ಪ್ರೇಕ್ಷಕರ ಮನಗೆದ್ದ ದ್ವಂದ್ವ ಗಾಯನ

Upayuktha
0

ಬೆಂಗಳೂರು: ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಶ್ರೀ ಮಹಾಶಿವರಾತ್ರಿ ಮಹೋತ್ಸವ ಮಂಡಳಿಯು 20ನೇ ವರ್ಷದ ಶ್ರೀ ಮಹಾಶಿವರಾತ್ರಿ ಮತ್ತು ಶ್ರೀ ಮೀನಾಕ್ಷಿ ಸುಂದರೇಶ್ವರ ಕಲ್ಯಾಣ ಮಹೋತ್ಸವ-2023ರ ಪ್ರಯುಕ್ತ ಫೆಬ್ರವರಿ 9 ರಿಂದ 18ರ ವರೆಗೆ ಪ್ರತಿದಿನ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.  

ಫೆಬ್ರವರಿ 14 ರಂದು "ಭಕ್ತಿಗೀತಂ" ಗಾಯನ ಕಾರ್ಯಕ್ರಮದಲ್ಲಿ ಕು|| ಅದಿತಿ ನಾರಾಯಣ್ ಮತ್ತು ಕು|| ಕವನ ಕೋಗಿಲೆ ಅವರು ವಿಘ್ನನಿವಾರಕನಾದ ಗಣೇಶನ ಮೇಲೆ ಶ್ರೀ ಕನಕದಾಸರು ರಚಿಸಿದ "ನಮ್ಮಮ್ಮ ಶಾರದೆ" ಎಂಬ ಕೃತಿಯೊಂದಿಗೆ ತಮ್ಮ ಕಾರ್ಯಕ್ರಮವನ್ನು ಆರಂಭಿಸಿ, "ಭೋ ಶಂಭೋ" (ದಯಾನಂದ ಸರಸ್ವತಿ ಸ್ವಾಮೀಜಿ), "ವರದಪುರ ನಿವಾಸಿನಿ" (ಶ್ರೀಧರ ಸ್ವಾಮೀಜಿ), "ನಮೋ ಪಾರ್ವತಿ ಪತಿನುತ ಜನಪರ ನಮೋ ವಿಶಾಲಾಕ್ಷ" (ಶ್ರೀ ವ್ಯಾಸರಾಜರು) ಹೀಗೆ ಇನ್ನೂ ಅನೇಕ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇವರಿಗೆ ವಾದ್ಯ ಸಹಕಾರದಲ್ಲಿ, ವಿ|| ಅನಿರುದ್ಧ ವಾಸುದೇವ ಮೃದಂಗ ವಾದನದಲ್ಲಿ, ವಿ|| ರಾಘವೇಂದ್ರ ಶೃಂಗೇರಿ ಕೊಳಲು ವಾದನದಲ್ಲಿ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಎಲ್ಲಾ ಕಲಾವಿದರಿಗೆ ಶಾಲು ಹೊದಿಸಿ ಸನ್ಮಾನಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top