮೆಂಟ್ಸ್ ವಿಭಾಗದ ಮುಖ್ಯಸ್ಥ ತಕಶಿಮ ಹಿಯೋರಿ, ಬಿಜಿನೆಸ್ ಆಪರೇಶನ್ಸ್ ಲೀಡ್ ಅಭಿಶೇಕ್ ಎಸ್.ಎನ್ ಅವರು ಈ ಸಭೆಯನ್ನು ಸಂಘಟಿಸಿದರು.


ಈ ಸಂವಾದದ ತರುವಾಯ ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಬೆಲ್ಕ್ ಹಾಗೂ ವೆಬಲ್ನ್ ಸಂಸ್ಥೆಗಳು ಉದ್ಯೋಗಾವಕಾಶ, ತರಬೇತಿ ನೀಡುವಲ್ಲಿ ಸಹಕರಿಸಲಿದೆ. ಜಪಾನ್ ದೇಶದ ಈ ಎರಡು ಸಂಸ್ಥೆಗಳು ನಿಟ್ಟೆಯಲ್ಲಿ ತನ್ನ ಸೆಂಟರ್ ಆಫ್ ಎಕ್ಸಲೆನ್ಸ್ ನ್ನು ಸ್ಥಾಪಿಸಲು ಉತ್ಸುಕತೆ ತೋರಿರುವುದು ಸ್ವಾಗತಾರ್ಹ ವಿಚಾರವಾಗಿದೆ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ತಿಳಿಸಿರುವರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top