ಚಿಲಿಂಬಿ ಗುಡ್ಡೆ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಕಾಮತ್‌ ಶಿಲಾನ್ಯಾಸ

Upayuktha
0


ಮಂಗಳೂರು: ಮುಖ್ಯರಸ್ತೆಯನ್ನು ಚಿಲಿಂಬಿ ಗುಡ್ಡೆಗೆ ಸಂಪರ್ಕಿಸುವಂತಹ ರಸ್ತೆಯ ಮುಂದುವರಿದ ಕಾಮಗಾರಿಗೆ ಪಿಡಬ್ಲ್ಯುಡಿ ಇಲಾಖೆಯ ಮೂಲಕ ಅನುದಾನ ಒದಗಿಸಲಾಗಿದೆ. ಈ ಹಿಂದೆ ಇಂಟರ್‍‌ಲಾಕ್‌ ಅಳವಡಿಸಿದ್ದ ಈ ರಸ್ತೆಗೆ ಹೊಸದಾಗಿ ಕಾಂಕ್ರಿಟೀಕರಣ ಮತ್ತು ಚರಂಡಿ ನಿರ್ಮಾಣಕ್ಕೆ ಹಣಕಾಸು ಒದಗಿಸಿದ್ದು, ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಇಂದು ನೆರವೇರಿತು. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಯೋಜನೆಯ ವಿವರಗಳನ್ನು ನೀಡಿದರು.


ಈ ಕಾಮಗಾರಿಗಳು ಸಂಪೂರ್ಣ ಯಶಸ್ವಿಯಾಗಬೇಕು. ಕಾಮಗಾರಿ ಆರಂಭವಾದ ಬಳಿಕ ಈ ಭಾಗದ ನಿವಾಸಿಗಳಿಗೆ ತಾತ್ಕಾಲಿಕವಾಗಿ ಕೆಲವು ತೊಂದರೆಗಳಾಗಬಹುದು. ಆ ನಿಟ್ಟಿನಲ್ಲಿ ಸ್ಥಳೀಯ ನಿವಾಸಿಗಳು ಸಹಕರಿಸಬೇಕು ಎಂದು ಶಾಸಕರು ಮನವಿ ಮಾಡಿದರು.


ಈ ಭಾಗದ ಕಾರ್ಯಕರ್ತರು ಗಮನ ಸೆಳೆದು ಸಲ್ಲಿಸಿದ ಕೋರಿಕೆಯಂತೆ ಈ ಕಾಮಗಾರಿಗೆ ಅನುಮೋದನೆ ಹಾಗೂ ಹಣಕಾಸು ಮಂಜೂರು ಮಾಡಲಾಗಿದೆ. ಇದರ ಸದ್ಬಳಕೆಯಾಗಿ ಜನತೆಗೆ ಅನುಕೂಲವಾಗಬೇಕು ಎಂದು ಕಾಮತ್‌ ನುಡಿದರು.


ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕೀಲ ಕಾವ ಮತ್ತು ಕಿಶೋರ್ ಕೊಟ್ಟಾರಿ, ಬೂತ್ ಪ್ರಮುಖ ಸುಧಾಕರ್, ಪ್ರಸನ್ನ ದಡ್ಡಲ್ ಕಾಡ್, ಬೂತ್ ಅಧ್ಯಕ್ಷರಾದ ಜಯರಾಮ ಶೆಟ್ಟಿ, ಶ್ರೀನಿವಾಸ್ ಪೈ, ಬಿಜೆಪಿ ಮುಖಂಡರಾದ ಚರಿತ್ ಪೂಜಾರಿ, ಯಶ್ ರಾಜ್, ಜಯಚಂದ್ರ, ಸುನಂದ ಕೊಟ್ಟಾರ ಕ್ರಾಸ್, ರಾಕೇಶ್ ಕೊಟ್ಟಾರ ಕ್ರಾಸ್, ಉಮನಾಥ ಅಮೀನ್, ಮಾಲಾ ಆರ್, ಪ್ರೀತಮ್, ರವಿ ಕಾಪಿಕಾಡ್, ಮಹೇಶ್ ಶೆಣೈ, ನಾರಾಯಣ ಭಟ್, ಅನಂತ್ ಶೆಣೈ, ಸುಬ್ರಾಯ, ಆಶಾಲತಾ, ಸುನಂದ, ದಡ್ಡಲ್ ಕಾಡ್ ಮಹಿಳಾ ಮಂಡಳಿಯ ಸದಸ್ಯರು, ಹಿರಿಯರು ಕಾರ್ಯಕರ್ತ ಬಂಧುಗಳು ಸ್ಥಳೀಯರು ಉಪಸ್ಥಿತಿ ಇದ್ದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top