ಮಂಗಳೂರು: 20 ಲಕ್ಷ ರೂ ಅನುದಾನದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಮಂದಿರ ಮತ್ತು ಶಾಲೆಯ ಬಳಿ ಶಾಸಕರ ಅನುದಾನದಲ್ಲಿ ಹೈಮಾಸ್ಟ್ ಲೈಟ್ ಮತ್ತು ಈಶ್ವರಕಟ್ಟೆ ಬಸ್ ಸ್ಟ್ಯಾಂಡ್ ಎದುರುಗಡೆ ಕಾಂಕ್ರೀಟ್ ರಸ್ತೆಯನ್ನು ಶಾಸಕರಾದ ಡಾ. ವೈ.ಭರತ್ ಶೆಟ್ಟಿಯವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಮೂಲ್ಯ, ಸದಸ್ಯರಾದ ಉದಯ ಆರ್ ರಾವ್, ಸುನೀತಾ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಿಶ್ವನಾಥ ಶೆಟ್ಟಿ, ಕೊಳಂಬೆ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುಕೇಶ್ ಮಾಣೈ, ಮಂದಿರದ ಅಧ್ಯಕ್ಷರಾದ ಎಂ ನರ್ಸಿಂಗ ರೈ, ಪಕ್ಷದ ಪ್ರಮುಖರಾದ ಅಮೃತ್ ಲಾಲ್ ಡಿ ಸೋಜಾ, ಸುರೇಶ್ ಅಮೀನ್ ಈಶ್ವರ ಕಟ್ಟೆ, ರಾಜೇಂದ್ರ ಕಿನ್ನಿ ಕಂಬಳ, ರಾಮಚಂದ್ರ ಕಲ್ಲೂರಾಯ, ರಾಮಕೃಷ್ಣ ರಾವ್, ಜಯರಾಮ ಪೂಜಾರಿ ಅದ್ಯಪಾಡಿ, ಸುಧಾಕರ್ ಕೊಳಂಬೆ, ರೋಹಿತ್. ಸತ್ಯನಾರಾಯಣ ಭಟ್, ವಿಶ್ವನಾಥ ಶೆಟ್ಟಿ ಕೌಡೂರು, ದಿನೇಶ್ ರಾವ್, ಶ್ರೀನಿವಾಸ, ಗಂಗಯ್ಯ ಕುಲಾಲ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ