ಮಂಗಳೂರು: 3.50 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ 11 ತಣ್ಣೀರುಬಾವಿ ಬಳಿ ದ್ವೀಪದಂತಿರುವ ಪ್ರದೇಶ ನಾಯರ್ ಕುದುರುವಿಗೆ ನೂತನ ಸಂಪರ್ಕ ಸೇತುವೆ ಹಾಗೂ ರಸ್ತೆ ನಿರ್ಮಾಣದ ಕಾಮಗಾರಿಗೆ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರು ಗುದ್ದಲಿ ಪೂಜೆ ನೆರವೇರಿಸುವ ಚಾಲನೆ ನೀಡಿದರು.
ಈ ಮೂಲಕ ಸ್ಥಳೀಯ ಮೀನುಗಾರರಿಗೆ ಮೀನುಗಾರಿಕೆ ನಡೆಸಲು, ದೋಣಿ ಸುಗಮವಾಗಿ ಸಂಚರಿಸಲು ಅನುಕೂಲವಾಗಿದೆ. ಇದರ ಜತೆಗೆ ಇಲ್ಲಿನ ನಾಯರ್ ಕುದ್ರು ದ್ವೀಪವನ್ನು 40 ಕೋಟಿ ರೂ.ವೆಚ್ಚದಲ್ಲಿ ಟೂರಿಸಂ ತಾಣವಾಗಿ ಆಗಿ ಪರಿವರ್ತಿಸಲು ಶಾಸಕರು ಕ್ರಮ ಕೈಗೊಂಡಿದ್ದಾರೆ. ಇದರ ಜತೆಗೆ ತಣ್ಣೀರುಬಾವಿ ಬೀಚ್ ನಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಶಾಸಕರು ಸೂಚಿಸಿದ್ದು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಪರಿವರ್ತನೆ ಆಗುವ ಎಲ್ಲಾ ಅವಕಾಶ ಕಲ್ಪಿಸಲಾಗುತ್ತಿದೆ.
ಈ ಸಂದರ್ಭ ಮನಪಾ ಸದಸ್ಯರಾದ ಸುನಿತಾ, ಬಿಜೆಪಿ ಮುಖಂಡ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಅರವಿಂದ್, ಪ್ರಮುಖರಾದ ಉಷಾ, ನಾಗರಾಜ್, ನಾಗವೇಣಿ, ಸಾರಿಕಾ, ರೇವತಿ, ಭಾರತಿ, ಪ್ರದೀಪ್, ನವೀನ್, ಉಮೇಶ್, ಹಸನ್, ವರದರಾಜ್, ಕ್ಲೌಡಿ, ನೆಲ್ಸನ್, ಡಾರ್ವಿನ್, ಸರಿತಾ ಶಶಿಕಲಾ, ದಿನೇಶ್, ಅನಿಲ್ ಗಿಲ್ಬರ್ಟ್, ಹರೀಶ್ ಇಲಿಯಾಸ್, ದೀಪಿಕಾ ಸುರೇಶ್, ಸುರೇಶ್ ಪುತ್ರನ್, ಸುನಿಲ್, ನಿಶ್ಚಿತ, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ