ಉಜಿರೆ : ಇಂದು ಸಂಸತ್ತಿನಲ್ಲಿ ಸನ್ಮಾನ್ಯ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನೆ ಸಲ್ಲಿಸುವ ಅವಕಾಶ ಪೂಜ್ಯ ಡಿ. ಹೆಗ್ಗಡೆಯವರಿಗೆ ದೊರಕಿತು. ಸನ್ಮಾನ್ಯ ಪ್ರಧಾನ ಮಂತ್ರಿಗಳು ಮಾತನಾಡುವ ಮೊದಲು 10 ನಿಮಿಷದ ಅವಕಾಶವನ್ನು ಹೆಗ್ಗಡೆಯವರಿಗೆ ನೀಡಿದಾಗ ಅವರು ಮಾತನಾಡುತ್ತಾ ದೇಶದ ಭವಿಷ್ಯಗತ ವೈಭವದಲ್ಲಿಲ್ಲ, ಪ್ರಸ್ತುತ ವಿದ್ಯಮಾನಗಳು ಮುಂದಿನ ಉಜ್ವಲ ಪ್ರಗತಿಗೆ ಬುನಾದಿಯಾಗಿದೆ. ಯುವ ಜನತೆ ಇದರ ಪ್ರಯೋಜನ ಪಡೆಯಲೆಂದು ಹಾರೈಸುತ್ತೇನೆ ಎಂದರು.
ಕಾಶಿ ಶ್ರೀ ವಿಶ್ವನಾಥದೇವಾಲಯದ ಅಭಿವೃದ್ಧಿಯನ್ನು ಕಣ್ಣಾರೆ ನೋಡಿ ಆಶ್ಚರ್ಯಚಕಿತನಾಗಿದ್ದೇನೆ. ಈ ಮೊದಲು ಅಲ್ಲಿಗೆ 2 ಬಾರಿ ನಾನು ಭೇಟಿ ನೀಡಿದ್ದೇನೆ. ಅಂದಿಗೂ ಇಂದಿಗೂ ಇರುವ ವ್ಯತ್ಯಾಸ ಮತ್ತು ಅಲ್ಲಿನ ಅಭಿವೃದ್ಧಿಯನ್ನು ಕಂಡು ತುಂಬಾ ಸಂತೋಷಪಟ್ಟಿದ್ದೇನೆ. ಅದಕ್ಕಾಗಿ ಮಾನ್ಯ ಮೋದೀಜಿಯವರನ್ನು ಅಭಿನಂದಿಸುತ್ತಾ, ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಿಂದ ಶುಭಾಶಯವನ್ನುಕೋರುತ್ತೇನೆ. ಇನ್ನು ಮುಂದಿನ ದಿನಗಳಲ್ಲಿ ರಾಷ್ಟ್ರದ ಪವಿತ್ರ ಕ್ಷೇತ್ರಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳ್ಳಲ್ಲಿಎಂದು ಹಾರೈಸುತ್ತೇನೆ.
ನಮ್ಮ ಭವ್ಯಪರಂಪರೆಯ ಬಗ್ಗೆ ವಿದೇಶಿಯರಿಗೂ ಅಪಾರ ಅಭಿಮಾನ ಮತ್ತು ಗೌರವವಿದೆ. ಇಲ್ಲಿಂದ ವಿದೇಶಗಳಿಗೆ ಹೋದ ಆಧ್ಯಾತ್ಮಿಕ ಗುರುಗಳು, ನೇತಾರರು ಆರೋಗ್ಯ ಭಾಗ್ಯ ರಕ್ಷಣೆಯಲ್ಲಿ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯ ಮಹತ್ವವನ್ನು ಪ್ರಚಾರ ಮಾಡಿದ್ದಾರೆ. ಆರೋಗ್ಯ ರಕ್ಷಣೆಯಲ್ಲಿ ಸಿರಿಧಾನ್ಯಗಳ ಪಾತ್ರನೂ ಮಹತ್ವಪೂರ್ಣವಾಗಿದೆ. ಪ್ರಧಾನಿಯವರ `ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮ ವಿಶೇಷವಾಗಿ ಮಹತ್ವಪೂರ್ಣವಾಗಿದೆ ಎಂದು ಸಾರಿದ ಮಾನ್ಯ ಪ್ರಧಾನಮಂತ್ರಿಯವರನ್ನು ಅಭಿನಂದಿಸುತ್ತಾ ಭಾಷೆಗಳು ನಮ್ಮನ್ನು ವಿಭಜಿಸುವುದಿಲ್ಲ, ಬದಲಾಗಿ ಒಗ್ಗೂಡಿಸುತ್ತವೆ ಎಂದರು.
ನಮ್ಮಆಧ್ಯಾತ್ಮಿಕತೆ ಮತ್ತು ಪ್ರಸಿದ್ಧ ತೀರ್ಥಕ್ಷೇತ್ರಗಳ ಬಗ್ಗೆ ಯುವಜನತೆಗೆ ಅರಿವು, ಜಾಗೃತಿ ಮೂಡಿಸಬೇಕು. ಅವರಿಗೆ ಸೂಕ್ತ ಅವಕಾಶಗಳ ನಿರ್ಮಾಣ ಮಾಡಬೇಕು. ಕಾಶಿ, ಅಯೋಧ್ಯೆ, ಕೇದಾರನಾಥ ಮೊದಲಾದ ಪವಿತ್ರ ಕ್ಷೇತ್ರಗಳು ಅದ್ಭುತ ಸುಧಾರಣೆ ಕಂಡಿದೆ.
ಸನ್ಮಾನ್ಯ ರಾಷ್ಟ್ರಪತಿಗಳು`ಕಾಯಕವೇ ಕೈಲಾಸ’ ಎಂಬ ಕರ್ನಾಟಕದ ಶ್ರೀ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಬಗ್ಗೆ ಮಾನ್ಯ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ