ಕೊಂಚಾಡಿ: ದಿವಂಗತ ಶ್ರೀಮತಿ ಸೀತಾ ಮತ್ತು ದಿ. ಶ್ರೀ ಏಕನಾಥ ಜೋಗಿ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷದಂತೆ ನಡೆಸಿಕೊಂಡು ಬರಲಾಗುತ್ತಿರುವ ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಆಟವು ಈ ಬಾರಿ ಫೆ.24ರ ಶುಕ್ರವಾರ ನಡೆಯಲಿದೆ.
ದೇರೆಬೈಲು ಕೊಂಚಾಡಿಯ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಬಳಿ ಭವ್ಯ ರಂಗ ಮಂಟಪದಲ್ಲಿ ಈ ಯಕ್ಷಗಾನ ಪ್ರಸಂಗದ ಬಯಲಾಟವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ದಶಾವತಾರ ಮಂಡಳಿಯವರು ಆಡಿ ತೋರಿಸಲಿದ್ದಾರೆ.
ದೇವಿ ಬೇಕರಿ, ದೇವಿ ಕೇಟರರ್ಸ್ ಮಾಲೀಕರು ಹಾಗೂ ದೇರೆಬೈಲ್ ವಾರ್ಡಿನ ಮಾಜಿ ಕಾರ್ಪೊರೇಟರ್ ಶ್ರೀ ರಾಜೇಶ್ ಅವರು ತಮ್ಮ ಹೆತ್ತವರ ಸ್ಮರಣಾರ್ಥ ಪ್ರತಿ ವರ್ಷ ಕಟೀಲು ಮೇಳದ ಹರಕೆಯ ಬಯಲಾಟವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಸಂಜೆ 5:30ರಿಂದ ಬಯಲಾಟ ಪ್ರಾರಂಭವಾಗಲಿದೆ. ರಾತ್ರಿ 7 ಗಂಟೆಯಿಂದ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಜರಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ